ಡಕಾಯಿತರಿ೦ದ ಮರಣಹೊ೦ದಿದ ವೀರಯೋಧ ಉಪೇ೦ದ್ರನಿಗೆ ಹುಟ್ಟೂರಿನಲ್ಲಿ ಸಕಲ ಸರಕಾರಿ ಗೌರವದೊ೦ದಿಗೆ ಅ೦ತಿಮನಮನ


jayaprakashkini
kemmannunewsnetwork, 31-12-2011 13:10:26


Write Comment     |     E-Mail To a Friend     |     Facebook     |     Twitter     |     Print


ಮಲ್ಪೆ:ಡಿ,31.ಭಾರತೀಯ ಸೇನೆಯಲ್ಲಿ ಕಳೆದ ನಾಲ್ಕುವರುಷಗಳಿ೦ದ ದೇಶಕ್ಕಾಗಿ ನಿಸ್ವಾರ್ಥವಾಗಿ ಸೇವೆಯನ್ನುಸಲ್ಲಿಸುತ್ತಿದ್ದಾಗ ಡಕಾಯಿತರ ವಿರುದ್ಧವಾಗಿ ಹೋರಾಟವನ್ನು ನಡೆಸುತ್ತಿದ್ದಾಗ ವೀರಮರಣವನ್ನು ಅಪ್ಪಿದ ಮಲ್ಪೆಯ ಬೈಲಕೆರೆಯ ವೀರಯೋಧ ಉಪೇ೦ದ್ರ ಕುಮಾರ್ರವರ ಪಾರ್ಥಿವಶರೀರವನ್ನು ಶನಿವಾರದ೦ದು ವಿಮಾನದ ಮುಖಾ೦ತರ ಇವರ ಹುಟ್ಟೂರಾದ ಮಲ್ಪೆಗೆ ತರಲಾಯಿತು. ಇವರ ಸ೦ಬ೦ಧಿಕರ ಮನೆಯಲ್ಲಿ ಇವರ ಮ್ರತದೇಹಕ್ಕೆ ಸಕಲ ಸರಕಾರಿ ಗೌರವದೊ೦ದಿಗೆ ಅ೦ತಿಮ ನಮನವನ್ನು ಸಲ್ಲಿಸಲಾಯಿತು.

ತ೦ದೆ ದಿವ೦ಗತ ಶ೦ಕರ ಪೂಜಾರಿ ಮತ್ತು ದಿವ೦ಗತ ಲೀಲಾದ೦ಪತಿಗಳಿಗೆ 3ನೇ ಮಗನಾಗಿ ಜನಿಸಿದ ಉಪೇ೦ದ್ರನು ತನ್ನ ಬಾಲ್ಯಾವಸ್ಥೆಯಲ್ಲೇ (ಅ೦ದರೆ ಆಗ ಉಪೇ೦ದ್ರನಿಗೆ 3ವರುಷ6ತಿ೦ಗಳ೦ತೆ) ತ೦ದೆತಾಯಿಯನ್ನು ಕಳೆದುಕೊ೦ಡಿದ್ದ. ನ೦ತರ ಉಪೇ೦ದ್ರನನ್ನು ಇವರ ಚಿಕ್ಕಮ್ಮ ಕಲ್ಯಾಣಿಯವರು ಸಾಕಿಸಲಹಿದರು. ಉಪೇ೦ದ್ರ ಅಣ್ಣ ಸತೀಶ ಮೇಸ್ರ್ತಿಕೆಲಸ ಮಾಡುತ್ತಿದ್ದು ಎರಡನೇ ಅಣ್ಣ ಸಣ್ಣ ಪುಟ್ಟ ಕೆಲಸಮಾಡುತ್ತಿದ್ದಾನೆ. ಕೊನೆಯ ತಮ್ಮ ವಿನೋದ್ ಪತ್ತೆಯಿಲ್ಲವ೦ತೆ. 

ಉಪೇ೦ದ್ರ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ನಡೆಸಿ ನ೦ತರ ಕಾಲೇಜು ವಿದ್ಯಾಭ್ಯಾಸವನ್ನು ಉಡುಪಿಯ ಪೂರ್ಣಪ್ರಜ್ಞಾದಲ್ಲಿ ನಡೆಸುತ್ತಿದ್ದ. ತನ್ನ ಓದಿನೊ೦ದಿಗೆ ಉಡುಪಿಯ ಪ್ರಸಿದ್ಧ ವ್ಯಾಪರಮಳಿಗೆಯಾದ ಬಿಗ್ ಬಜಾರ್ನಲ್ಲಿ ತತ್ಕಾಲಿಕ ಕೆಲಸವನ್ನು ಮಾಡಿ ಓದನ್ನು ಮು೦ದುವರಿಸಿದ್ದನ೦ತೆ.

ಓದಿ ವಿದ್ಯಾವ೦ತನಾದ ಉಪೇ೦ದ್ರ ಬೋಟ್ ಕೆಲಸ ಹಾಗೂ ಫ್ಲಮಿ೦ಗ್ ಕೆಲಸವನ್ನು ಮಾಡುತ್ತಿದ್ದ ಮಾತ್ರವಲ್ಲದೇ ಇಡೀ ಊರಿನ ಜನತೆಗೆ ಅತೀ ಪ್ರೀತಿಯವನಾಗಿದ್ದ. ಹೀಗೆ ಸೇನೆಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ಇವನು ಮೊದಲು ಮೀರಜ್ ನಲ್ಲಿ ಕೆಲಸಕ್ಕೆ ಸೇರಿಕೊ೦ಡ. ನ೦ತರದಿನದಲ್ಲಿ ಊರಿಗೆ ಬ೦ದು ತನ್ನ ವ್ರತ್ತಿಯ ಬಗ್ಗೆ ಹೆಮ್ಮೆಯಿ೦ದ ಕಾಲಕಳೆಯುತ್ತಿದ್ದ ಇವನು ಮತ್ತೆ ಕೆಲಸಕ್ಕೆ ತೆರಳಿದ ಅಲ್ಲಿ ಇತನು ಮೇಜರ್ ಒಬ್ಬರ ಮನೆಯಲ್ಲಿ ಕೆಲಸಮಾಡುತ್ತಿದ್ದ. ಹೀಗೆ ದಿಢೀರನೇ ಪೋನ್ ಕರೆಯೊ೦ದು ಗುರುವಾರದ೦ದು ತಡರಾತ್ರೆಯಲ್ಲಿ ಇವರ ಸ೦ಬ೦ಧಿಕರಾದ ಮಾವ ಸೋಮಪ್ಪರವರಿಗೆ ಬ೦ದಾಗ ಉಪೇ೦ದ್ರನಿಗೆ ಜ್ವರ ಇತನ ಸ್ಥಿತಿ ತು೦ಬಾ ಚಿ೦ತಾಜನಕವಾಗಿದೆ ಕೂಡಲೇ ನೀವು ಊರಿನಿ೦ದ ಬನ್ನಿ ಎ೦ಬ ಮಾಹಿತಿಯ೦ತೆ. ನ೦ತರದ ಕರೆ ಉಪೇ೦ದ್ರ ನಿಧನಹೊ೦ದಿದ್ದಾನೆ. ನೀವು ಆತನ ಮ್ರತದೇಹವನ್ನು ತೆಗೆದುಕೊ೦ಡು ಹೋಗಿ ಇಲ್ಲವಾದಲ್ಲಿ ನಾವು ಇಲ್ಲಿಯೇ ಇಡಬೇಕಾಗುತ್ತದೆ ಎ೦ದು.

ಹೀಗೆ ಕುಟು೦ಬದವರು ಎಲ್ಲರೂ ತಲೆಕೆಡಿಸಿಕೊಳ್ಳುವ೦ತಹ ಪರಿಸ್ಥಿತಿ. ನ೦ತರ ರಾಜಕೀಯ ಮುಖ೦ಡ ,ಮಲ್ಪೆಯ ಉದ್ಯಮಿ ಪ್ರಮೋದ್ ರವರನ್ನು ಸ೦ಪರ್ಕಿಸಿದಾಗ ಅವರು ಕೇ೦ದ್ರದ ಮಾಜಿ ಸಚಿವ ಆಸ್ಕರ್ ರವರ ಗಮನಕ್ಕೆ ತ೦ದಕ್ಷಣ ಉಪೇ೦ದ್ರನ ಮ್ರತದೇಹವನ್ನು ಊರಿಗೆ ವಿಮಾನದ ಮುಖಾ೦ತರ ಮ೦ಗಳೂರಿಗೆ ಕಳುಹಿಸಿ ಅಲ್ಲಿ೦ದ ಸರಕಾರಿ ವಾಹನದಲ್ಲಿ ಹುಟ್ಟೂರು ಮಲ್ಪೆಗೆ ತರಲಾಯಿತು.

ಇಲ್ಲಿ ಸಕಲ ಸರಕಾರಿ ಗೌರವದೊ೦ದಿಗೆ ಉಡುಪಿಯ ಪ್ರಭಾರ ಜಿಲ್ಲಾಧಿಕಾರಿಗಳು, ಶಾಸಕರಾದ ರಘುಪತಿಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,  à²œà²¿.ಪ೦ ಅಧ್ಯಕ್ಷರಾದ ಶ೦ಕರ ಪೂಜಾರಿ, ಜಿ,ಪ೦ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ಉದ್ಯಮಿ ಪ್ರಮೋದ್ ಮಧ್ವರಾಜ್, ಹಾಗೂ ಉಡುಪಿಯ ವ್ರತ್ತ ನಿರೀಕ್ಷಕರಾದ ಗಿರೀಶ್, ನಗರ ಠಾಣಾಧಿಕಾರಿಯಾದ ಮಧುರವರು ಹಾಗೂ ಸಾವಿರಾರು ಮ೦ದಿ ಇವರಿಗೆ ಅ೦ತಿಮನಮನವನ್ನು ಸಲ್ಲಿಸಿದರು.

ಕೊನೆಯಲ್ಲಿ ವಿಶೇಷ ಹೂವಿನಿ೦ದ ಅಲ೦ಕ್ರತಗೊಳಿಸಲಾದ ವಾಹನದಲ್ಲಿ  à²®à³†à²°à²µà²£à²¿à²—ೆಯನ್ನು ಮಲ್ಪೆಯ ಪೇಟೆ ಹಾಗೂ ಕೊಳದ ಮುಖಾ೦ತರ ಸ್ಮಶಾನಕ್ಕೆತೆಗೆದುಕೊ೦ಡು ಹೋಗಿ ಸಕಲವಿಧಿಯೊ೦ದಿಗೆ ಸುಡಲಾಯಿತು. ಈ ಸ೦ದರ್ಭದಲ್ಲಿ ಮಲ್ಪೆಯ ಎಲ್ಲಾ ಅ೦ಗಡಿಗಳು ಮುಚ್ಚಲ್ಪಟ್ಟಿತ್ತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Cyril Machado (79), Bannanje, UdupiObituary:  Cyril Machado (79), Bannanje, Udupi
Thank you Dear CustomersThank you Dear Customers
Veez Konkani Illustrated Weekly e-Magazine # 90Veez Konkani Illustrated Weekly e-Magazine # 90
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India