ಉಡುಪಿ ಶ್ರೀಕೃಷ್ಣಮಠದಲ್ಲಿ ಊಟಕ್ಕೆ ಪಂಕ್ತಿ-ಬೇಧದ ವಿರುದ್ದ ಸಿಪಿ‌ಐ(ಎಂ) ರಣಕಹಳೆ : ಬೃಹತ್ ಪ್ರತಿಭಟನೆ- ಪೊಲೀಸರು ಪ್ರತಿಭಟನಾಕಾರರ ನಡುವೆ ಜಟಾಪಟಿ


jayaprakashkini
kemmannunewsnetwork, 26-01-2012 15:01:06


Write Comment     |     E-Mail To a Friend     |     Facebook     |     Twitter     |     Print


 

Udupi, Jan 26: CPI (M) protest against the discrimination in dining and caste system was held in front of Sri Krishna Mutt today, January, 26. According to Mr. G. G. Sriram Reddy state secretary, CPI (M) the caste system is still in practice across the state and said that CPI (M) believes equality among all.

 

ಉಡುಪಿ:ಜ,26. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಾತಿಪದ್ದತಿ ಹಾಗೂ ಪಂಕ್ತಿಬೇಧದ ವಿರುದ್ದ ಸಿಪಿ‌ಐ(ಎಂ)ಇಂದು ಬೃಹತ್ ಪ್ರತಿಭಟನೆ ನಡೆಸಿತು.ಅಜ್ಜರಕಾಡಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆದ ಬಳಿಕ ಶ್ರೀ ಕೃಷ್ಣ ಮಠದವರೆಗೆ ಮೆರವಣಿಗೆ ಹಮ್ಮಿಕೊಂಡ ಸಿಪಿ‌ಐ‌ಎಂ ನ ಸಾವಿರಾರು ಕಾರ್ಯಕರ್ತರನ್ನು ಶ್ರೀ ಕೃಷ್ಣ ಮಠದ ಒಳಗೆ ಬಾರದ ಹಾಗೇ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದರೂ ಅದನ್ನು ಮುರಿದು ಒಳನುಗ್ಗಲು ಯತ್ನಿಸಿದರು.ಈಸಂದರ್ಭದಲ್ಲಿ ಪೊಲೀಸರು  à²•à²¾à²°à³à²¯à²•à²°à³à²¤à²° ನಡುವೆ ಜಟಾಪಟಿ ನಡೆಯಿತಲ್ಲದೇ ಪರಿಸ್ಥಿತಿ ಉದ್ವಿಗ್ನಕ್ಕೆ ಹೋಯಿತು. 

ಮಠದಲ್ಲಿ ನಡೆಯುತ್ತಿರುವ ಜಾತಿಪದ್ದತಿ ಹಾಗೂ ಪಂಕ್ತಿಬೇಧದ ವಿರುದ್ದ ಸಿಪಿ‌ಐ(ಎಂ)ರಣಕಹಳೆ ಮೊಳಗಿಸಿದೆ.ರಾಜ್ಯದಾದ್ಯಂತ 250ಕ್ಕೂ ಹೆಚ್ಚು ದೇವಸ್ಥಾನದಲ್ಲಿ ನಡೆಯುತ್ತಿರುವ ಜಾತಿಪದ್ದತಿ ಹಾಗೂ ಪಂಕ್ತಿಬೇಧದ ವಿರುದ್ದ ಉಡುಪಿಯಿಂದಲೇ ಹೋರಾಟವನ್ನು ಆರಂಭಿಸಿದ್ದಾರೆ. 

ಈ ಕಾರ್ಯಕ್ರಮದ ಅಂಗವಾಗಿ ಅಜ್ಜರಕಾಡಿನ ಹುತಾತ್ಮ ಸೈನಿಕರ ವೇದಿಕೆಯ ಬಳಿ ಬೃಹತ್ ಸಾರ್ವಜನಿಕ ಸಭೆ ನಡೆಯಿತು.ಸಭೆಯಲ್ಲಿ ಸಿಪಿ‌ಐ‌ಎಂ ನ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ ಮಾತನಾಡಿದರು.ಪೇಜಾವರ ಶ್ರೀಗಳಿಗೆ ನೇರ ಸವಾಲು ಹಾಕಿದ ರೆಡ್ಡಿ ಪೇಜಾವರ ಶ್ರೀಗಳು ಎಲ್ಲಾ ವಿಷಯದ ಬಗ್ಗೆ ದ್ವನಿ ಎತ್ತುತ್ತಾರೆ, ಪ್ರತಿಭಟನೆ ನಡೆಸುತ್ತಾರೆ. ಆದರೆ ಅವರ ಮಠದ ಒಳಗೇ ನಡೆಯುವ ಪಂಕ್ತಿ ಬೇಧದ ವಿರುದ್ದ ಮೌನವಾಗಿದ್ದಾರೆ. ಮೊದಲು ಈ ಪಂಕ್ತಿಬೇಧವನ್ನು ಅವರು ನಿರ್ಮೂಲನೆ ಮಾಡಲಿ ಆಗ ಅವರನ್ನು ಜನ ಮೆಚ್ಚುತ್ತಾರೆ ಎಂದುರು.ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಆಚಾರ್ಯ ಜಿಲ್ಲೆಗೇ ಕಳಂಕ.ಮಡೆಸ್ನಾನವನ್ನು ಸಮರ್ಥನೆ ಮಾಡುವ ಮೂಲಕ ಭಕ್ತರನ್ನು ಎಂಜಿಲೆಯಲ್ಲಿ ಹೊರಳಾಡುವಂತೆ ಮಾಡಿದ್ದಾರೆ.ಮೊದಲು ವಿ‌ಎಸ್ ಆಚಾರ್ಯರೇ ಹೊರಳಾಡಲಿ ಇಲ್ಲವಾದರೆ ತನ್ನ ಡಾಕ್ಟರ್ ಪದವಿ,ಅಧಿಕಾರವನ್ನು ತ್ಯಜಿಸಲಿ ಎಂದು ಸವಾಲು ಹಾಕಿದರು.

ಸಾರ್ವಜನಿಕ ಸಭೆಯ ಬಳಿಕ ಅಜ್ಜರಕಾಡುವಿನಿಂದ ನಗರದ ಪ್ರಮುಖ ಮಾರ್ಗದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಶ್ರೀ ಕೃಷ್ಣ ಮಠದ ಆವರಣದ ತನಕ ಮೆರವಣಿಗೆ ನಡೆಸಬೇಕು ಎಂದು ಯೋಜಿಸಿದ್ದರೂ ಕೂಡಾ ಅದಕ್ಕೆ ಪೊಲೀಸರು ಆಸ್ಪದ ನೀದದೇ ಇದ್ದ ಕಾರಣ ಸಂಸ್ಕೃತ ಕಾಲೇಜು ಬಳಿಯೇ ಬ್ಯಾರಿಕೇಡ್ ಗಳನ್ನು ಅಳವಡಿಸಿ ಪ್ರತಿಭಟನಾ ಕಾರರನ್ನು ತಡೆದರು. ಆದರೆ ಈ ಗೇಟನ್ನು ದೂಡಿ ಮುನ್ನಗಲು ಕಾರ್ಯಕರ್ತರು ಸರ್ವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ಆದರೆ ಪೊಲೀಸರು ಕಾರ್ಯಕರ್ತರನ್ನು ತಡೆದದ್ದರಿಂದ ಅಲ್ಲೇ ರಸ್ತೆಯಲ್ಲಿ ಧರಣಿ ಕುಳಿತ ಸಿಪಿ‌ಐ‌ಎಂ ಕಾರ್ಯಕರ್ತರು ಶೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಪಂಕ್ತಿಬೇಧದ ವಿರುದ್ದ ಘೋಷಣೆ ಕೂಗಿದರು.ಸುಮಾರು ಒಂದು ಗಂಟೆಗಳ ಕಾಲ ಧರಣಿ ಕೂತ ಪ್ರತಿಭಟನಾಕಾರರು ಮಠದಲ್ಲಿ ನಡೆಯುತ್ತಿರುವ ಪಂಕ್ತಿಬೇಧವನ್ನು ಶೀಘ್ರದಲ್ಲಿ ನಿಲ್ಲಿಸದಿದ್ದರೆ ಮತ್ತೆ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿದರು.

 à²ªà³à²°à²¤à²¿à²­à²Ÿà²¨à²¾ ಸಭೆಯಲ್ಲಿ ಮುಖಂಡರುಗಳಾದ ಕೆ.ಶಂಕರ್,ಬಿ.ಮಾಧವ,ಕೆ.ಆರ್.ಶ್ರೀಯಾನ್, ಜಿ.ಎನ್.ನಾಗರಾಜ್,ಪ್ರಸನ್ನಕುಮಾರ್, ನಿತ್ಯಾನಂದಸ್ವಾಮಿ ಉಪಸ್ಥಿತರಿದ್ದರು.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
BIGGEST FLOOD IN 46 YEARS, KEMMANNU - UDUPI
View More

St. Theresa Patron Feast on Oct 2 at KemmannuSt. Theresa Patron Feast on Oct 2 at Kemmannu
Free Covid-19 test at Santhekatte By Rotary Kallianpur on Oct 2.Free Covid-19 test at Santhekatte By Rotary Kallianpur on Oct 2.
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Cool House Construction, Udupi.Cool House Construction, Udupi.
Computerised Clinical Laboratory, Kemmannu.Computerised Clinical Laboratory, Kemmannu.
Milarchi Lara - Bulletin Issue July 2020.Milarchi Lara - Bulletin Issue July 2020.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India