Bangalore: Massive Fire Breaks Out at Footwear Factory


Jayapraksh Kini
Kemmannu News network, 30-09-2011 18:34:27


Write Comment     |     E-Mail To a Friend     |     Facebook     |     Twitter     |     Print


Bangalore, Sep 30: Paragon footwear factory at Peenya here was engulfed in a massive fire on Friday September 30.

As per reports, 40 fire squads from diferent places like Tumkur, Sarjapur, Doddaballapur among others were pressed into service. The incident occured at around 3 pm.

ಬೆಂಗಳೂರು:ಸೆ,30.ಸುಮನಹಳ್ಳಿ ಅಗ್ನಿ ದುರಂತ ಮರೆಯುವ ಮುನ್ನವೇ ಮತ್ತೂಂದು ಭಾರೀ ಅಗ್ನಿ ಅವಘಡ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಭವಿಸಿದೆ.ಆದರೆ ಈ ದುರ್ಘ‌ಟನೆಯಲ್ಲಿ ಯಾವುದೇ ಪ್ರಾಣಾಹಾನಿ ಉಂಟಾಗಿಲ್ಲ.ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಪ್ಯಾರಾಗಾನ್‌ ಎಲಾಸ್ಟ್ರಕ್ಸ್‌ ಪಾಲಿಮರ್ಸ ಕಂಪನಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್‌ ಈ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಿಸುಮಾರು 400ಕ್ಕೂ ಕಾರ್ಮಿಕರು ಪ್ರಾಣಾಪಾಯದಿಂದ ಪರಾಗಿದ್ದಾರೆ.


ಅಲ್ಲದೆ ಪ್ಯಾರಾಗಾನ್‌ ಗೋಡಾನ್‌, ತಯಾರಿಕಾ ಘಟಕದ ಸೇರಿದಂತೆ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಕೆನ್ನಾಲೆ ಚಾಚಿ ಧಗಧಗಿಸಿ ಉರಿದು ಹೋಯಿತು. ಕಾರ್ಖಾನೆಯೊಳಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.


ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಬಿದ್ದರು. ಬೆಂಗಳೂರು ಮಹಾನಗರವಲ್ಲದೆ ತುಮಕೂರು, ನೆಲ ಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಕಡೆಗಳಿಂದಲೂ ಸಹ ಅಗ್ನಿಶಾಮಕ ವಾಹನಗಳು ಆಗಮಿಸಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಮಧ್ಯಾಹ್ನ 4ಗಂಟೆಗೆ ಆರಂಭವಾದ ಬೆಂಕಿ ನಂದಿಸುವ ಆಪರೇಷನ್‌ ತಡ ರಾತ್ರಿವರೆಗೂ ಮುಂದುವರೆಯಿತು.


ಈ ಘಟನಾ ಸ್ಥಳಕ್ಕೆ ರಾಜ್ಯ ಅಗ್ನಿ ಶಾಮಕ ದಳದ ಡಿಜಿಪಿ ಇನ್‌ಫ್ಯಾಂಟ್‌, ನಿರ್ದೇಶಕ ಚೆಂಗಪ್ಪ, ಹಿರಿಯ ಅಧಿಕಾರಿಗಳಾದ ಈರಪ್ಪ ,ಹಂಪಗೊಳ ಹಾಗೂ ಉತ್ತರ ವಲಯ ಡಿಸಿಪಿ ಎಚ್‌.ಎಸ್‌.ರೇವಣ್ಣ ಸೇರಿ ಮತ್ತಿರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 


ಅಗ್ನಿ ದುರಂತ ಹೇಗೆ? ಪ್ಯಾರಾಗಾನ್‌ ಪಾಲಿಮರ್ಸ ಕಂಪನಿಯಲ್ಲಿ ಮಧ್ಯಾಹ್ನ 3.30ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಕಂಪನಿಯೊಳಗಿದ್ದ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡು ಅಗ್ನಿ ತೀವ್ರತೆ ಹೆಚ್ಚಾಗಿ ಕಟ್ಟಡ ತುಂಬಾ ವ್ಯಾಪಿಸಿದೆ. ಈ ಕಂಪನಿಯ ಜನರೇಟರ್‌ ಕೊಠಡಿಯಲ್ಲಿ ಶಾರ್ಟ್‌ ಸರ್ಕ್ನೂಟ್‌ ಆಗಿ ಬೆಂಕಿ ಕಿಡಿ ಕಾಣಿಸಿಕೊಂಡಿದ್ದು, ಇದು ದೊಡ್ಡ ಪ್ರಮಾಣದ ದುರಂತಕ್ಕೆ ಕಾರಣವಾಗಿದೆ. ಜನರೇಟರ್ ರೂಮಿನಲ್ಲಿ ಶಾರ್ಟ್‌ ಸರ್ಕ್ನೂಟ್‌ ಸಂಭವಿಸಿದಾಗ ಕೇಳಿದ ಶಬ್ಧದಿಂದ ದಿಗಿಲುಗೊಂಡ ಕಾರ್ಮಿಕರು ತಕ್ಷಣವೇ ಹೊರ ಬಂದು ಸುರಕ್ಷಿತರಾಗಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.


2ಸಾವಿರ ಕಾರ್ಮಿಕರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಪ್ಯಾರಾಗಾನ್‌ ಎಲಾಸ್ಟ್ರಕ್ಸ್‌ ಕಂಪನಿಯಲ್ಲಿ ತಯಾರಿಕಾ ಘಟಕ ಹಾಗೂ ಗೋಡಾನ್‌ ಸೇರಿ ಎರಡು ವಿಭಾಗದಲ್ಲಿ ಸುಮಾರು 2 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ಅಗ್ನಿ ಅವಘಡ ಸಂಭವಿಸಿದಾಗ ಕಾರ್ಖಾನೆಯಲ್ಲಿ 300-400ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅದೃಷ್ಟವಾಶಾತ್‌ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.


ಮುನ್ನಚ್ಚರಿಕೆ ವಹಿಸಿಲ್ಲ:- ಬೆಂಕಿ ದುರಂತ ತಡೆಗಟ್ಟುವ ಸಂಬಂಧ ಮುನ್ನಚ್ಚರಿಕೆ ಕ್ರಮಗಳನ್ನು ಪ್ಯಾರಾಗಾನ್‌ ಪಾಲಿಮರ್ಸ ಕಂಪನಿ ವಹಿಸದಿರುವುದೇ ಅಗ್ನಿ ಅವಘಡದ ತೀವ್ರತೆ ಹೆಚ್ಚಲು ಕಾರಣವಾಗಿದೆ ಎಂದು ರಾಜ್ಯ ಅಗ್ನಿಶಾಮಕ ದಳದ ನಿರ್ದೇಶಕ ಚೆಂಗಪ್ಪ ಹೇಳಿದ್ದಾರೆ.


ಅವರು ಬೆಂಕಿ ನಂದಿಸುವ ಕಾರ್ಯಾಚರಣೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಂಪನಿಯ ನಿರ್ಲಕ್ಷ್ಯ ತನದಿಂದ ಬೆಂಕಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ದೂರಿದರು.


ಪ್ಯಾರಾಗಾನ್‌ ಪಾಲಿಮರ್ಸ್‌ ಕಂಪನಿಯಲ್ಲಿ ಬೆಂಕಿ ನಂದಿಸಲು ಸಕಲ ಸಲಕರಣೆಗಳಿದ್ದರೂ ಕೂಡ ಅಗ್ನಿ ಅವಘಢದ ನಂದಿಸುವ ಕಲೆ ಗೊತ್ತಿರುವ ನೌಕರರು ಕಂಪನಿಯಲ್ಲಿ ಇರದೆ ಹೋದದ್ದು ದೊಡ್ಡ ದುರ್ಘ‌ಟನೆಗೆ ಎಡೆ ಮಾಡಿಕೊಟ್ಟಿದೆ ಎಂದು ಅಗ್ನಿಶಾಮಕ ದಳ ಅಧಿಕಾರಿ ಹಂಪಗೊಳ ಹೇಳಿದರು.


ಕಂಪನಿಯಲ್ಲಿ ಮೊದಲು ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಲೇ ಮುಂಜಾಗ್ರತೆ ತೆಗೆದುಕೊಂಡಿದ್ದರೆ ಭಾರೀ ಪ್ರಮಾಣದಲ್ಲಿ ಬೆಂಕಿ ವ್ಯಾಪ್ತಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

 


ಕಂಪನಿ ಮಾಲೀಕರ ಸಭೆ:- ಪ್ಯಾರಾಗಾನ್‌ ಪಾಲಿಮರ್ಸ ಕಂಪನಿಯ ಅಗ್ನಿ ದುರಂತ ಹಿನ್ನಲೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ಕಂಪನಿಗಳ ಮಾಲೀಕರ ಸಭೆ ಕರೆದು ಅಗ್ನಿ ಅವಘಡ ತಡೆಗಟ್ಟುವ ಮುನ್ನಚ್ಚರಿಕೆ ಕುರಿತು ಚರ್ಚಿಸಲಾಗುತ್ತದೆ ಎಂದು ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ತಿಳಿಸಿದರು.


