ಹೆಚ್ಚು ಉದ್ಯೋಗ ದೊರೆಯುವ ಕೈಗಾರಿಕಾ ಘಟಕಗಳಿಗೆ ಆರ್ಥಿಕ ನೆರವು ನೀಡಿ: ಸಚಿವೆ ಶೋಭಾ ಕರಂದ್ಲಾಜೆ


Richard D’Souza
Kemmannu News Network, 25-09-2023 17:16:26


Write Comment     |     E-Mail To a Friend     |     Facebook     |     Twitter     |     Print


ಉಡುಪಿ, ಸೆಪ್ಟಂಬರ್ 25  : ಜಿಲ್ಲೆಯಲ್ಲಿ ಯುವಜನರಿಗೆ ಹೆಚ್ಚು ಉದ್ಯೋಗ ದೊರೆಯುವಂತಹ ಆಹಾರ ಸಂಸ್ಕರಣಾ ಘಟಕ ಸೇರಿದಂತೆ ಮತ್ತಿತರ ಕೈಗಾರಿಕೆಗಳನ್ನು ಸ್ಥಾಪಿಸಲು ಆರ್ಥಿಕ ನೆರವನ್ನು ನೀಡಲು ಹೆಚ್ಚಿನ ಆದ್ಯತೆಯನ್ನು ಬ್ಯಾಂಕ್‌ಗಳು ನೀಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

 

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಬ್ಯಾಂಕ್‌ಗಳು ಜನಸ್ನೇಹಿಯಾಗಿ ಗ್ರಾಹಕರೊಂದಿಗೆ ವ್ಯವಹರಿಸಬೇಕು. ಸರಕಾರದ ಯೋಜನೆಗಳ ಫಲಾನುಭವಿಗಳು ಆರ್ಥಿಕ ನೆರವನ್ನು ಕೋರಿ ಬಂದ ಅರ್ಜಿಗಳನ್ನು ವಿಳಂಬವಿಲ್ಲದೇ ಅವರುಗಳನ್ನು ಬ್ಯಾಂಕ್‌ಗಳಿಗೆ ಅಲೆದಾಡಿಸದೇ ನಿಯಮಾನುಸಾರವಾಗಿ ವಿಲೇವಾರಿ ಮಾಡಿ, ನೆರವನ್ನು ಕಲ್ಪಿಸಬೇಕು ಎಂದರು.

  ಸರಕಾರದ ಸಬ್ಸಿಡಿ ಆಧಾರಿತ ಯೋಜನೆಗಳ ಆಯ್ಕೆಯಾಗಿ ವಿವಿಧ ಇಲಾಖೆಗಳಿಂದ ಬಂದ ಫಲಾನುಭವಿಗಳು ಇದರ ಲಾಭ ಪಡೆಯಲು ಬ್ಯಾಂಕ್‌ಗಳಿಗೆ ಯಾವೆಲ್ಲಾ ನಿಖರ ದಾಖಲೆಗಳನ್ನು ಹಾಜರುಪಡಿಸಬೇಕು, ಯಾವ ಕಾರಣಕ್ಕೆಲ್ಲಾ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂಬ ಸವಿವರವಾದ ಮಾಹಿತಿಗಳನ್ನು ಗ್ರಾಮ ಪಂಚಾಯತ್ ಕಚೇರಿಯ ಸೂಚನಾ ಫಲಕಗಳಲ್ಲಿ ಕರಪತ್ರಗಳನ್ನು ಪ್ರದರ್ಶಿಸಿದ್ದಲ್ಲಿ ವಿನಾಕಾರಣ ಗೊಂದಲಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು. 

ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳದ ಅವಕಾಶವನ್ನು ಒದಗಿಸಲು ಮುಂದಾಗುವುದರ ಜೊತೆಗೆ ಅವುಗಳು ದೊಡ್ಡ ಮಟ್ಟದಲ್ಲಿ ಬೆಳೆಸಲು ಇಲಾಖೆಯ ಅಧಿಕಾರಿಗಳು ಯೋಚಿಸಬೇಕು ಎಂದರು.

 

ಕೃಷಿ, ಮೀನುಗಾರಿಕೆಗಳಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಾಲಗಳನ್ನು ವಿತರಿಸಲು ಆದ್ಯತೆ ನೀಡಬೇಕು ಎಂದ ಅವರು, ಜಿಲ್ಲೆಯಲ್ಲಿ ಮೀನು ಉತ್ಪಾದನೆ ಹೇರಳವಾಗಿದ್ದರೂ, ಇಲ್ಲಿಂದ ವಿದೇಶಗಳಿಗೆ ರಫ್ತು ಆಗದೇ ನೆರೆ ರಾಜ್ಯ ಕೇರಳಕ್ಕೆ ಹೋಗಿ ಅಲ್ಲಿಂದ ಹೊರದೇಶಗಳಿಗೆ ಹೋಗುತ್ತಿವೆ. ಅದು ಇಲ್ಲಿಂದಲೇ ಆಗುವಂತೆ ಉತ್ತೇಜಿಸಬೇಕು ಎಂದರು.

   ಮುದ್ರಾ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಲು ಬಂದಾಗ ಅವುಗಳಲ್ಲಿ ಹೆಚ್ಚು ತಿರಸ್ಕಾರ ವಾಗುತ್ತಿವೆ ಎಂಬ ಬಗ್ಗೆ ಗಂಭೀರಬ ಆರೋಪ ಕೇಳಿ ಬರುತ್ತಿವೆ. ಅಲ್ಲದೇ ಈ ಯೋಜನೆಯು ನಿಂತು ಹೋಗಿದೆ ಎಂದು ಹೇಳುತ್ತಿರುವುದು ಸಹ ಕೇಳಿ ಬರುತ್ತಿದೆ. ಬ್ಯಾಂಕಿನವರು ಇದಕ್ಕೆ ಆಸ್ಪದ ನೀಡದೇ ಸರ್ಕಾರದ ನಿರ್ದೇಶನವನ್ನು ಸರಿಯಾಗಿ ಪಾಲಿಸಿ, ಈ ಯೋಜನೆಯಡಿ ಜನರಿಗೆ ನೆರವು ಒದಗಿಸಬೇಕು ಎಂದರು.

  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 52,675 ಕೋಟಿ ರೂ. ಗಳಷ್ಟು ವ್ಯವಹಾರ ನಡೆದು, ಶೇ. 9.08 ರಷ್ಟು ಪ್ರಗತಿ ಸಾಧಿಸಿದೆ. ಕಳೆದ ಬಾರಿಗಿಂತ 4386 ಕೋಟಿ ಹೆಚ್ಚಾಗಿದೆ ಎಂದರು.

  ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಬ್ಯಾಂಕ್‌ಗಳೂ ಶೇ. 108 ರಷ್ಟು ಪ್ರಗತಿ ಸಾಧಿಸಿವೆ. 173 ರಷ್ಟು ಗುರು ಇದ್ದು, 187 ರಷ್ಟು ಸಾಧನೆಯಾಗಿ 20.41 ಕೋಟಿ ರೂ. ಗಳಷ್ಟು ಉದ್ಯೋಗ ಸಾಲವಾಗಿ ನೀಡಲಾಗಿದೆ ಎಂದರು.

  ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ 2819 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಿ, ಮೊದಲನೇ ಹಂತದಲ್ಲಿ 4162 ಜನರಿಗೆ ಸಾಲ ವಿತರಿಸಿ, ರಾಜ್ಯದಲ್ಲಿಯೇ ಈ ಯೋಜನೆ ಅನುಷ್ಠಾನದಲ್ಲಿ ಮೊದಲನೇ ಸ್ಥಾನದಲ್ಲಿದೆ. ಎರಡನೇ ಹಂತದಲ್ಲಿ 2101 ಜನರಿಗೆ ಸಾಲ ವಿತರಿಸುವ ಗುರಿ ಇದ್ದು, ಈಗಾಗಲೇ 1702 ಜನರಿಗೆ ಸಾಲ ವಿತರಿಸಲಾಗಿದೆ ಎಂದರು. 

   ಸಭೆಯಲ್ಲಿ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಬೆಂಗಳೂರು ಎಫ್.ಐ.ಡಿ.ಡಿ ಸೆಕ್ಷನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಕ್ಸಿಕ್ಯುಟಿವ್ ತನು ನಂಜಪ್ಪ, ನಬಾರ್ಡ್ ಬ್ಯಾಂಕ್ ಸಂಗೀತಾ ಕಾರ್ಥಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರೀಜನಲ್  ಮ್ಯಾನೆಜರ್ ಮನೋಜ್ ಸಾಲಿಯಾನ್, ಕರ್ನಾಟಕ ಬ್ಯಾಂಕ್ನ ರೀಜನಲ್ ಮ್ಯಾನೆಜರ್ ರಾಜಗೋಪಾಲನ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ. ಪಿಂಜಾರ ಸ್ವಾಗತಿಸಿದರು.

Comments on this Article
Wilson Soares, Kemmannu Tue, September-26-2023, 12:06
In Practice it is impossible to establish any factory unit Udupi. I tried to establish a factory. I visited the various departments of DC office. Not a single soul is aware of any schemes. I Noticed all Govt employees are busy on Mobile Phones. They don’t have time, nor any knowledge about industry establishment. At Karnataka Industrial development office at Shivally-Manipal, the Dy Director was helpless. He told me I cannot help you. Only I can issue recommendation letter which may help as a attachment document for securing Municipal license. What ever the above article states is not a workable solution, to establish any industry in Karnataka that too Udupi is Impossible. Basically the Government machinery is not functioning. I visited the Village Panchayat Office to pay my TAX. I had to come back without payment TAX due to unavailability of receipt books with the Panchayat office. They told me to come after two months, as they ordered the books. On the other hand the Banks in Udupi, They are extremely scared to open their doors for business. If any businessman approach them to business loan They will ask his previous 4 generations unwanted documents.This meet is of no use.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Good Friday 2025 | St. Theresa Church, KemmannuGood Friday 2025 | St. Theresa Church, Kemmannu
Way of Cross | St. Theresa Church, KemmannuWay of Cross | St. Theresa Church, Kemmannu
Maundy Thursday | St. Theresa Church, KemmannuMaundy Thursday | St. Theresa Church, Kemmannu
Palm Sunday | St. Theresa Church, KemmannuPalm Sunday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Gregory D’Souza (79 years) | LIVE from KemmannuFinal Journey of Gregory D’Souza (79 years) | LIVE from Kemmannu
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Final Journey of Jacintha Serrao (66 years) | LIVE From SasthanFinal Journey of Jacintha Serrao (66 years) | LIVE From Sasthan
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್
Final Journey of Leo J. Crasto (97 years) | LIVE from Kemmannu, UdupiFinal Journey of Leo J. Crasto (97 years) | LIVE from Kemmannu, Udupi
Final Journey of Fedrick Lewis (67 years) | LIVE from SanthekatteFinal Journey of Fedrick Lewis (67 years) | LIVE from Santhekatte
Final Journey of Mr. Charles D’Souza (63 years) | LIVE from UdyavarFinal Journey of Mr. Charles D’Souza (63 years) | LIVE from Udyavar
Final Journey Of Richard Sequeira | Live From Barkur || Kemmannu channelFinal Journey Of Richard Sequeira | Live From Barkur || Kemmannu channel
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
0:24 / 2:30:40 NEW YEAR MASS 2025 | LIVE from Kemmannu | Diocese of Udupi0:24 / 2:30:40 NEW YEAR MASS 2025 | LIVE from Kemmannu | Diocese of Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi