Indian Bunts Chamber of Commerce and Industry:IBCCI Youth Conference, Need to empower youth: K.C Shetty


Rons Bantwal
Kemmannu News Network, 07-04-2024 14:28:00


Write Comment     |     E-Mail To a Friend     |     Facebook     |     Twitter     |     Print


Indian Bunts Chamber of Commerce and Industry:IBCCI Youth Conference, Need to empower youth: K.C Shetty

MUMBAI, April.06: Indian Bunts Chamber of Commerce and Industry (IBCCI), a prestigious association of Buntara community businessmen, conducted an IBCCI Youth Conference under the chairmanship of IBCCI Chairman K.C Shetty (Kutpadi Chandra Shetty) at Aden Banquet Hall, Hotel Suncity, Andheri East, here on Saturday evening.

IBCCI Vice President S.B Shetty, Secretary Srinath Shetty, Treasurer Prasad Shetty, Joint Secretary Srinivas Shetty, Joint Treasurer Nishit Shetty and Directors Bharat Shetty (Adhiti), Balakrishna Shetty, Pradeep Shetty were present and K.C Shetty started the convention by lighting the lamp.

Senior and respected businessmen of the Bunta community such as Tonse Anand M.Shetty, Executive Chairman of Organic Industries Private Limited, B. Vivek Shetty, Executive Chairman of Vishwat Chemicals Limited, Triveni Group and Rupi Boss Executive Chairman CA.N.B Shetty and Chelladka Kusumodara Shetty (K.D Shetty), Executive Chairman of Bhavani Shipping Services India Pvt Ltd acted as resource persons to guide and advise the young entrepreneurs present.

K.C Shetty address on his presidential speech said that it is truly a pleasure to see ,such a dynamic young group of Bunts youth, representing the vibrant spirit and rich cultural heritage of our community. As we continue to grow our Chamber of Commerce, we have realized the importance of actively involving the Bunts youth in the  recent  Industrial Tour to Karnataka, highlighted the immense benefit of youth participation. there by gaining valuable insights and inspiration. Hence, we felt compelled to organize this Convention to encourage our next generation, nation builders to take the reins of the Chamber. Today, in our Chamber, we see the next young generation of Bunts actively involved in various activities. This Convention presents a unique opportunity for our Bunts youth to connect with the stalwarts of business in our community.

Anand Shetty said that it is very important to give exposure, build confident and groom the next generations to show the responsibility to take your organization to next level. I congratulate all of you young and bold stars for bunts for participating in this program. I know that all of you are ambitious, brilliant and preparing and ready to start journey for either to take over family business or to start new venture. Here I want states that  today you have fabulous platform that enable you to achieve multiples what have been achieve by your father.

Jeekhshith Kusumodara Shetty, a young entrepreneur and director of Bhavani Shipping Services India Pvt Ltd, was unanimously elected as the new coordinator of the IBCCI Youth Wing. Vice President S. B Shetty conducted the selection process and from among the office bearers, Working President K. C Shetty congratulated with flower boutique and handed over the power and released the IBCCI Bulletin.

Shantarama Shetty (Suncity), Advocate Ratnakar V.Shetty, P.K Shetty, Karthik C. Shetty, Siddesh Shetty, IBCCI Office Manager Prajnya Shetty and other members were present. Nishit Shetty welcomed,m introduced the guests and compared the program. Srinivas Shetty proposed vote of thanks.

ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ; ಐಬಿಸಿಸಿಐ ಯುವ ಸಮಾವೇಶ
ಯುವಜನತೆಯನ್ನು ಸಬಲೀಕರಣ ಗೊಳಿಸುವ ಅಗತ್ಯವಿದೆ : ಕೆ.ಸಿ ಶೆಟ್ಟಿ

ಮುಂಬಯಿ, ಎ.06: ಬಂಟ ಸಮೂದಾಯದ ಉದ್ಯಮಿಗಳ ಒಕ್ಕೂಟದ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ (ಐಬಿಸಿಸಿಐ) ಇಂದಿಲ್ಲಿ ಶನಿವಾರ ಸಂಜೆ ಅಂಧೇರಿ ಪೂರ್ವದ ಹೋಟೆಲ್ ಸನ್‍ಸಿಟಿ ಇದರ ಅಡೆನ್ ಬಾಂಕ್ವೆಟ್ ಸಭಾಗೃಹದಲ್ಲಿ ಐಬಿಸಿಸಿಐ ಕಾರ್ಯಾಧ್ಯಕ್ಷ ಕೆ.ಸಿ.ಶೆಟ್ಟಿ (ಕುತ್ಪಾಡಿ ಚಂದ್ರ ಶೆಟ್ಟಿ) ಅಧ್ಯಕ್ಷತೆಯಲ್ಲಿ ಐಬಿಸಿಸಿಐ ಯುವ ಸಮಾವೇಶವನ್ನು ನೇರವೇರಿಸಿತು.

ಐಬಿಸಿಸಿಐ  ಉಪಾಧ್ಯಕ್ಷ ಎಸ್.ಬಿ.ಶೆಟ್ಟಿ, ಕಾರ್ಯದರ್ಶಿ ಶ್ರೀನಾಥ್ ಶೆಟ್ಟಿ, ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ನಿಶಿತ್ ಶೆಟ್ಟಿ ಹಾಗೂ ನಿರ್ದೇಶಕರಾದ ಭರತ್ ಶೆಟ್ಟಿ (ಅಧಿತಿ), ಬಾಲಕೃಷ್ಣ ಶೆಟ್ಟಿ, ಪ್ರದೀಪ್ ಶೆಟ್ಟಿ, ಐಬಿಸಿಸಿಐ ಕಛೇರಿ ವ್ಯವಸ್ಥಾಪಕಿ ಪ್ರಜ್ಞಾ ಶೆಟ್ಟಿ ಹಾಗೂ ಸದಸ್ಯರು ಹಾಜರಿದ್ದು ಕೆ.ಸಿ.ಶೆಟ್ಟಿ ದೀಪ ಪ್ರಜ್ವಲಿಸಿ ಸಮಾವೇಶಕ್ಕೆ ಚಾಲನೆಯನ್ನಿತ್ತರು.

ನಮ್ಮ ಸಮುದಾಯದ ರೋಮಾಂಚಕ ಮನೋಭಾವ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಬಂಟ್ಸ್ ಯುವಕರ ಇಂತಹ ಕ್ರಿಯಾತ್ಮಕ ಯುವ ಸಮೂಹವನ್ನು ನೋಡುವುದು ನಿಜವಾಗಿಯೂ ಸಂತೋಷವಾಗಿದೆ. ನಾವು ಚೇಂಬರ್ ಆಫ್ ಕಾಮರ್ಸ್‍ನ್ನು ಬೆಳೆಸುವ ಜೊತೆಗೆ ಬಂಟ ಯುವಜನತೆಯನ್ನು ಸಕ್ರಿಯವಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮಹತ್ವವನ್ನು ಅರಿತು, ಯುವ ಬಂಟ್ಸ್ ವೇದಿಕೆಯ ರಚನೆಗೆ ಯೋಚಿಸಿದ್ದೆವು. ಐಬಿಸಿಸಿಐ ಇತ್ತೀಚೆಗಷ್ಟೇ ಬೆಂಗಳೂರುನಲ್ಲಿ ತನ್ನ ಕೈಗಾರಿಕ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿದ್ದು ಪಾಲ್ಗೊಂಡ ಯುವಜನತೆ ಅಪಾರ ಪ್ರಯೋಜನವನ್ನು ತನ್ನದಾಗಿಸಿದ್ದಾರೆ. ಅಲ್ಲಿ À ಅಮೂಲ್ಯವಾದ ಒಳನೋಟಗಳು ಮತ್ತು ಸ್ಫೂರ್ತಿಯನ್ನು ಪಡೆಯುವ ಅವಕಾಶ ಪಡೆದಿದ್ದಾರೆ. ಆದ್ದರಿಂದ, ನಮ್ಮ ಮುಂದಿನ ಪೀಳಿಗೆಯನ್ನು, ರಾಷ್ಟ್ರ ನಿರ್ಮಾಣಕಾರರನ್ನು ಚೇಂಬರ್‍ನ ಹಿಡಿತಕ್ಕೆ ತೆಗೆದುಕೊಳ್ಳಲು ಪೆÇ್ರೀತ್ಸಾಹಿಸಲು ಈ ಸಮಾವೇಶವನ್ನು ಆಯೋಜಿಸಲು ಈ ಯೋಜನೆ ಕೈಗೊಂಡಿದ್ದೇವೆ. ಇದು, ಇಂದು ನನಸಾಗಿದೆ. ನಾವೆಲ್ಲರೂ ಸೇರಿ ಮುಂದಿನ ಪೀಳಿಗೆಯ ಬಂಟ್ಸ್ ಉದ್ಯಮಿಗಳನ್ನು ಪೆÇೀಷಿಸುವ, ಸಹಾಯ ಮಾಡಿ ಪ್ರೇರೆಪಿಸುವ  ಪ್ರಯತ್ನ ನಡೆಸೋಣ. ಈ ಸಮಾವೇಶವು ಬಂಟ್ಸ್ ಯುವಜನತೆಗೆ ನಮ್ಮ ಸಮುದಾಯದ ಉದ್ಯಮದ ದಿಗ್ಗಜರೊಂದಿಗೆ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶ ಒದಗಿಸಲಿದೆ ಎಂದು ಕೆ.ಸಿ.ಶೆಟ್ಟಿ ತಿಳಿಸಿದರು.

ಬಂಟ ಸಮುದಾಯದ ಹಿರಿಯ ಮತ್ತು ಪ್ರತಿಷ್ಠಿತ ಉದ್ಯಮಿಗಳಾದ ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ತೋನ್ಸೆ ಆನಂದ ಎಂ.ಶೆಟ್ಟಿ, ವಿಶ್ವಾತ್ ಕೆಮಿಕಲ್ಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಬಿ.ವಿವೇಕ್ ಶೆಟ್ಟಿ, ತ್ರಿವೇಣಿ ಸಮೂಹ ಮತ್ತು ರೂಪಾಯಿ ಬಾಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ| ಎನ್.ಬಿ ಶೆಟ್ಟಿ ಮತ್ತು ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಚೆಲ್ಲಡ್ಕ ಕುಸುಮೋದರ ಶೆಟ್ಟಿ (ಕೆ.ಡಿ.ಶೆಟ್ಟಿ) ಸಂಪನ್ಮೂಲವ್ಯಕ್ತಿಗಳಾಗಿ ಉಪಸ್ಥಿತ ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಿ ಸಲಹಿದರು.

ಐಬಿಸಿಸಿಐ ಯುವ ವಿಭಾಗಕ್ಕೆ ನೂತನ ಸಂಯೋಜಕರನ್ನಾಗಿ ಯುವೋದ್ಯಮಿ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಜೀಕ್ಷಿತ್ ಕುಸುಮೋದರ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು. ಉಪಾಧ್ಯಕ್ಷ ಎಸ್.ಬಿ.ಶೆಟ್ಟಿ ಆಯ್ಕೆಪ್ರಕ್ರಿಯೆ ನಡೆಸಿದ್ದು ಪದಾಧಿಕಾರಿಗಳನ್ನೊಳಗೊಂಡು ಕಾರ್ಯಾಧ್ಯಕ್ಷ ಕೆ.ಸಿ.ಶೆಟ್ಟಿ ಪುಷ್ಪಗುಪ್ಛವನ್ನಿತ್ತು ಅಭಿನಂದಿಸಿ ಅಧಿಕಾರ ಹಸ್ತಾಂತರಿಸಿದರು ಹಾಗೂ ಐಬಿಸಿಸಿಐ ಬುಲೆಟಿನ್ ಬಿಡುಗಡೆ ಗೊಳಿಸಿದರು.

ಆನಂದ ಶೆಟ್ಟಿ ಮಾತನಾಡಿ ಐಬಿಸಿಸಿಐ ಸಂಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ರೂಪಿಸಲು ನಡೆಸಿದ ಅಲೋಚನೆ ಪ್ರಶಂಸನೀಯ. ನಮ್ಮ ಭಾವೀ ಜನಾಂಗಕ್ಕೆ ಮಾನ್ಯತೆ ನೀಡುವುದು, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ಮತ್ತು ವರಿಸುವುದು ಬಹಳ ಮುಖ್ಯ. ಯುವಜನತೆಯು  ಮಹತ್ವಾಕಾಂಕ್ಷೆ ಉಳ್ಳವರು ಮತ್ತು ಕುಟುಂಬದ ವ್ಯವಹಾರ ಮುನ್ನಡೆಸಿಕೊಳ್ಳಲು ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸಲು ಸಿದ್ಧರಾಗಿರುವಿರಿ. ಈ ಉದ್ಯಮಶೀಲ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿರುವಿರಿ ಎಂದು ನನಗೆ ತಿಳಿದಿದೆ. ಇಂದು ನೀವು ಅಸಾಧಾರಣ ವೇದಿಕೆಯನ್ನು ಹೊಂದಿದ್ದೀರಿ ಅದು ನಿಮ್ಮ ಮಾತಾಪಿತರು, ಪೆÇೀಷಕರು ಸಾಧಿಸಿದಕ್ಕಿಂತ ದ್ವಿಗುಣಗಳನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವ ಬಂಟ್ಸ್ ಮತ್ತು ದಿಟ್ಟ ತಾರೆಯರನ್ನು ನಾನು ಅಭಿನಂದಿಸುತ್ತೇನೆ ಎಂದರು.

ಬಂಟರು ಗುಣಮಟ್ಟವುಳ್ಳ ಮಹಾನ್ ನಾಯಕರಾಗಿದ್ದು ಸಂಧಾನಕಾರಾಗಿಯೂ ಗುರುತಿಸಿ ಕೊಂಡಿದ್ದಾರೆ. ಬಂಟರು ಸರ್ವೋತ್ಕೃಷ್ಟ ಉದ್ಯಮಿಗಳಾದರೂ ಸ್ವಂತಿಕೆಯ ಬಂಟ್ಸ್ ಬ್ರ್ಯಾಂಡ್ ಹೊಂದಿಲ್ಲ. ಇದನ್ನು ಯುವ ಬಂಟರು ಸಾಬೀತು ಮಾಡಬೇಕಾಗಿದೆ. ನಾವೂ ವೈಯುಕ್ತಿಕವಾಗಿ ಅಲ್ಲ sಸಾಮೂಹಿಕವಾಗಿ ಒಗ್ಗಟ್ಟು ಸಾಧಿಸಿದಾಗ ಇದೆಲ್ಲವೂ ಸಾಧ್ಯವಾಗುವುದು ಎಂದು ಬಿ.ವಿವೇಕ್ ಶೆಟ್ಟಿ ತಿಳಿಸಿದರು.

ಎನ್.ಬಿ ಶೆಟ್ಟಿ ಮಾತನಾಡಿ ಸದ್ಯ ಅಖಂಡ ಭಾರತದಲ್ಲಿ ಸಾಕಷ್ಟು ಉದ್ಯಮ, ಉದ್ಯೋಗ ಅವಕಾಶಗಳಿವೆ. ಸುಶಿಕ್ಷಿತ ಈಗಿನ ಯುವಜನತೆ ಸ್ವಉದ್ಯಮದಲ್ಲೂ ಪ್ರತಿಭಾನ್ವಿತರಾಗಿದ್ದಾರೆ. ಜಾಗತೀಕರಣದೊಂದಿಗೆ ಹೊಸ ಅವಿಷ್ಕಾರವುಳ್ಳ ಉದ್ಯಮಗಳನ್ನು ಸ್ವತಃ ನಿರ್ವಾಹಿಸುವ ಅರ್ಹತೆವುಳ್ಳವರಾಗಿದ್ದಾರೆ. ಆದರೆ ಹಣಕಾಸು ವ್ಯವಹಾರದಲ್ಲಿ ಜಾಗರುಕತರಾಗಿ ವ್ಯಯಿಸುವ ಅಗತ್ಯವಿದೆ. ಯುವ ಜನಾಂಗಕ್ಕೆ ವಯಸ್ಸು ವಿಷಯವಲ್ಲ ಬದಲಾಗಿ ಪರಿಶ್ರಮ, ಆರೋಗ್ಯದ ಕಾಳಜಿ ಅವಶ್ಯಕ. ಬ್ಯಾಂಕಿಂಗ್ ಸಂಬಂಧ ಎಲ್ಲಕ್ಕೂ ಮುಖ್ಯ ವಾಗಿದೆ ಎಂದು ಸಲಹಿದರು.  

ಕೆ.ಡಿ ಶೆಟ್ಟಿ ಮಾತನಾಡಿ ಜೈಶ್ರೀರಾಮನ ಜೊತೆಗೆ ಜೈ ಬಂಟ್ಸ್ ಕೂಡಾ ಹೇಳುವ ಅಗತ್ಯವಿದೆ. ನಮ್ಮ ಯುವ ಜನತೆ ವ್ಯವಹಾರಕ್ಕಾಗಿ ಇಂಗ್ಲೀಷ್ ಬಳಸಿದರೂ ಮಾತೃಭಾಷೆ ತುಳುವನ್ನೂ ಅಭ್ಯಾಸಿಸುವ ಅಗತ್ಯವಿದೆ. ಕಾರಣ ಮಾತೃಭಾಷೆಯಿಂದ ಮಾತ್ರ ಸಂಸ್ಕೃತಿ, ಸಂಸ್ಕಾರ, ಪರಂಪರೆಗಳನ್ನು ಉಳಿಸಿ ಬೆಳೆಸಲು ಸಾಧ್ಯ. ಜೊತೆಗೆ ನಮ್ಮ ಮಾತೃಸಂಸ್ಥೆ ಬಂಟ್ಸ್ ಸಂಘಕ್ಕೂ ಜೊತೆಯಾಗಬೇಕು ಎಂದು ಕೆ.ಡಿ.ಶೆಟ್ಟಿ ಹೇಳಿದರು.

ಜೀಕ್ಷಿತ್ ಶೆಟ್ಟಿ ಮಾತನಾಡಿ ಈ ಹುದ್ದೆಯು ನನ್ನಲ್ಲಿ  ಸಾಂಘಿಕತೆಯ ದೊಡ್ಡ ಜವಾಬ್ದಾರಿ ಹೆಚ್ಚಿಸಿದೆ. ಬಂಟರ ಯುವಶಕ್ತಿಗೆ ಪ್ರೇರೆಪಿಸಲು ಶ್ರಮಿಸುವೆ.  ಐಬಿಸಿಸಿಐನ ಕಟ್ಟಳೆಗಳಿಗೆ ಬದ್ಧನಾಗಿ ಯುವೋದ್ಯಮಿಗಳ ಸಹಾಯಕ್ಕಾಗಿ ಶ್ರಮಿಸುವೆ ಎಂದರು.

ಐಬಿಸಿಸಿಐ ಪರಿವಾರದಲ್ಲಿ ಅನೇಕ ಉನ್ನತ ಮಟ್ಟದ ಸಾಧಕರಿದ್ದಾರೆ. ಅವರ ಯಶಸ್ಸಿನ ಕಥೆಗಳು ಯುವಕರನ್ನು ಅನುಕರಿಸಲು ಪ್ರೇರಕಶಕ್ತಿ ಹೊಂದಿವೆ. ಪ್ರಸ್ತುತ ಯುವ ಪೀಳಿಗೆ ಮುಖ್ಯವಾಹಿನಿಗೆ ಅಥವಾ ಬೆಳಕಿಗೆ ಬರುತ್ತಿಲ್ಲ. ¨ಂದಲ್ಲಿ ಯುವಶಕ್ತಿಯು ತಮ್ಮ ಪೆÇೀಷಕರಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡಬಹುದು. ಅವರಿಗೆ ಮೌಲ್ಯಯುತವಾದ ಒಳನೋಟಗಳು, ಸಂಪನ್ಮೂಲಗಳನ್ನು ಒದಗಿಸಲು ಮತ್ತು ಅವರಲ್ಲಿ ಉದ್ಯಮಶೀಲತೆಯ ಮನೋಭಾವ ಹೆಚ್ಚಿಸಲು ಅವರನ್ನು ಸಾಮಾನ್ಯ ವೇದಿಕೆಗೆ ತರಬೇಕು ಎಂದು ಐಬಿಸಿಸಿಐ ಬಯಸುತ್ತದೆ. ಈ ಸಮಾವೇಶವು ಯುವಜನರಿಗೆ ಜಾಲಬಂಧ (ನೆಟ್‍ವರ್ಕ್) ರೂಪಿಸಲು ಅವಕಾಶಗಳನ್ನು ಒದಗಿಸುತ್ತದೆ. ರಾಷ್ಟ್ರೀಯ ಯುವ ನೀತಿಗೆ ಅನುಗುಣವಾಗಿ ಐಬಿಸಿಸಿಐ ಯುವಕರನ್ನು ಸದೃಢಗೊಳಿಸಿ ಅವರಲ್ಲಿನ ನಾಯಕತ್ವದ ಗುಣಗಳನ್ನು ಸುಧಾರಿಸಲು ಮತ್ತು ಸಹಭಾಗಿತ್ವ ಅವಕಾಶಕ್ಕಾಗಿ ಶ್ರಮಿಸುತ್ತಿದೆ ಎಂದು ಕಾರ್ಯದರ್ಶಿ ಶ್ರೀನಾಥ್ ಶೆಟ್ಟಿ ತಿಳಿಸಿದರು.