ಪ್ಯಾರಾಗಾನ್‌ ಕಂಪನಿ ಮುನ್ನಚ್ಚಿರಿಕೆ ಕ್ರಮಗಳನ್ನು ವಹಿಸಿದ್ದರೆ ಇಂತಹ ದೊಡ್ಡ ದುರಂತ ಸಂಭವಿಸುತ್ತಿರಲಿಲ್ಲ. ಅಲ್ಲದೆ ವರ್ಷ ಹಿಂದೆ ಸಹ ಇದೇ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿತ್ತು ಎಂದು ತಿಳಿದು ಬಂದಿದೆ. ಹಾಗಾಗಿ ಅಗ್ನಿ ಅನಾಹುತಗಳ ಬಗ್ಗೆ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವು ಸಂಘ ಹಮ್ಮಿಕೊಳ್ಳಲಿದೆ ಎಂದು ಬಾಲಸುಬ್ರಹ್ಮಣ್ಯ ನುಡಿದರು.


ಘಟನೆ ಪ್ರಮುಖ ಅಂಶಗಳು

ಮಧ್ಯಾಹ್ನ 3.30ಗಂಟೆಗೆ ಕಾರ್ಖಾನೆಯಲ್ಲಿ ಅಗ್ನಿ ಸಂಭವಿಸಿದೆ.

40ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿ.

ಅಗ್ನಿಶಾಮಕದ ದಳದ ಸರಿಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗಿ.

ತುಮಕೂರು, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಿಂದಲೂ ಅಗ್ನಿ ಶಾಮಕ ವಾಹನಗಳು ಆಗಮನ.

ಎಲಾಸ್ಟ್ರಕ್ಸ್‌ ಪಾಲಿಮರ್ಸ ಕಂಪನಿಯ 3ಅಂತಸ್ತಿನ ಕಟ್ಟಡಕ್ಕೆ ಬೆಂಕಿ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ.

Comments on this Article
Jason Andrade, Bangalore / Mumbai Mon, October-3-2011, 1:47
Thanks Jayaprakash Kini This News Published. I Am Staying Working Near to Paragon Footwere Company.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

40th Wedding Anniversary Wishes to Dr. Frank and Mrs. Alice Fernandes40th Wedding Anniversary Wishes to Dr. Frank and Mrs. Alice Fernandes
ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.ಖಾಝಿ ಉಸ್ತಾದ್ ಅಹಮದ್ ಸಾಹೇಬ್ ನಿಧನ.
Free Eye Camp at Mount Rosary, KallianpurFree Eye Camp at Mount Rosary, Kallianpur
Kemmannu Church - Weekly Announcements.Kemmannu Church - Weekly Announcements.
Veez Konkani Weekly e-Magazine # 58Veez Konkani Weekly e-Magazine # 58
Mount Rosary Church Annoucement for the weekMount Rosary Church Annoucement for the week
An Appeal from vittal churchAn Appeal from vittal church
Foundation Stone Laying Ceremony of Nayaab Residency by B. M. Zaffer & fly, Dubai, UAE.Foundation Stone Laying Ceremony of Nayaab Residency by B. M. Zaffer & fly, Dubai, UAE.
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Pedruchi Chavi January 2019Pedruchi Chavi January 2019
Konkani writters workshop in Udupi on 17th Feb.Konkani writters workshop in Udupi on 17th Feb.
Delite Catering, SanthekatteDelite Catering, Santhekatte
Milarchi Laram - Issue Jan 2019Milarchi Laram - Issue Jan 2019
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Funeral Photographs:

Robert lewis (92), St. Theresa B ward, Kemmannu<font color=red><center>Funeral Photographs:<P> </font color=red></center> Robert lewis (92), St. Theresa  B ward, Kemmannu
ROZARICHO GAANCH DECEMBER 2018ROZARICHO GAANCH DECEMBER 2018
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India