ಉಡುಪಿಯ ಎಸ್.ಎಮ್.ಎಸ್.ಪಿ. ಸಂಸ್ಕೃತಕಾಲೇಜಿನ ೧೧೮ನೇ ವಾರ್ಷಿಕೋತ್ಸವ
Kemmannu News Network, 05-01-2023 16:06:31
ಉಡುಪಿಯ ಎಸ್.ಎಮ್.ಎಸ್.ಪಿ. ಸಂಸ್ಕೃತಕಾಲೇಜಿನ ೧೧೮ನೇ ವಾರ್ಷಿಕೋತ್ಸವವು ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ದಿನಾಂಕ ೦೪/೦೧/೨೦೨೩ ರಂದು ನೆರವೇರಿತು. ಸಭೆಯಲ್ಲಿ ಪರಮಪೂಜ್ಯರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಧ್ಯಕ್ಷತೆಯನ್ನು ವಹಿಸಿ ಆಶೀರ್ವದಿಸುತ್ತಾ ಮಧ್ವಾಚಾರ್ಯರ ಗುರುಗಳಾದ ಅಚ್ಯುತಪ್ರಜ್ಞಾಚಾರ್ಯರು ಉಡುಪಿಯಲ್ಲಿ ಹಿಂದಿನಿಂದಲೂ ತತ್ತ್ವವಾದದ ಶಾಲೆಯನ್ನು ಆರಂಭಿಸಿದ್ದರು. ಅದನ್ನೇ ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಪಾಠಶಾಲೆಯು ಬೋಧಿಸುತ್ತಿದೆ. ಪರಮಾತ್ಮನು ತ್ರೈಕಾಲಿಕವಾಗಿಯೂ ಸತ್ಯನಾದವನು. ಅವನನ್ನು ತಿಳಿಸುವ ಭಾಷೆಯಾದ ಸಂಸ್ಕೃತ ಭಾಷೆಯೂ ಕೂಡ ಎಂದಿಗೂ ಬದಲಾವಣೆಯಾಗದೇ ಎಲ್ಲಾ ಭಾಷೆಗಳ ತಾಯಿಯೆಂದೆನಿಸಿ ಸತ್ಯವಾಗಿದೆ. ಭಗವಂತನಿಗೂ ಸಂಸ್ಕೃತಕ್ಕೂ ಬಿಂಬ – ಪ್ರತಿಬಿಂಬ ಭಾವವು ಇದೆ ಎಂಬುವುದನ್ನು ಋಗ್ವೇದವು ಪ್ರತಿಪಾದಿಸುತ್ತಿದೆ. ಪ್ರತಿಯೊಂದು ಭಾಷೆಯಿಂದಲೂ ಭಗವಂತನನ್ನು ಸ್ತುತಿಸಬಹುದು ಅದು ಭಗವಂತನನ್ನು ತಲುಪುವುದು ಆದರೆ ಸಂಸ್ಕೃತದಲ್ಲಿ ಮಾಡಿದ ಪ್ರಾರ್ಥನೆಯು ಎಲ್ಲಾ ವಿಧವಾದ ಪ್ರಾರ್ಥನೆಗಳನ್ನೊಳಗೊಂಡಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯೋಪನ್ಯಾಸಕರಾಗಿ ಆಗಮಿಸಿದ ಡಾ. ತಿರುಮಲ ಕುಲಕರ್ಣಿಯವರು ಮಾತನಾಡುತ್ತಾ ಸಂಸ್ಕಾರಕ್ಕೂ ಸಂಸ್ಕೃತಕ್ಕೂ ಇರುವ ನಂಟನ್ನು ಹೇಳುತ್ತಾ ಸಂಸ್ಕಾರವನ್ನು ಬೆಳೆಸುವವರು ಸಂಸ್ಕೃತ ಅಧ್ಯಾಪಕರು ಎಂದರು. ಹಾಗೆಯೇ ನೂತನ ಶಿಕ್ಷಣನೀತಿಯನ್ನು ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಬೇಕಾದದ್ದನ್ನು ಕಲಿಕಾ ನೀತಿಯಲ್ಲಿ ಕಲಿಯಬಹುದು ಮತ್ತು ಅದನ್ನೇ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದರಲ್ಲಿ ಬಳಸಿಕೊಳ್ಳಬಹುದು. ವಿದೇಶಗಳಲ್ಲಿ ಕಂಪ್ಯೂಟರ್ ಬಳಕೆಯನ್ನು ಸಂಸ್ಕೃತಕ್ಕೆ ಸಂಬಂಧಪಟ್ಟು ಹೆಚ್ಚು ಹೆಚ್ಚು ಬಳಸಿಕೊಂಡಿದ್ದಾರೆ. ನಮ್ಮಲ್ಲಿಯೂ ಆ ಪ್ರವೃತ್ತಿಯು ಬೆಳೆಯಬೇಕು ಎಂದರು.
ಇನ್ನೋರ್ವ ಮುಖ್ಯ ಅಭ್ಯಾಗತರಾದ ಶ್ರೀನಿವಾಸ ಆಚಾರ್ಯರು ಮಾತನಾಡುತ್ತಾ ೧೯೬೩ನೇ ಇಸವಿಯಲ್ಲಿ ಪೇಜಾವರ ಸ್ವಾಮಿಗಳ ಪರ್ಯಾಯ ಅವಧಿಯಲ್ಲಿ ನಾವು ಉಡುಪಿಯಲ್ಲಿ ಪಾಠಶಾಲೆಯನ್ನು ಸೇರಿದೆವು. ಅಲ್ಲಿ ಋಗ್ವೇದ, ಶಾಸ್ತಪಾಠಗಳನ್ನು ಕಲಿಯುವ ಸಂದರ್ಭದಲ್ಲಿ ಆಗಿನ ಅಧ್ಯಾಪಕರಾದ ವಿದ್ವಾನ್ ಕಾಪು ಹಯಗ್ರೀವಾಚಾರ್ಯರ ಸಮಯಪ್ರಜ್ಞೆಯನ್ನು ಕೊಂಡಾಡಿ ಸಂಸ್ಕೃತವನ್ನು ಉದ್ಯೋಗಕ್ಕಾಗಿ ಓದದೇ ಆತ್ಮೋನ್ನತಿಗಾಗಿ ಓದಬೇಕು ಎಂದರು. ತಮ್ಮ ವಿದ್ಯಾರ್ಥಿಜೀವನದ ಕ್ಷಣಗಳನ್ನು ಮೆಲುಕುಹಾಕುತ್ತಾ ವಿದ್ಯಾರ್ಥಿಗಳಿಗೆ ಹಿತನುಡಿಯನ್ನು ಹೇಳಿದರು. ಮತ್ತೋರ್ವ ಅಭ್ಯಾಗತರಾದ ಶ್ರೀಮತಿ ಉಷಾ ಚಡಗರವರು ಮಾತನಾಡುತ್ತಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಖುಷಿ ಹಾಗೂ ಹೆಮ್ಮೆ ಆಗುತ್ತಿದೆ. ಇಲ್ಲಿ ನಾನಾತರಹದ ಶಾಸ್ತ್ರ ಪ್ರವೀಣರಾದ ಅಧ್ಯಾಪಕರು ನಾನಾ ಸಂಸ್ಕೃತದ ಭಾಗಗಳನ್ನು ಪಾಠಮಾಡುತ್ತಾರೆ. ನಾನು ಸಂಸ್ಕೃತ ಹಾಗೂ ಕನ್ನಡವನ್ನು ಇದೇ ಪಾಠಶಾಲೆಯಲ್ಲಿ ಕಲಿತೆ. ಸಾಮಾನ್ಯವಾಗಿ ಪಾಠಶಾಲೆಗಳಲ್ಲಿ ಅರವತ್ತರ ನಂತರ ಶಾಲೆಯಿಂದ ನಿವೃತ್ತಿಯನ್ನು ಪಡೆದರೆ ನಾನು ಅದೇ ವಯಸ್ಸಿನಲ್ಲಿ ಪಾಠಶಾಲೆಗೆ ಕಲಿಕೆಗಾಗಿ ಆಗಮಿಸಿದೆ. ಕಲಿಕೆಗೆ ವಯೋಮಿತಿಯ ಗಡುವಿಲ್ಲ ಎನ್ನುತ್ತಾ ನನಗೆ ಸಂಸ್ಕೃತದಲ್ಲಿ ವಿದ್ಯಾವಾರಿಧಿಯು ದೊರೆತದ್ದು ಗುರುಗಳಾದ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರ ಹಾಗೂ ಅಧ್ಯಾಪಕರ ದೆಸೆಯಿಂದ ಹಾಗೂ ಅನೇಕ ಮಹಿಳೆಯರು ಸಂಸ್ಕೃತವನ್ನು ಕಲಿಯಲು ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ವಾಸುದೇವ ಭಟ್ ಪೆರಂಪಳ್ಳಿಯವರನ್ನು ಕಾಲೇಜಿಗೆ ಮಾಡಿದ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿಗಳಾದ ವಿದ್ವಾನ್ ಗೋಪಾಲಜೋಯಿಸರು ಸ್ವಾಗತಿಸಿದರು. ಎಸ್.ಎಮ್.ಎಸ್.ಪಿ. ಸಭೆಯ ಕೋಶಾಧಿಕಾರಿಗಳಾದ ಚಂದ್ರಶೇಖರ ಆಚಾರ್ಯರು, ಕಾಲೇಜಿನ ಪ್ರಾಂಶುಪಾಲರಾದ ಸತ್ಯನಾರಾಯಣಾಚಾರ್ಯರು, ೨೦೨೧/೨೨ರ ವರದಿಯನ್ನು ವಾಚಿಸಿದರು. ಸಂಸ್ಕೃತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಲತಾ, ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ವಿದ್ವಾನ್ ಹೆರ್ಗ ಹರಿಪ್ರಸಾದರು ಹಾಗೂ ವಿದ್ವಾನ್ ಶ್ರೀನಿವಾಸಾಚಾರ್ಯರು ನಿವೃತ್ತ ಸಂಸ್ಕೃತ ಅಧ್ಯಾಪಕರು ಆದಿಚುಂಚನಗಿರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಉಷಾ ಚಡಗ ಹಾಗೂ ಪೂರ್ಣಪ್ರಜ್ಞವಿದ್ಯಾಪೀಠದ ಅಧ್ಯಾಪಕರಾದ ವಿದ್ವಾನ್ ಡಾ.ತಿರುಮಲ ಕುಲಕರ್ಣಿ ಇವರು ಸಭೆಯಲ್ಲಿ ಉಪಸ್ಥಿತರಿದ್ದರು. ವೇದಾಂತ ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಮತ್ತು ತಂಡ ವೇದಘೋಷವನ್ನು ನಡೆಸಿದರು. ನಿಖಿತಾ ಮತ್ತು ತಂಡ ಭಗವಂತನ ಗಾನವನ್ನು ಮಾಡಿದರು.ಡಾ. ಷಣ್ಮುಖ ಹೆಬ್ಬಾರರು ಕಾರ್ಯಕ್ರಮ ನಿರೂಪಿಸಿದರು.ಡಾ ಶಿವಪ್ರಸಾದ ತಂತ್ರಿಗಳು ಧನ್ಯವಾದಗಳನ್ನು ಸಮರ್ಪಿಸಿದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link