ಫೆ.6ರಿ೦ದ8ರವರೆಗೆ ಉಡುಪಿ ಕಿದಿಯೂರ್ ಹೊಟೇಲ್ಗೆ ರಜತ ಸಂಭ್ರಮ- ಶ್ರೀನಾಗದೇವರ ಪುನ:ಪ್ರತಿಷ್ಠೆ ಬ್ರಹ್ಮಕಲಶಾಭೀಷಕ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ


jayaprakashkini
kemmannunewsnetwork, 03-02-2012 09:08:16


Write Comment     |     E-Mail To a Friend     |     Facebook     |     Twitter     |     Print


 

Udupi, Feb 2: Kediyoor Hotel has lined up with various programmes on the occasion of their silver jubilee celebrations which start from 6th February till 8th at the hotel premises. There will be a Hore Kanike procession on the 6th at 3 pm from Jodukatte and there will be silver jubilee inaugural function in the evening and there after a Yakshagana performance by Kondadakuli Sri Poornachandra Yakshgana trope will be held. On 7th Tulabhara of Sri Vishweshateertha Swamiji of Pejavar Mutt will be held. It may be recalled that 25 years ago Vishweshateertha Swamiji has inaugurated this hotel. On the same day there will be felicitations to various achievers and thereafter a Tulu Comedy AJJER will be staged.

There will be a community feast for the general public on the last day and to end the silver jubilee celebrations Ashtapavitra Nagamandalotsava will be held on the last day.

 

ಉಡುಪಿ:ಫೆ,2. ಉಡುಪಿಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಹೊಟೇಲ್ ಕಿದಿಯೂರ್ ಈಗ 25ನೇ ವರ್ಷದ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಫೆ.6ರಿಂದ 8ತನಕ 3ದಿನಗಳ ರಜತ ಉತ್ಸವನ್ನು ಆಚರಿಸುತ್ತಿದ್ದು ಸ್ಥಳದ ಕಾರಣಿಕ ದೇವರಾದ ನಾಗರಾಜನಿಗೆ ಭಕ್ತಿ ಪೂರ್ವಕವಾಗಿ ಫೆ.8ರಂದು ಅಷ್ಟಪವಿತ್ರ ನಾಗಮಂಡಲವನ್ನು ನಡೆಸಲಾಗುವುದು ಎಂದು ಕಿದಿಯೂರ್ ಹೊಟೇಲ್ ಪ್ರೈ.ಲಿ.ನ ಚೆಯರ್ ಮೆನ್ ಹಾಗೂ ಮ್ಯಾನೇಜಿ೦ಗ್ ಡೈರೆಕ್ಟರ್ ಶ್ರೀ ಭುವನೇಂದ್ರ ಕಿದಿಯೂರ್ ತಿಳಿಸಿದ್ದಾರೆ.

ಅವರು ಬುಧವಾರ ಕಿದಿಯೂರ್ ಹೊಟೇಲ್ ನ ಮಹಾಜನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೊಟೇಲ್ ನ ಉತ್ತರಭಾಗದ ಈಶಾನ್ಯದಿಕ್ಕಿನಲ್ಲಿದ್ದ ಶ್ರೀನಾಗದೇವರ ದೇವಸ್ಥಾನ ಜೀರ್ಣೋದ್ದಾರ ಜರಗಲಿದ್ದು ದೇವಸ್ಥಾನವನ್ನು ಸಂಪೂರ್ಣ ಶಿಲಾಮಯವನ್ನಾಗಿ ಮಾಡಲಾಗಿದೆ. 14ಶಿಲಾ ಸ್ತಂಬಗಳು, ಕಲಾ ನೈಪುಣ್ಯತೆಯನ್ನು ಸಾಧಿಸಿರುವ ಸೌಂದರ್ಯ, ಸದಾ ಝೇಂಕಾರ ಹೊರಡಿಸುವ ಕಂಚಿನ ಗಂಟೆಗಳು, ತಾಮ್ರದ ತಗಡಿನ ಗರ್ಭಗುಡಿ, ಹಂಚಿನ ಮಾಡು,ಅನಾದಿಕಾಲದಿಂದ ನಾಗಸಾನಿದ್ಯಹೊಂದಿರುವ ಅಶ್ವಥವೃಕ್ಷ ಈ ದೇವಸ್ಥಾನದ ಹತ್ತು ಹಲವು ವೈಶಿಷ್ಟ್ಯಗಳಾಗಿವೆ ಎಂದು ಅವರು ವಿವರಿಸಿದರು.

ಫೆ.6ರಿಂದ ಆರಂಭವಾಗಲಿರುವ ರಜತ ಸಂಭ್ರಮದ ಸಮಾರಂಭ ನಾಗಸನ್ನಿಧಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಜರುಗಲಿದ್ದು ಸಂಜೆ 4ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಕಿದಿಯೂರು ಹೊಟೇಲಿನ ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಮೆರವಣಿಗೆ ಜರಗಲಿದೆ. ಮೆರವಣಿಗೆಯನ್ನು ಉಡುಪಿ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಬಳಿಕ ನಾಗದೇಗುಲದಲ್ಲಿ ಮಹಾ ಸಂಕಲ್ಪಗಳು ನೆರವೇರಲಿದ್ದು ಸಂಜೆ ಕಿದಿಯೂರ್ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ಉನ್ನತ ಶಿಕ್ಷಣ ಸಚಿವ ಡಾ.ವಿ‌ಎಸ್.ಆಚಾರ್ಯ ಉದ್ಘಾಟಿಸಲಿದ್ದಾರೆ. ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಮದರ್ ಆಫ್ ಸಾರೋಸ್ ಚರ್ಚ್ ನ ಧರ್ಮಗುರು ಫಾದರ್ ಫ್ರೆಡ್ ಮಸ್ಕರೇನಸ್ ಹಾಗೂ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ನ ಉಪಾಧ್ಯಕ್ಷ ಮೌಲಾನಾ ಯು.ಕೆ.ಅಬ್ದುಲ್ ಅಜೀಜ್ ದರಿಮಿ ಕಲ್ಲೇಗ ರವರು ಆಶೀರ್ವಚನ ನೀಡಲಿದ್ದು ಜ್ಯೋತಿಷ ವಿದ್ವಾನ್ ಕಬಿಯಾಡಿ ಜಯರಾಮ್ ಆಚಾರ್ಯ ಶುಭಾಸ೦ಶನೆ ಮಾಡಲಿದ್ದಾರೆ. 

ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಎ.ಜಿ.ಕೊಡ್ಗಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಶ್ರೀನಿವಾಸ್ ಶೆಟ್ಟಿ,ಜಿ.ಪಂ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ತಾ.ಪಂ.ಅಧ್ಯಕ್ಷ ದೇವದಾಸ್ ಹೆಬ್ಬಾರ್, ನಾಡೋಜಾ ಡಾ.ಜಿ. ಶಂಕರ್, ಕಿರಣ್ ಕುಮಾರ್, ಮಲ್ಪೆ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಮೊದಲಾದವರು ಉಪಸ್ಥಿತಲಿರುತ್ತಾರೆ. ಸಮಾರಂಭದ ಬಳಿಕ ಕುಂಭಾಶಿ ಕೊಂಡದ ಕುಳಿ ಶ್ರೀ ಪೂರ್ಣಚಂದ್ರ ಯಕ್ಷಗಾನ ಕಲಾಮಂಡಳಿಯವರಿಂದ ಯಕ್ಷಗಾನ ಬಯಲಾಟ ಪ್ರಸಂಗ: ಗದಾಯುದ್ದ ನಡೆಯಲಿದೆ ಎಂದು ತಿಳಿಸಿದರು.

ಫೆ.7ರ ಬೆಳಿಗ್ಗೆ 6:45ಕ್ಕೆ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನಃಪ್ರತಿಷ್ಠೆ ಹಾಗೂ 10:30ಕ್ಕೆ ಅಷ್ಟೋತ್ತರ ಕಲಶಾಭಿಷೇಕ ಸಹಿತ ಬ್ರಹ್ಮಕಲಾಶಾಭಿಷೇಕ ಹಾಗೂ 11:30ಕ್ಕೆ ಮಹಾಪೂಜೆ ನಡೆಯಲಿದೆ.

ಇದೇ ಸಂಧರ್ಭದಲ್ಲಿ ಕಳೆದ 25ವರ್ಷಗಳಿಂದ ಸಹಕರಿಸಿದ ಪದ್ಮಭೂಷಣ ಡಾ. ರಾಮದಾಸ್ ಪೈ ಮತ್ತು ಸಹೋದರರಿಗೆ ಪೇಜಾವರ ಶ್ರೀ ವಿಶ್ವೇಶ ಶ್ರೀಪಾದರಿಂದ ನಾಗರಕ್ಷಕದಾರವನ್ನು ಕಟ್ಟುವ ಮೂಲಕ ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ 6 ಗಂಟೆಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಗಳಿಗೆ ತುಲಾಭಾರ ನಡೆಯಲಿದೆ.

 à²¬à²³à²¿à²• ಶ್ರೀಪಾದರಿಂದ ಕಬಿಯಾಡಿ ಜಯರಾಮ್ ಆಚಾರ್ಯ ಹಾಗೂ ಧರ್ಮಪತ್ನಿ ವಾಣಿಜಯರಾಮ್ ದಂಪತಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಬಳಿಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರಚಿಸಿದ ಒರಿರ್ದೊರಿ ಅಸಲ್ ಕಲಾವಿದರ ಹಾಸ್ಯಮಯ ತುಳುನಾಟಕ ಅಜ್ಜೇರ್ ನಡೆಯಲಿದ್ದು ರಾತ್ರಿ ಆಶ್ಲೇಷಾ ಬಲಿ ಮತ್ತು ಮಹಾಪೂಜೆ ನೆರವೇರಲಿದೆ ಎಂದು ಹೇಳಿದರು.

ಫೆ.8ರಂದು ಬೆಳಗ್ಗಿನಿಂದ ಅನೇಕ ಧಾರ್ಮಿಕ ವಿಧಿ-ವಿಧಾನಗಳು ನೆರವೇರಲಿದ್ದು ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 7ರಿಂದ ಹಾಲಿಟ್ಟು ಸೇವೆ, ನಾಗಮಂಡಲೋತ್ಸವ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಫೆ.8ರ೦ದು ನಡೆಯಲಿರುವ ನಾಗಮ೦ಡಲೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರಿ೦ದ  à²†à²¶à³€à²°à³à²µà²šà²¨ ಹಾಗೂ ಸ೦ಸ್ಥೆಯ ಸಿಬ್ಬ೦ದಿಗಳಿಗೆ ಆಶೀರ್ವಾದ ಪೂರ್ವಕ ಮ೦ತ್ರಾಕ್ಷತೆಯನ್ನು ನೀಡಲಿದ್ದಾರೆ. ಮಧ್ಯಾಹ್ನ ನಡೆಯಲಿರುವ  à²®à²¹à²¾ ಅನ್ನ ಸ೦ತರ್ಪಣೆಯ ಸಮಯದಲ್ಲಿ ತಿರುಪತಿ ಮುಷ್ಠಿಲಾಡನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ ಎ೦ದು ಕಿದಿಯೂರುರವರು ವಿವರಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಸಮೀಪದ ಸರಸ್ಪತಿ ಶಾಲೆ ಹಾಗೂ ಸಿಟಿ ಬಸ್ ನಿಲ್ದಾಣದ ಬಳಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದೇ ರೀತಿಯಲ್ಲಿ ನಗರದೆಲ್ಲೆಡೆಯಲ್ಲಿ ಪ್ರಚಾರಕಾರ್ಯಕ್ರಮ ಭರದಿ೦ದಸಾಗಿದೆ. ಅಲ್ಲಲ್ಲಿ ಸ್ವಾಗತ ಕಾಮಾನುಗಳನ್ನು ನಿರ್ಮಿಸಲಾಗಿದೆ. ಹಾಗೂ ಹೊಟೇಲನ್ನು ವಿದ್ಯುತ್ ದೀಪಾಲ೦ಕಾರದಿ೦ದ ಸು೦ದರಿಸಲಾಗಿದೆ. 

ಪತ್ರಿಕಾಗೋಷ್ಠಿಯಲ್ಲಿ ಜಿತೇಶ್ ಕಿದಿಯೂರು, ಶಶಿಧರ್ ಶೆಟ್ಟಿಎರ್ಮಾಳು ಮತ್ತು ಗಣೇಶ್ ರಾವ್ ರವರು ಉಪಸ್ಥಿತರಿದ್ದರು.  

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
The drinking water for Udupi ??
View More

Open Air Dance and Music Festival at Aryan Resorts, near Kemmannu on 7th March.Open Air Dance and Music Festival at Aryan Resorts, near Kemmannu on 7th March.
Campus Selection at Milagres College, KallianpurCampus Selection at Milagres College, Kallianpur
KEMMANNU CHURCH - Weekly Announcements.KEMMANNU CHURCH - Weekly Announcements.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 113Veez Konkani Illustrated Weekly e-Magazine # 113
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India