ಕುರ್ಚಿ ಆಟವನ್ನು ಹಚ್ಚಿಕೊಂಡ ಬಿಜೆಪಿ ನಾಯಕರ ಕುರ್ಚಿ ಕಚ್ಚಾಟದಿಂದ ರಾಜ್ಯ ನಿರಂತರವಾಗಿ ಉಪಚುನಾವಣೆಗಳನ್ನು ಎದುರಿಸುವಂತ ಸ್ಥಿತಿ ನಿರ್ಮಾಣವಾಗಿದೆ-ಮೋಟಮ್ಮ


jayaprakashkini
kemmannunewsnetwork, 01-03-2012 18:33:44


Write Comment     |     E-Mail To a Friend     |     Facebook     |     Twitter     |     Print


ಕುಂದಾಪುರ:ಮಾ,2.ರಾಜ್ಯದಲ್ಲಿ ಅಧಿಕಾರವನ್ನು ಅನುಭವಿಸಬೇಕು ಎನ್ನುವ ಕಾರಣದಿಂದ ರಾಜಕೀಯದ ಕುರ್ಚಿ ಆಟವನ್ನು ಹಚ್ಚಿಕೊಂಡ ಬಿಜೆಪಿ ನಾಯಕರ ಕುರ್ಚಿ ಕಚ್ಚಾಟದಿಂದ ರಾಜ್ಯದ ಜನತೆ ನಿರಂತರವಾಗಿ ಉಪ ಚುನಾವಣೆಗಳನ್ನು ಎದುರಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಯಾವ ಪುರುಷಾರ್ಥಕ್ಕಾಗಿ ಬಿಜೆಪಿ ಚುನಾವಣೆಯ ಹೆಸರಿನಲ್ಲಿ ಸರ್ಕಾರದ ಕೋಟ್ಯಾಂತರ ಹಣವನ್ನು ವೆಚ್ಚ ಮಾಡುತ್ತಿದೆ ಎನ್ನುವುದನ್ನು ಜನರಿಗೆ ವಿವರಿಸಲಿ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕಿ ಮೋಟಮ್ಮ ಆಗ್ರಹಿಸಿದರು.

ಕುಂದಾಪುರದ ಶ್ರೀ ನಾರಾಯಣಗುರು ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ಜನತೆ ಅಗತ್ಯವಾಗಿರುವ ನೀರು, ಸೂರು ಹಾಗೂ ಬೆಳಕನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದ ಜನತೆಯನ್ನು ಭೃಷ್ಟಾಚಾರದ ಕರಿನೆರಳಿನಲ್ಲಿ ಮರೆ ಮಾಡಿದ್ದಾರೆ. ಜನರಿಗೆ ಮೋಸದಾಟವನ್ನು ತೋರಿಸಿರುವ ಆಡಳಿತಾರೂಢ ಶಾಸಕರುಗಳು ಕೋಟಿ ಕೋಟಿಗಳಲ್ಲಿ ತೂಗುತ್ತಿದ್ದಾರೆ. ರಾಜ್ಯಕ್ಕೆ ಬೇಕಾಗಿರುವ ವಿದ್ಯುತ್ ಅವಶ್ಯಕತೆಯ ಲೆಕ್ಕಾಚಾರವನ್ನೆ ಮಾಡದೆ ಯೋಜನೆಗಳನ್ನು ಘೋಷಿಸಿ ಇದೀಗ ಕಲ್ಲಿದ್ದಲನ್ನು ತೋರಿಸಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಡಿಯುವ ನೀರಿಗೆ ಇಟ್ಟಿರುವ 950ಕೋಟಿ ರೂ.ಗಳಲ್ಲಿ ಕೇವಲ 240ಕೋಟಿ ರೂ.ಗಳು ಖರ್ಚಾಗಿಲ್ಲ ಎಂದು ಸ್ವತ: ಮುಖ್ಯಮಂತ್ರಿಗಳೆ ಅಸಹಾಯಕತೆಯನ್ನು ತೋರಿಸುತ್ತಿದ್ದಾರೆ. ಇದಕ್ಕೆಲ್ಲ ಅನನುಭವಿ ಸಚಿವರನ್ನು ಹೊಂದಿರುವುದೆ ಕಾರಣ ಎಂದು ಬೊಟ್ಟು ಮಾಡಿದ ಆವರು ಮಾನಗೆಟ್ಟ, ಮತಿಗೆಟ್ಟ ಈ ಸರ್ಕಾರವನ್ನು ತೊಲಗಿಸಲು ಇದೀಗ ಸರಿಯಾದ ಸಮಯ ಬಂದಿದೆ ಎಂದರು.

ಮುಂದುವರೆದು ಮಾತನಾಡಿದ ಅವರು ಸಂಸ್ಕೃತಿ ಮತ್ತು ಧರ್ಮವನ್ನು ದತ್ತು ತೆಗೆದುಕೊಂಡವರಂತೆ ಮಾತನಾಡುವ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಡೆದಿರುವ ಅಸಹ್ಯ ಪ್ರಕರಣಗಳಿಂದಾಗಿ ದೇಶದಲ್ಲಿ ತಲೆ ಎತ್ತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಭ್ಯತೆ ಹಾಗೂ ಸಂಸ್ಕೃತಿಯನ್ನು ತುಂಬಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ವಿದೇಶಿ ಮಹಿಳೆಯರ ಅರೆನಗ್ನ ನೃತ್ಯ ರೇವು ಪಾರ್ಟಿಗೆ ಅವಕಾಶ ಕಲ್ಪಿಸಿರುವುದು, ಶಿವಮೊಗ್ಗದಲ್ಲಿ ಶಾಸಕರೊಬ್ಬರಿಂದ ಮಹಿಳೆಯೊಬ್ಬರ ಮೇಲೆ ನಡೆದಿದೆ ಎನ್ನಲಾದ ಆತ್ಯಾಚಾರ ಪ್ರಕರಣದಲ್ಲಿ ಇನ್ನೂ ನ್ಯಾಯ ದೊರಕದೆ ಇರುವುದು, ನರ್ಸ ಗಲ್ಲಕ್ಕೆ ಕಿಸ್ ಕೊಟ್ಟಿದ್ದಕ್ಕೆ ಸಚಿವಗಿರಿಯ ಗಿಫ್ಟ್ ನೀಡಿರುವುದು, ಶಾಸಕರ ಪತ್ನಿ ಪದ್ಮಪ್ರಿಯ ಅವರ ನಿಗೂಢ ಸಾವಿನ ಪ್ರಕರಣದ ಹಿನ್ನೆಲೆ ಬಹಿರಂಗವಾಗದೆ ಇರುವುದೆಲ್ಲವೂ ಸಂಸ್ಕೃತಿಯ ಪಾಠವನ್ನು ಹೇಳಿಕೊಡುವ ಬಿಜೆಪಿ ಪಕ್ಷದ ಸಭ್ಯತೆಯ ಲಕ್ಷಣಗಳು ಎಂದು ಲೇವಡಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ ದೇಶಪಾಂಡೆಯವರು ರಾಜ್ಯದ ಬೀದಿ ಹಾಗೂ ಪೇಟೆಗಳಲ್ಲಿ ಭೃಷ್ಟಾಚಾರದ ಪೆಡಂಭೂತವನ್ನು ತಂದಿಟ್ಟ ಬಿಜೆಪಿ ಸರ್ಕಾರದಂತ ಭೃಷ್ಟ ಸರ್ಕಾರ ಭಾರತ ದೇಶದಲ್ಲಿಯೇ ಇಲ್ಲ. ಕರ್ನಾಟಕದಲ್ಲಿನ ಬೆಳಕಿಗೆ ಬಂದಿರುವ ಹಗರಣಗಳಿಂದಾಗಿ ದೇಶದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಆಡಳಿತಾರೂಢ ಪಕ್ಷದ ಮುಖಂಡರು ಭೂ ಮಾಫಿಯ, ಮೈನಿಂಗ್ ಸೇರಿದಂತೆ ಹತ್ತು ಹಲವು ಹಗರಣಗಳಿಂದಾಗಿ ಕೋಟಿ ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ. ಅಲ್ಪಸಂಖ್ಯಾಕರ ಧಾರ್ಮಿಕ ಶೃದ್ದಾ ಕೇಂದ್ರಗಳ ಮೇಲೆ ವ್ಯವಸ್ಥಿತಿ ದಾಳಿ ಸಂಘಟಿಸಲಾಗಿದೆ. ಬಡವರ ಅನ್ನದ ತಟ್ಟೆಯನ್ನೆ ಕಸಿದುಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಬಡವರ, ವಿಧವೆಯರ ಹಾಗೂ ಅಂಗವಿಕಲರಿಗೆ ನೀಡಲಾಗುವ ವೃದ್ದಾಪ್ಯ ವೇತನ ಹಾಗೂ ಇತರ ಅರ್ಜಿಗಳನ್ನೆ ವಿತರಿಸುತ್ತಿಲ್ಲ ಎಂದು ದೂರಿದ ಅವರು ಚುನಾವಣೆ ಬಂದಾಗ ಮಾತ್ರ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾಕರ ಬಗ್ಗೆ ಮಾತನಾಡುವ ಬಿಜೆಪಿ ತಮ್ಮ ಅಧಿಕಾರವಧಿಯಲ್ಲಿ ಈ ವರ್ಗದ ಎಷ್ಟು ಜನರನ್ನ ಸಚಿವರನ್ನಾಗಿ ಮಾಡಿದೆ ಎನ್ನುವುದನ್ನು ಹೇಳಲಿ ಎಂದು ಸವಾಲು ಹಾಕಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿಯವರು ಮಾತನಾಡಿ ಜಾತಿ-ಜಾತಿಯ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ತಾಯಿ-ಮಗನ ನಡುವೆಯೂ ರಾಜಕೀಯ ಕಂದಕ ನಿರ್ಮಾಣ ಮಾಡುವ ವಿಷ ಬೀಜ ಬಿತ್ತಲಾಗುತ್ತಿದೆ. ಇಂದಿರಾಗಾಂಧಿಯವರಿಗೆ ರಾಜಕೀಯ ಪುರ್ನಜನ್ಮ ನೀಡಿರುವ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಬಂದಿರುವ ಈ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಪಾಲಿಗೆ ಹೊಸ ದಿಕ್ಸೂಚಿಯಾಗಲಿದೆ. ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ದುರಾಡಳಿತವನ್ನು ನೀಡಿರುವ ಬಿಜೆಪಿಯ ರಾಜ್ಯಭಾರದಿಂದ ರೋಸಿ ಹೋಗಿರುವ ರಾಜ್ಯದ ಜನತೆ ಈ ಬಾರಿ ಸ್ವಷ್ಟವಾದ ತೀರ್ಮಾನ ಕೈಗೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ನುಡಿದರು.

ಭಟ್ಕಳ ಶಾಸಕ ಜೆ.ಡಿ ನಾಯ್ಕ್, ವೀಣಾ ಜಯಪ್ರಕಾಶ ಹೆಗ್ಡೆ, ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ರಾಜ್ಯ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಕೆಪಿಸಿಸಿ ಸದಸ್ಯ ಬಿಜೂರು ರಘುರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಜೇಕಬ್ ಡಿಸೋಜಾ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಬಿ.ಹಿರಿಯಣ್ಣ, ವಾಸುದೇವ ಯಡಿಯಾಳ, ಎಸ್.ರಾಜೂ ಪೂಜಾರಿ, ದೇವಕಿ ಪಿ ಸಣ್ಣಯ್ಯ, ರೇವತಿ ಶೆಟ್ಟಿ, ಜ್ಯೋತಿ ವಿ ಪುತ್ರನ್, ಪ್ರಸನ್ನಕುಮಾರ ಶೆಟ್ಟಿ, ಸ್ಥಳೀಯ ಮುಖಂಡರುಗಳಾದ ಕೃಷ್ಣದೇವ ಕಾರಂತ,ಮಲ್ಯಾಡಿ ಶಿವರಾಮ ಶೆಟ್ಟಿ, ವಿಕಾಶ ಹೆಗ್ಡೆ, ದೇವಾನಂದ ಶೆಟ್ಟಿ, ಕಾಳಪ್ಪ ಪೂಜಾರಿ, ಕೋಡಿ ಅಬ್ದುಲ್ ಸಾಹೇಬ್, ನಾರಾಯಣ ಆಚಾರ್ ಇದ್ದರು.

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Hottetumba Fish Court” inaugurated at UdupiHottetumba Fish Court inaugurated at Udupi
Congratulations to Vishu ShettyCongratulations to Vishu Shetty
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India