ನಿಶಿತ್ ಶೆಟ್ಟಿ ಪ್ರಸ್ತಾವನೆಗೈದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆಯನ್ನು ಹೊಂದಿದ್ದು ಆ ಪೈಕಿ  35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂದರೆ ಸುಮಾರು 66% ಜನತೆ ಇದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಯುವಕರನ್ನು ನಿರ್ಣಾಯಕ ಶಕ್ತಿ ಎಂದು ರಾಷ್ಟ್ರೀಯ ಜನಸಂಖ್ಯಾಶಾಸ್ತ್ರ ಗುರುತಿಸಿದೆ. ಆದ್ದರಿಂದ ಯುವಜನತೆಯ ನ್ನು ಸಬಲೀಕರಣಗೊಳಿಸುವ ಅನಿವಾಯ ್ತೆ ಇದೆ. ದೇಶದ ಪ್ರಗತಿ ಮತ್ತು ಯಶಸ್ಸಿಗೆ ಯುವಕರು ಅತ್ಯಗತ್ಯ. ಐಬಿಸಿಸಿಐ ತನ್ನ ಧ್ಯೇಯೋದ್ದೇಶದ ಭಾಗವಾಗಿ ತನ್ನ ಯುವ ಜನತೆಯನ್ನು ಪೆÇ್ರೀತ್ಸಹಿಸಲು ಬಯಸುತ್ತದೆ. ಇದು ಭವಿಷ್ಯದ ಬೆಳವಣಿಗೆಯ ಪಥವನ್ನು ನಿರ್ಧರಿಸಲಿದ್ದು ಅಮೇರಿಕಾ, ಯುರೋಪಿಯನ್ ರಾಷ್ಟ್ರಗಳು ಮತ್ತು ಚೀನಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಯಶಸ್ಸಿನಂತೆ ನಮ್ಮಲ್ಲಿನ ಅಭಿವೃದ್ಧಿಗೂ ಪೂರಕವಾಗಲಿದೆ. ಯುವಜನತೆಗೆ ಇದು ಸ್ವರ್ಣಯುಗವಾಗಿದೆ. ನಮ್ಮಲ್ಲಿನ ಯುವಬಂಟರು ಈ ವೇದಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿದ್ದಲ್ಲಿ ಸಾಧಕ, ಯಶಸ್ವಿ ಮತ್ತು ದಾರ್ಶನಿಕ ಉದ್ಯಮಿಗಳಗಲು ಸಾಧ್ಯ  ಎಂದರು.  

ಶಾಂತರಾಮ ಶೆಟ್ಟಿ (ಸನ್‍ಸಿಟಿ), ನ್ಯಾಯವಾದಿ ರತ್ನಾಕರ್ ವಿ.ಶೆಟ್ಟಿ, ಪಿ.ಕೆ ಶೆಟ್ಟಿ, ಕಾರ್ತಿಕ್ ಸಿ.ಶೆಟ್ಟಿ, ಸಿದ್ದೇಶ್ ಶೆಟ್ಟಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ನಿಶಿತ್ ಶೆಟ್ಟಿ ಅತಿಥಿsಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ಉಪಸ್ಥಿತ ಯುವೋದ್ಯಮಿಗಳ ಮತ್ತು ಪಾಲ್ಗೊಂಡಿದ್ದ ಆಸಕ್ತ ಯುವಜನತೆಯ ಪರಿಚಯ ನಡೆಸಿದರು. ಶ್ರೀನಿವಾಸ್ ಶೆಟ್ಟಿ ವಂದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi, Santhekatte Junction: Snap protest over inc [1 Comments]
View More

2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Obituary: Emilian Bridget D’Souza (80), Gudiyam, KemmannuObituary: Emilian Bridget D’Souza (80), Gudiyam, Kemmannu
Agricultural Land at Alevoor and Malpe (UDUPI) for Sale - Contact Direct to 9008199430.Agricultural Land at Alevoor and Malpe (UDUPI) for Sale - Contact Direct to 9008199430.
Final Journey of Judith Lewis (91 years) | LIVE From KallianpurFinal Journey of Judith Lewis (91 years) | LIVE From Kallianpur
Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi