ಭಾರತದ ಸಂವಿಧಾನ ಭಾರತ ದೇಶದ ಆತ್ಮ ಚರಿತ್ರೆಆತ್ರಾಡಿ ಅಮೃತಾ ಶೆಟ್ಟಿ


Richard D’Souza
Kemmannu News Network, 24-02-2024 17:24:18


Write Comment     |     E-Mail To a Friend     |     Facebook     |     Twitter     |     Print


 

ಉದ್ಯಾವರಒಂದು ದೇಶಕ್ಕೆ ಆತ್ಮಚರಿತ್ರೆ ಇದೆಯಾದರೆ ,ಅದರ ಒಂದು ತುಣುಕು ಪ್ರತಿಯೊಬ್ಬರ ಆತ್ಮ ಚರಿತ್ರೆ. ಹಾಗಾಗಿ ಅದು  ನಮ್ಮೆಲ್ಲರ ಆತ್ಮಚರಿತ್ರೆ. ನಿಟ್ಟಿನಲ್ಲಿ ಭಾರತ ದೇಶದ ಸಂವಿಧಾನ ನಮ್ಮೆಲ್ಲರ ಆತ್ಮ ಚರಿತ್ರೆ ಎಂದರೆ ಸಾಕಾಗೋಲ್ಲ. ಅದು ಭಾರತ ದೇಶದ ಆತ್ಮ ಚರಿತ್ರೆ .ಸಂವಿಧಾನದ ಮೂಲ ಆಶಯ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವುದು. ದೇಶದ ಐಕ್ಯತೆ ಉಳಿಸಿಕೊಳ್ಳುವ ಜವಾಬ್ದಾರಿ ಸಂವಿಧಾನ ನಮ್ಮೆಲ್ಲರಿಗೆ ಕೊಟ್ಟಿದೆ ವಿವಿಧ ಧರ್ಮ, ವಿವಿಧ ಜಾತಿ ,ವಿವಿಧ ಭಾಷೆ, ವಿವಿಧ ಸಂಸ್ಕೃತಿಗಳನ್ನು ಕಾಪಾಡಿಕೊಂಡು ದೇಶದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ ಬಹುತ್ವವನ್ನು ನಾವು ಕಾಪಾಡಿಕೊಳ್ಳಬೇಕು. ಬಹುವಚನವನ್ನು ಉಳಿಸಿಕೊಳ್ಳಬೇಕು. ಬಹುವಚನ ಭಾರತವನ್ನು ಉಳಿಸಿಕೊಳ್ಳುವುದಕ್ಕೆ ಸಂವಿಧಾನ ನಮಗೆ ದಾರಿ ತೋರಿಸುತ್ತದೆ. ಹಾಗಾಗಿ ನಮ್ಮ ಸಂವಿಧಾನ ದೇಶದ ಆತ್ಮಚರಿತ್ರೆ ಎಂದು ಸಾಮಾಜಿಕ ಕಾರ್ಯಕರ್ತೆ ಸಾಹಿತಿ ಆತ್ರಾಡಿ ಅಮೃತ ಶೆಟ್ಟಿ ಅವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸುವರ್ಣ ಸಂಭ್ರಮ ವರ್ಷದ ಫೆಬ್ರವರಿ ತಿಂಗಳ ಕಾರ್ಯಕ್ರಮವಾಗಿ ಉದ್ಯಾವರ ಸೈಂಟ್ ಪ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದಸಂವಿಧಾನ ತಿಳಿಯೋಣಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ನುಡಿದರು

 

ಅವರು ಮುಂದುವರಿಯುತ್ತಾ ಇಡೀ ಜಗತ್ತಿನಲ್ಲಿ ಭಾರತ ಮತ್ತು ಅಮೆರಿಕದಲ್ಲಿ ಲಿಖಿತ ಸಂವಿಧಾನವಿದೆ. ಅದರಲ್ಲಿ ಭಾರತದ ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು ಎಂದು ಜಗತ್ತು ಒಪ್ಪಿಕೊಂಡಿದೆ. ಏಕೆಂದರೆ ನಮಗೆ ಸಂವಿಧಾನ ಬೇರೆಯವರಿಂದ ಹೇರಲ್ಪಟ್ಟದ್ದಲ್ಲ. ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವಂತೆ ಸಂವಿಧಾನವನ್ನು ವಿ ಪಿಪಲ್ ಆಫ್ ಇಂಡಿಯಾ, ಭಾರತದ ಪ್ರಜೆಗಳಾದ ನಾವು ಅದನ್ನು ನಮಗೆ ನಾವು ಅರ್ಪಿಸಿಕೊಂಡಿದ್ದೇವೆ .ಅಲ್ಲದೆ ಅದು ದೇಶ ಬಹುತ್ವವನ್ನು ಕಾಪಾಡಿಕೊಂಡು ಬಂದಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು  ರಚಿಸಿದ್ದು ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತೆಯ ತಳಪಾಯದ ಮೇಲೆ. ಅವರೇ ಹೇಳುವಂತೆ ನಾನು 25 ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಭ್ಯಾಸಿದ್ದು  ಸಂವಿಧಾನ ರಚನೆಗೆ ಸುಲಭವಾಯಿತು ಎಂದು .ಅವರ ಆಶಯಕ್ಕೆ ಭಂಗ ಬರದಂತೆ ಸಂವಿಧಾನದ ಮೂಲ ತತ್ವಕ್ಕೆ ವ್ಯತ್ಯಾಯವಾಗದಂತೆ ನಾವು ಅದನ್ನು ಉಳಿಸಿಕೊಳ್ಳಬೇಕು. ನಾವು ಹಿರಿಯರು ಬೇಕಾದಷ್ಟು ತಪ್ಪುಗಳನ್ನು ಮಾಡಿ ಮಕ್ಕಳೇ ನಿಮ್ಮ ಹೆಗಲಿಗೆ ಅದನ್ನು ದಾಟಿಸಿದ್ದೇವೆ .ಆದರೆ ನೀವು ದಯಮಾಡಿ ಅಂತ ತಪ್ಪುಗಳನ್ನ ಮಾಡಿ ಮುಂದಿನ ಪೀಳಿಗೆಗೆ ದಾಟಿಸ ಬೇಡಿ. ಹಾಗಾಗಿ ಸಂವಿಧಾನದ ಚೌಕಟ್ಟಲ್ಲಿ ಬದುಕಲು ಪ್ರಯತ್ನವನ್ನು ಮಾಡಿ. ಸಾಮಾಜಿಕ ರಾಜಕೀಯ ಮತ್ತು ಆರ್ಥಿಕ ನ್ಯಾಯ ದೇಶದ ಉಸಿರು. ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ನಮ್ಮ ಅಭಿವೃದ್ಧಿಗಾಗಿ  ಯಾವುದೇ ರಕ್ತ ಸುರಿಸದೆ ನಾವು ಪಡೆದುಕೊಳ್ಳಬಹುದಾದ ಆಯುಧವನ್ನು ಸಂವಿಧಾನ ನಮಗೆ ಕೊಟ್ಟಿರುತ್ತದೆ. ಸಂವಿಧಾನದ ಪೀಠಿಕೆಯನ್ನು ನಾವು ಪ್ರತಿಜ್ಞೆ ಯಾಗಿ ಸ್ವೀಕರಿಸಿದ್ದೇವೆ ಅದನ್ನು ಉಲ್ಲಂಘಿಸಿದಾಗ ನಮ್ಮಲ್ಲಿ ಕೀಳರಿಮೆ ತಳಮಳವಾಗ ಬೇಕು. ಆಗ ಮಾತ್ರ ಸಂವಿಧಾನ ಉಳಿಯುತ್ತದೆ. ಸಂವಿಧಾನದಲ್ಲಿರುವ ಹಕ್ಕು ನಮಗೆ ಸಿಕ್ಕಿಲ್ಲವಾದರೆ ಕಾನೂನಾತ್ಮಕವಾಗಿ ಅದನ್ನು ಪಡೆದುಕೊಳ್ಳುವ ಅವಕಾಶ ನಮಗೆ ಸಂವಿಧಾನ ನೀಡಿದೆ. ಸಮಾಜದಲ್ಲಿ ನಮ್ಮನ್ನು ನಾವು ಏನು ಎಂದು ನಿರೂಪಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ. ಸಂವಿಧಾನ ಯಾವತ್ತೂ ಕೂಡ ಪಕ್ಷ ಪಾತಿಯಾಗಿ ವರ್ತಿಸಿಲ್ಲ. ಸಂವಿಧಾನ ರಚಿಸುವಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಪಕ್ಷಪಾತಿಯಾಗಿದ್ದರು ಅನ್ನುವ ಮಾತಿಗೆ ಯಾವುದೇ ಅರ್ಥವಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಹಿತ ಕಾಯುವಲ್ಲಿ ಸಂವಿಧಾನ ಬದ್ಧವಾಗಿದೆ. ಸಂವಿಧಾನಕ್ಕೆ ಚ್ಯುತಿ ಬರದಂತೆ ಮುಂದಿನ ಪೀಳಿಗೆ ಇದನ್ನ ಉಳಿಸಬೇಕಾಗಿದೆ. ಸಂವಿಧಾನ ಒಳ್ಳೆಯವರ ಕೈಗೆ ಸಿಕ್ಕಿದರೆ ಅದು ಒಳ್ಳೆಯ ಸಂವಿಧಾನ .ಅದು ಕೆಟ್ಟವರ ಕೈಗೆ ಹೋದರೆ ಅದಕ್ಕಿಂತ ಕೆಟ್ಟ ಸಂವಿಧಾನ ಬೇರೆ ಇಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಾಗಾಗಿ ಮಕ್ಕಳೇ ಸಂವಿಧಾನ ಒಳ್ಳೆಯವರ ಕೈಗೆ ಸಿಗುವಂತೆ ತಾವು ಪ್ರಯತ್ನಿಸಬೇಕು ಎಂದು ನುಡಿದರು.

 

ಪ್ರಾಸ್ತಾವಿಕವಾಗಿ ಮಾತಾಡಿದ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ರವರು ಸಂವಿಧಾನವನ್ನು ಎಲ್ಲರೂ ಕೂಡ ಮಾತನಾಡಬಹುದು ಆದರೆ ತಾನು ಮಾತಾಡುವ ಸಂವಿಧಾನಕ್ಕೆ ಬದ್ಧರಾಗಿ ಬದುಕಬೇಕಾದದ್ದು ಕೂಡ ಕಾಲದ ಅನಿವಾರ್ಯತೆ. ನಾನು ಎಷ್ಟೋ ಸಭೆಗಳನ್ನು ನೋಡಿದ್ದೇನೆ ಸಂವಿಧಾನದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ವ್ಯಕ್ತಿಗಳು ವೈಯಕ್ತಿಕ ನೆಲೆಯಲ್ಲಿ ಸಂವಿಧಾನ ವಿರೋಧಿ ಸಂಘಟನೆಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಸಂವಿಧಾನದ ವಿರೋಧವಾಗಿ ಮಾತಾಡುತ್ತಾರೆ ಇಂಥ ಆಭಾಸಗಳು ಆಗಬಾರದು ಎಂಬ ಒಂದೇ ನೆಲೆಯಲ್ಲಿ ಸಂವಿಧಾನದ ಬಗ್ಗೆ ಮಾತಾಡುವ ಮತ್ತು ಸಂವಿಧಾನಕ್ಕೆ ಅಷ್ಟೇ ನಿಷ್ಠೆಯಿಂದ ಇರುವಂತಹ ಆತ್ರಾಡಿ ಅಮೃತ ಶೆಟ್ಟಿಯವರನ್ನು ನಾವು ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದೇವೆ ಮತ್ತು ಅವರು ಬಹಳ ಸರಳವಾಗಿ ಸಂವಿಧಾನದ ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತಾರೆ ಅನ್ನುವ ನಂಬಿಕೆ ನಮ್ಮದು. ವಿದ್ಯಾರ್ಥಿಗಳು ಅವರ ಮಾತುಗಳನ್ನು ನಿಮ್ಮ ಜೀವನದಲ್ಲಿ ಉಪಯೋಗಿಸಿಕೊಳ್ಳಿ ಎಂದರು

 

 ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು .ಸಂಸ್ಥೆಯ ಅಧ್ಯಕ್ಷರಾದ ತಿಲಕ್ ರಾಜ್ ಅವರು ಸ್ವಾಗತಿಸಿದರು . ಜೊತೆ ಕಾರ್ಯದರ್ಶಿ ಆಶಾವಾಸುರವರು ಸಂವಿಧಾನ ಪೀಠಿಕೆಯ ಪ್ರತಿಜ್ಞೆಯನ್ನು ಬೋಧಿಸಿದರು. ಸದಸ್ಯೆ ಮೇರಿ ಡಿಸೋಜಾ ಧನ್ಯವಾದವಿತ್ತರು. ಪ್ರಧಾನ ಕಾರ್ಯದರ್ಶಿ  ಅಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು .

 

ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ ವಾಣಿ ಪೆರಿಯೋಡಿಯವರಮಕ್ಕಳಿಗಾಗಿ ಸಂವಿಧಾನಕೃತಿಯನ್ನು ನೀಡಲಾಯಿತು

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey of Judith Lewis (91 years) | LIVE From KallianpurFinal Journey of Judith Lewis (91 years) | LIVE From Kallianpur
Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi