ಕರಾವಳಿಯ ಸಾಹಿತ್ಯ, ಸಂಸ್ಕøತಿ, ಕಲೆಯ ಆಸರೆಯ ತಾಣ ‘ಅಂಗಣ’ ದ ಉದ್ಘಾಟನೆ


Leeladhar Baikampady
Kemmannu News Network, 25-11-2020 14:06:41


Write Comment     |     E-Mail To a Friend     |     Facebook     |     Twitter     |     Print


ಕರಾವಳಿಯ ಸಾಹಿತ್ಯ, ಸಂಸ್ಕøತಿ, ಕಲೆಯ ಆಸರೆಯ ತಾಣ ‘ಅಂಗಣ’ ದ ಉದ್ಘಾಟನೆ

ಚಿತ್ರಾಪುರ, ಕುಳಾಯಿ: ಮಂಗಳೂರು ತಾಲೂಕಿನ ಪಣಂಬೂರಿನಿಂದ ಸುರತ್ಕಲ್ ವರೆಗಿನ ಕಡಲ ತಡಿಯ ಪ್ರದೇಶದಲ್ಲಿ ಅತಿ ಅಗತ್ಯವೆನಿಸಿದ್ದ ಸಾಹಿತ್ಯ, ಸಂಸ್ಕøತಿ ಮತ್ತು ಕಲೆಗಳಂತಹ ಬಹುಮುಖಿ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನೀಯುವ ಆಸರೆಯ ತಾಣ ‘ಅಂಗಣ’ ದ ಔಪಚಾರಿಕ ಉದ್ಘಾಟನೆಯು ಇತ್ತೀಚೆಗೆ ಸ್ಥಳೀಯ ಚಿತ್ರಾಪುರ ಮಠದ ಸಭಾಂಗಣದಲ್ಲಿ ಸಂಸ್ಥೆಯ ಸ್ಥಾಪನೆಯ ರೂವಾರಿ ಲೀಲಾಧರ್ ಬೈಕಂಪಾಡಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ನೆರವೇರಿಸಿತು.

ಸ್ಥಳೀಯ ಪರಿಸರದ ಆಸಕ್ತರ ಬಹು ನಿರೀಕ್ಷೆಯ ಈ ‘ಅಂಗಣ’ದ ಉದ್ಘಾಟನೆಯನ್ನು À ಚಿತ್ರಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ದೀಪ ಪ್ರಜ್ವಲನೆಯೊಂದಿಗೆ ವಿಧ್ಯುಕ್ತವಾಗಿ ನೆರವೇರಿಸಿ, ಆನಂತರ ಸಂಸ್ಥೆಯ ನೂತನ ಲಾಂಛನದ ಅನಾವರಣ ಗೈದರು. ಹಾಗೂ ಆ  ಬಳಿಕ ಲೀಲಾಧರ್ ಬೈಕಂಪಾಡಿ ನೇತೃತ್ವದ ಚೊಚ್ಚಲ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಪದ ಪ್ರದಾನ ಗೈದು ಅವರನ್ನು ಆಶೀರ್ವದಿಸಿದರು.

“ಯಾವುದರ ಮೂಲ ಸದೃಢವಾಗಿರುತ್ತದೋ ಅದರ ಬೆಳವಣಿಗೆಯು ಆಸಾಧಾರಣವಾಗಿರುತ್ತದೆ. ಹಾಗಿರುವುದರಿಂದಲೇ ನಮ್ಮ ಸಾಹಿತ್ಯ, ಸಂಸ್ಕøತಿ ಕಲೆಗಳಂಥ ವಿವಿಧ ಪ್ರಕಾರಗಳು ಇಷ್ಟೊಂದು ಅದ್ವಿತೀಯವಾಗಿ ಬೆಳೆದು ಬಂದಿದೆ. ಚಿತ್ರಾಪುರz ಈ ದೈೀವೀ ಸನ್ನಿಧಾನವು ಹಿಂದಿನಿಂದಲೂ ವಿವಿಧ ಚಟುವಟಿಕೆಗಳ ಕ್ರಿಯಾಶೀಲ ಕೇಂದ್ರ. ಇಂದಿಲ್ಲಿ ಉದ್ಘಾಟನೆಗೊಂಡ ವೈವಿಧ್ಯಮಯ ಚಟುವಟಿಕೆಗಳ ತಾಣವೆನಿಸುವ ಅಂಗಣವೂ ಶೀಘ್ರ ವಿಸ್ತ್ರತಗೊಂಡು ಆಸಕ್ತರೆಲ್ಲರಿಗೂ ಮಹಾ ಆಡುಂಬೊಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ಟಷ್ಟ ಉದ್ದೇಶಗಳನ್ನು ಹೊಂದಿರುವ ಅಂಗಣಕ್ಕೆ ಮಠದ ಆಸರೆ ಸದಾ ಇರುವುದು” ಎಂದು ಪ್ರೋತ್ಸಾಹದ ನುಡಿಗಳನ್ನಾಡುತ್ತಾ ಆಶೀರ್ವಚನವನ್ನಿತ್ತರು.
ಮುಖ್ಯ ಅತಿಥಿಗಳಲ್ಲೋರ್ವರಾದ ಖ್ಯಾತ ಹಿರಿಯ ರಂಗನಟಿ ಗೀತಾ ಸುರತ್ಕಲ್, ಬೆಂಗಳೂರು ಅವರು ಮಾತನಾಡುತ್ತಾ, “ಚಿತ್ರಾಪುರ ಮಠವು ಅಂಗಣದ ಸ್ಥಾಪನೆಗೆ ಅಸರೆಯಾಗುವುದರ ಮೂಲಕ ಈಗಾಗಲೇ ಅದರ ಯೋಜಿತ ಚಟುವಟಿಕೆಗಳಿಗೆ ಓಂಕಾರ ಹಾಡಿದೆ. ಆದಷ್ಟು ಶೀಘ್ರದಲ್ಲಿ ಈ ಅಂಗಣ ಅಗಾಧವಾದ ಕಲಾ ಚಟುವಟಿಕೆಗಳಿಂದ ಸಕ್ರಿಯಗೊಂಡು ರಿಂಗಣಗೊಳ್ಳಲಿ” ಎಂದು ಸದಾಶಯಪೂರ್ಣವಾಗಿ ನುಡಿದರು.

ಮತ್ತೋರ್ವ ಮುಖ್ಯ ಅತಿಥಿಯಾದ ಉಪನ್ಯಾಸಕ ತಥಾ ಖ್ಯಾತ ಸಾಹಿತಿ ಅನಂತ ಪದ್ಮನಾಭ ಶಿಬರೂರು ಅವರು ಮಾತನಾಡುತ್ತಾ, “ವಿವಿಧ ಚಟುವಟಿಕೆಗಳನ್ನು ಏಕ ಛತ್ರದಡಿ ತರುವ ಉದ್ದೇಶದ ಅಂಗಣ ಒಂದು ವಿಶಿಷ್ಟ ವೇದಿಕೆ. ಸಾಹಿತ್ಯ, ಸಂಸ್ಕøತಿ, ಕಲೆಗಳೆಲ್ಲಾ ಪ್ರತ್ಯೇಕವಾಗಿ ಗುರುತಿಸಲ್ಪಟ್ಟಾಗ ಅದರ ಬೆಳಗುವಿಕೆ ಸೀಮಿತವೆನಿಸಿದರೆ, ಅವೆಲ್ಲವೂ ಒಂದೇ ವೇದಿಕೆಯಲ್ಲಿ ಮಿಳಿತವಾದಾಗ ಅದರ ಪ್ರಜ್ವಲನೆ ಅಪ್ರತಿಮವೆನಿಸುವುದು. ಹಾಗಾಗಿ ನಿಜಕ್ಕೂ ಇದೊಂದು ಸಾರ್ಥಕ ಪ್ರಯತ್ನ” ಎಂದು ಅಭಿಮಾನದ ನುಡಿಗಳನ್ನಾಡಿದರು.
ಇನ್ನೋರ್ವ ಮುಖ್ಯ ಅತಿಥಿಯಾದ ಉಪನ್ಯಾಸಕ ತಥಾ ಪ್ರಬುದ್ಧ ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ಅವರು “ಈ ಅಂಗಣದಲ್ಲಿ ನಡೆಯಬೇಕಾದ ಉತ್ಸವಗಳು ನಮ್ಮ ಅಂತರಂಗ ಬಿಂಬಿಸುವ ಭಾವ ತರಂಗಳನ್ನು ಮೀಟುವಂತಹ ನಮ್ಮ ಪ್ರಯತ್ನಗಳೆನಿಸಲಿ ಮತ್ತು ಆ ಮೂಲಕ ನಮ್ಮೊಳಗಿನ ಕಲೆ ಅರಳುವಂತಾಗಲಿ. ಅದರ ಪ್ರಸ್ತುತಿಯಲ್ಲಿ ಸೃಜನಶೀಲತೆ ಮೇಳೈಸಿ, ಅಂಗಣದ ಬಹುಮುಖ ವೇದಿಕೆಯೂ ಮತ್ತು ಇಲ್ಲಿ ಭಾಗಿಯಾಗುವವರೂ ಒಂದು ವಿಶಿಷ್ಟ ಆದರ್ಶವನ್ನು ಮೆರೆಯುವಂತಾಗಲಿ” ಎಂದು ಸಾಂದರ್ಭಿಕವಾಗಿ ನುಡಿದರು.

ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಯೋಗೀಶ್ ಕಾಂಚನ್ ಬೈಕಂಪಾಡಿ ಯವರು ರಚಿಸಿರುವ “ನಗ್ನ ಸತ್ಯ” ಕವನ ಸಂಕಲನವನ್ನು ಶ್ರೀಪಾದರು ಬಿಡುಗಡೆಗೊಳಿಸಿದರು. ಈ ಕೃತಿಯ ಪರಿಚಯವನ್ನು ಪ್ರವೀಣ್ ಬೈಕಂಪಾಡಿಯವರು ಗೈದರು.

ಕಾರ್ಯಕ್ರಮದ ಆರಂಭದಲ್ಲಿ ಸುರೇಶ್ ಕುಳಾಯಿ ಅವರು ಪ್ರಾರ್ಥಿಸಿದರೆ, ಶಿವರಾಂ ಪಣಂಬೂರು ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ತಥಾ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ಪ್ರಸ್ತಾವನೆ ಗೈದರು. ಪ್ರೊ. ಕೃಷ್ಣಮೂರ್ತಿ ಚಿತ್ರಾಪುರ ಅವರು ಆಶಯ ಭಾಷಣ ಮಾಡಿದರು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸತೀಶ್ ಕೋಟ್ಯಾನ್ ಅವರು ವಂದಿಸಿದರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸದಸ್ಯರು ಮತ್ತು ಪ್ರಸ್ತಾವಿತ ಪರಿಸರದ ಸಾಹಿತಿಗಳು ಮತ್ತು ಕಲಾವಿದರಿಂದ ಶ್ರೇಷ್ಠ ದರ್ಜೆಯ ಸಾಂಸ್ಕøತಿಕ ವೈಭವ ನೆರವೇರಿತು.

ಸಂಪೂರ್ಣ ಸಾಂಸ್ಕøತಿಕ ಕಾರ್ಯಕ್ರಮದ ನಿರೂಪಣೆಯನ್ನು ಶೈಲೇಶ್ ಬೈಕಂಪಾಡಿ ಅವರೂ ಹಾಗೂ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ವೃಂದಾ ಕೊನ್ನಾರ್ ಅವರೂ ಅತ್ಯಂತ ಯಶಸ್ವಿಯಾಗಿ ಗೈದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Video:Non-Resident Parishioners’ Day
View More

Obituary:Francis Fernandes, Gopalpura, Mount Rosary, KallianpurObituary:Francis Fernandes, Gopalpura, Mount Rosary, Kallianpur
Rozaricho Gaanch - December 2020Rozaricho Gaanch - December 2020
Congratulations to Prathiksha Shetty, KemmannuCongratulations to Prathiksha Shetty, Kemmannu
Congratulations to the winners of Panchayat Elections from Kemmannu Parish.Congratulations to the winners of Panchayat Elections from Kemmannu Parish.
Milarchi Lara December 2020Milarchi Lara December 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte