ಮಣಿಪಾಲದ:ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 4ಮ೦ದಿ ಸಾಧಕ ಗಣ್ಯರಿಗೆ ಹೊಸವರುಷದ ಪ್ರಶಸ್ತಿ ಪ್ರಧಾನ


jayaprakashkini
kemmannunewsnetwork, 01-01-2012 14:27:17


Write Comment     |     E-Mail To a Friend     |     Facebook     |     Twitter     |     Print


ಮಣಿಪಾಲ:ಜ,1.ಮಣಿಪಾಲ ವಿಶ್ವವಿದ್ಯಾನಿಲಯ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಉಡುಪಿ-ಮಣಿಪಾಲ ರೋಟರಿ ಕ್ಲಬ್‌ ಜಂಟಿಯಾಗಿ ಪ್ರತಿ ಹೊಸವರ್ಷದಂದು ನೀಡುವ ಸಾಧಕರ ಪ್ರಶಸ್ತಿಯನ್ನು ಈ ಬಾರಿ ನ್ಯಾಯಮೂರ್ತಿ ಕೆ.ಶಿವಶಂಕರ್‌ ಭಟ್‌, ಡಾ.ಎಸ್‌. ರಮಾನಂದ ಶೆಟ್ಟಿ, ಟಿ. ಮೋಹನದಾಸ ಪೈ ಮತ್ತು ರೋಟೇರಿಯನ್‌ ಮೋಹನ ಭಂಡಾರ್‌ಕಾರ್‌ ರವರುಗಳಿಗೆ ಮಣಿಪಾಲದ ವ್ಯಾಲಿವ್ಯೂ ಸಭಾಗ೦ಣದಲ್ಲಿ ಭಾನುವಾರದ೦ದು ಪ್ರಧಾನಮಾಡಲಾಯಿತು.

ಸಮಾರ೦ಭದಲ್ಲಿ ಕೆ.ಮುರಳೀಧರನ್, ರೋಟರಿ ಕ್ಲಬ್ 3180ರ ಜಿಲ್ಲಾ ಗವರ್ನರ್ ಎಚ್.ಎಲ್.ರವಿ, ಉಡುಪಿ-ಮಣಿಪಾಲದ ರೋಟರಿ ಕ್ಲಬ್ ನ ಅಧ್ಯಕ್ಷರಾದ ಬಾಲಕ್ರಷ್ಣ ಮದ್ದೋಡಿ, ಎಚ್.ಎಸ್,ಬಲ್ಲಾಳ್ ಹಾಗೂ ಕ್ರಷ್ಣರಾವ್ ರವರು ಭಾಗವಹಿಸಿದ್ದರು.

 

 

 

 

 

 

 

 

 

 

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹುಟ್ಟಿ, ದೂರದೂರುಗಳಲ್ಲಿ ನೆಲೆಸಿ ಅಥವಾ ಹೊರಗಿನಿಂದ ಈ ಜಿಲ್ಲೆಗಳಿಗೆ ಬಂದು ನೆಲೆಸಿ ಉದ್ಯೋಗ, ಉದ್ಯಮ, ವಾಣಿಜ್ಯ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ನಾಲ್ವರನ್ನು ಗುರುತಿಸಿ ಪ್ರತಿ ವರ್ಷ ಪುರಸ್ಕರಿಸಲಾಗುತ್ತದೆ. ಜನವರಿ 1ರಂದು ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಾಧಕರ ಕಿರು ಪರಿಚಯ ಇಲ್ಲಿದೆ.

ನ್ಯಾ|ಮೂ| ಕೆ. ಶಿವಶಂಕರ್‌ ಭಟ್‌

ದಕ್ಷಿಣ ಕನ್ನಡದ ದೂರದ ಮೂಲೆ ಕೋಣೆತೋಟದಲ್ಲಿ 1934ರಲ್ಲಿ ಜನಿಸಿದ ಶಿವಶಂಕರ್‌ ಭಟ್‌ ತಮ್ಮ ಸೇವಾ ನಿವೃತ್ತಿ ಕಾಲದಲ್ಲಿ ದಿಲ್ಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿದ್ದರು. ಹಲವಾರು ಎಡರು ತೊಡರುಗಳ ನಡುವೆಯೇ ಛಲದಿಂದ ಅವರು ತಮ್ಮ ಹೈಸ್ಕೂಲ್‌ ವಿದ್ಯಾಭ್ಯಾಸವನ್ನು ವಿವಿಧ ಕಡೆಗಳಲ್ಲಿ ನಡೆಸಿ, ಮಂಗಳೂರು ಅಲೋಶಿಯಸ್‌ ಕಾಲೇಜು ಮತ್ತು ಮದನಪಳ್ಳಿ ಕಾಲೇಜಿನಲ್ಲಿ ಪದವಿಗಳಿಸಿ, 1955ರಲ್ಲಿ ಮದರಾಸು ಕಾನೂನು ಕಾಲೇಜಿನಲ್ಲಿ ಪದವಿಗಳಿಸಿದರು.

 

ಬಳಿಕ ತಮ್ಮ ಅಣ್ಣ ಬೆಂಗಳೂರಿನಲ್ಲಿ ಹಿರಿಯ ನ್ಯಾಯವಾದಿಯಾಗಿದ್ದ ಜಿ.ಕೆ. ಗೋವಿಂದ ಭಟ್ಟ ಅವರಲ್ಲಿ ಕಿರಿಯ ವಕೀಲರಾಗಿ ವೃತ್ತಿ ಅನುಭವ, ನೈಪುಣ್ಯ ಗಳಿಸಿದರು. ಸಿವಿಲ್‌ ವ್ಯಾಜ್ಯಗಳು, ಸಾಂವಿಧಾನಿಕ ಪ್ರಶ್ನೆಗಳು, ತೆರಿಗೆ ತಕರಾರುಗಳು ಇತ್ಯಾದಿಗಳನ್ನು ನಿರ್ವಹಿಸುವಲ್ಲಿ ಅವರು ವಿಶೇಷ ತಜ್ಞತೆ ಗಳಿಸಿದರು. 1987ರಲ್ಲಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಕಠಿನ ಪರಿಶ್ರಮ ಹಾಗೂ ನ್ಯಾಯಪರತೆಯಿಂದ ಗೌರವಕ್ಕೆ ಪಾತ್ರರಾದರು. 1994ರಲ್ಲಿ ದಿಲ್ಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡು 1995ರಲ್ಲಿ ನಿವೃತ್ತರಾದರು. 1997ರ ವರೆಗೆ ಕರ್ನಾಟಕ ಆಡಳಿತ ನ್ಯಾಯಾಲಯದ ಅಧ್ಯಕ್ಷರಾಗಿದ್ದರು.

ಡಾ| ಎಸ್‌. ರಮಾನಂದ ಶೆಟ್ಟಿ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವೈಸ್‌-ಚಾನ್ಸಲರ್‌ ಆಗಿದ್ದ ಡಾ| ಎಸ್‌. ರಮಾನಂದ ಶೆಟ್ಟಿ ಅವರು ಹಿಂದೆ ಮಣಿಪಾಲದ ಕಸ್ತೂರ್ಬಾ ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿ ಪದವಿ ಪಡೆದವರು. 1950ರಲ್ಲಿ ಕುಂದಾಪುರದ ಸಮೀಪ ಜನಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ, ಬೆಂಗಳೂರಿನ ಸರಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್‌ ಪದವಿಯನ್ನು ಗಳಿಸಿದರು.

ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ವಿವಿಧ ಕೆಳ ಹಂತಗಳ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿ ತಮ್ಮ ಕಾರ್ಯ ಪಟುತ್ವದಿಂದ ಪದೋನ್ನತಿ ಪಡೆಯುತ್ತ ಬಂದರು. ಬೆಂಗಳೂರಿನ ಸರಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಯಿಂದ ವಿಭಾಗ ಮುಖ್ಯಸ್ಥರ ಹುದ್ದೆಗೆ, ಬಳಿಕ ಪ್ರಾಂಶುಪಾಲರಾಗಿ ಭಡ್ತಿ ಪಡೆದರು. ಬಳಿಕ ಅವರು ಕರ್ನಾಟಕದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಾದರು. ಕೆಲಕಾಲ ಕಿದ್ವಾಯಿ ಸ್ಮಾರಕ ಕ್ಯಾನ್ಸರ್‌ ಚಿಕಿತ್ಸಾ ಸಂಸ್ಥೆಯ ಆಡಳಿತದ ಹೊಣೆ ವಹಿಸಿದರು. ಅನಂತರ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವೈಸ್‌-ಚಾನ್ಸಲರ್‌ ಆಗಿ ಕಾರ್ಯ ನಿರ್ವಹಿಸಿದರು.

 

ಶಿಕ್ಷಣ ಕ್ಷೇತ್ರದಲ್ಲಿ ಸದಾ ಚಿಂತನಪರರೂ ಯೋಜಕರೂ ದೂರದೃಷ್ಟಿಯ ನೇತಾರರೂ ಆಗಿರುವ ಡಾ| ಶೆಟ್ಟಿ ಅವರು ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಅಧ್ಯಯನ ವಿಭಾಗಗಳನ್ನು ತೆರೆದು ಹೊಸ ಸಂಶೋಧನೆ, ಅಧ್ಯಯನ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಆರೋಗ್ಯ ವಿಶ್ವವಿದ್ಯಾಲಯದ ಪ್ರಕಟಣಾ ವಿಭಾಗದಲ್ಲಿ , ಪರೀಕ್ಷ ವಿಧಾನಗಳಲ್ಲಿ, ಗ್ರಂಥಾಲಯದಲ್ಲಿ ಆಧುನಿಕ ತಂತ್ರಾಂಶಾಧಾರಿತ ವಿಧಾನಗಳನ್ನು ಅನುಸರಿಸಿ ನವೀಕರಣಗೊಳಿಸಿದ್ದಾರೆ. ಹೆಲಿನೆಟ್‌ ಕನ್ಸೋರ್ಟಿಯಮ್‌ ಮೂಲಕ ಆರೋಗ್ಯ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲರೂ ವಿಚಾರ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗುವಂತಹ ವ್ಯವಸ್ಥೆ ರೂಪಿಸಿದ್ದಾರೆ.

ಟಿ. ಮೋಹನದಾಸ ಪೈ:-

ಟಿ. ಮೋಹನದಾಸ ಪೈ ಅವರು ಮಣಿಪಾಲದ ನಿರ್ಮಾತೃ ಡಾ| ಮಾಧವ ಅನಂತ ಪೈ ಅವರು ಜ್ಯೇಷ್ಠ ಪುತ್ರ. ತಂದೆಯವರ ದೂರದರ್ಶಿತ್ವ, ಕಾರ್ಯಪಟುತ್ವ, ಆಡಳಿತ ಮುತ್ಸದ್ಧಿತನ ಇತ್ಯಾದಿಗಳನ್ನು ಬಳುವಳಿ ಪಡೆದ ಪೈ ಅವರು, ಡಾ| ಮಾಧವ ಪೈ ಅವರು ಸ್ಥಾಪಿಸಿದ ಹಲವಾರು ಔದ್ಯೋಗಿಕ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರೀಗ ಡಾ| ಟಿ.ಎಂ.ಎ. ಪೈ ಫೌಂಡೇಶನ್ನಿನ ಅಧ್ಯಕ್ಷ, ಎಂಜಿಎಂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಐಸಿಡಿಎಸ್‌ನ ಅಧ್ಯಕ್ಷ, ಉದಯವಾಣಿ ಮತ್ತಿತರ ಪ್ರಕಟನೆಗಳನ್ನು ಹೊರ ತರುವ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ಅಧ್ಯಕ್ಷ ಇತ್ಯಾದಿ ಹಲವಾರು ಜವಾಬ್ದಾರಿಯ ಸ್ಥಾನಗಳಲ್ಲಿ ನಾಯಕತ್ವದ ಹೊಣೆ ನಿರ್ವಹಿಸುತ್ತಿದ್ದಾರೆ.

1953ರಲ್ಲಿ ಅವರು ಕೆನರಾ ಲ್ಯಾಂಡ್‌ ಇನ್ವೆಸ್ಟ್‌ಮೆಂಟ್ಸ್‌ ಎಂಬ ಅವರದೇ ಕುಟುಂಬದ ಸಂಸ್ಥೆಯ ಮೆನೇಜರ್‌ ಆಗಿ ವೃತ್ತಿ ಜೀವನ ಆರಂಭಿಸಿದರು. ಇದರೊಂದಿಗೆ ಟಿ. ಸತೀಶ್‌ ಪೈ ಅವರೊಂದಿಗೆ ಸಹಭಾಗಿತ್ವದಲ್ಲಿ ಮಣಿಪಾಲ ಪವರ್‌ ಪ್ರಸ್‌ನ ಆಡಳಿತ ಹಾಗೂ ಹಣಕಾಸಿನ ಹೊಣೆಯನ್ನೂ ನಿರ್ವಹಿಸಿದರು. ಅವರ ನಾಯಕತ್ವದಲ್ಲಿ ಮಣಿಪಾಲ ಪವರ್‌ ಪ್ರಸ್‌ ಮುದ್ರಣದಲ್ಲಿ ರಾಷ್ಟ್ರದಲ್ಲೇ ಶ್ರೇಷ್ಠ ಮುದ್ರಣಾಲಯವೆಂಬ ಖ್ಯಾತಿಯನ್ನುಗಳಿಸಿತು.

1970ರಲ್ಲಿ ಉದಯವಾಣಿ ಪತ್ರಿಕೆಯನ್ನು ಆರಂಭಿಸಿದರು. ಅದನ್ನು ನಡೆಸುತ್ತಿರುವ ಮಣಿಪಾಲ ಪ್ರಿಂಟರ್ ಆ್ಯಂಡ್‌ ಪಬ್ಲಿಷರ್ಸ್‌ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದರು. ಮುದ್ರಣಾಲಯವನ್ನು ಅತ್ಯಾಧುನಿಕ ಯಂತ್ರಗಳಿಂದ ಸಜ್ಜುಗೊಳಿಸಿ ಎಲ್ಲ ರೀತಿಯ ಮುದ್ರಣ ಕಾರ್ಯಗಳನ್ನು ನಿರ್ವಹಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪ್ರತೀ ವರ್ಷವೂ ಬಗಲಿಗೆ ಹಾಕಿಕೊಳ್ಳುವುದರಲ್ಲಿ ಮೋಹನದಾಸ ಪೈ ಅವರ ನಾಯಕತ್ವದ ಹಿನ್ನೆಲೆಯಿದೆ. 1995ರಿಂದ ಅವರು ಐಸಿಡಿಎಸ್‌ನ ಅಧ್ಯಕ್ಷ ಹಾಗೂ ನಿರ್ದೇಶಕರಾಗಿದ್ದಾರೆ.

ಡಾ| ಟಿ.ಎಂ.ಎ. ಪೈ ಫೌಂಡೇಶನ್‌, ಮಹಾತ್ಮಾ ಗಾಂಧಿ ಕಾಲೇಜು, ಉಡುಪಿ ಹಾಗೂ ಅದರ ಅಂಗ ಸಂಸ್ಥೆಗಳಾದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಜಾನಪದ ಅಧ್ಯಯನ ಕೇಂದ್ರ ಹಾಗೂ ಯಕ್ಷಗಾನ ಕೇಂದ್ರದ ಆಡಳಿತದ ನಾಯಕತ್ವವನ್ನು ವಹಿಸಿದವರು ಟಿ. ಮೋಹನದಾಸ ಪೈ.

ರೋಟೇರಿಯನ್‌ ಮೋಹನ ಭಂಡಾರ್‌ಕಾರ್‌:- ರೊಟೇರಿಯನ್‌ ಮೋಹನ ಭಂಡಾರ್‌ಕಾರ್‌ ಕೆಳ ಮಧ್ಯಮ ವರ್ಗದ ಗೌಡ ಸಾರಸ್ವತ ಕುಟುಂಬದಲ್ಲಿ ಜನಿಸಿದವರು. ಕುಂದಾಪುರದ ಬೋರ್ಡ್‌ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್‌ ಮುಗಿಸಿ, 16ನೇ ವಯಸ್ಸಿನಲ್ಲಿ ಈಗ ಸಿಂಡಿಕೇಟ್‌ ಬ್ಯಾಂಕ್‌ ಎಂದು ನಾಮಾಂಕಿತಗೊಂಡ ಕೆನರಾ ಇಂಡಸ್ಟ್ರಿಯಲ್‌ ಆ್ಯಂಡ್‌ ಬ್ಯಾಂಕಿಂಗ್‌ ಸಿಂಡಿಕೇಟ್‌ ಎಂಬ ಸಂಸ್ಥೆಗೆ ಸೇರಿದರು. 18ನೇ ವಯಸ್ಸಿನಲ್ಲಿ ಬಹರೈನ್‌ಗೆ ತೆರಳಿ ತಮ್ಮ ಅಣ್ಣ ದಿ| ಕೆ.ಕೆ. ಭಂಡಾರ್‌ಕಾರ್‌ ಅವರ ನೆರವಿನೊಂದಿಗೆ ಮಧ್ಯಪೂರ್ವ ಬ್ರಿಟಿಷ್‌ ಬ್ಯಾಂಕಿನಲ್ಲಿ ನೇಮಕಗೊಂಡರು. 1950ರಲ್ಲಿ ಇದು ಹಾಂಗ್‌ಕಾಂಗ್‌ ಬ್ಯಾಂಕಿನೊಂದಿಗೆ ವಿಲೀನಗೊಂಡ ಮೇಲೆ 1971ರಲ್ಲಿ ದುಬಾೖಗೆ ಸ್ಥಳಾಂತರಗೊಂಡರು. 1991ರಲ್ಲಿ ನಿವೃತ್ತಿ ಹೊಂದಿ 1992ರಲ್ಲಿ ಭಾರತಕ್ಕೆ ಮರಳಿದರು. ರೋಟರಿಯ ಸೇವಾದರ್ಶಗಳಿಂದ ಪ್ರಭಾವಿತರಾಗಿ 1995ರಲ್ಲಿ ಉಡುಪಿ-ಮಣಿಪಾಲ ರೋಟರಿ ಕ್ಲಬ್‌ನ ಸದಸ್ಯರಾದರು. ಪರೋಪಕಾರದ ಗುಣವುಳ್ಳ ಇವರು ರೋಟರಿ ಕ್ಲಬ್‌ನ ಹತ್ತಾರು ಸೇವಾ ಯೋಜನೆಗಳಿಗೆ ಮುಕ್ತಹಸ್ತದಿಂದ ದೇಣಿಗೆ ನೀಡಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Kiran Dsouza H/o, Joyce, Mount Rosary, KallianpurObituary: Kiran Dsouza H/o, Joyce, Mount Rosary, Kallianpur
Thank you Dear CustomersThank you Dear Customers
Veez Konkani Illustrated Weekly e-Magazine # 90Veez Konkani Illustrated Weekly e-Magazine # 90
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India