ಹಿ೦ದಿನ ಚುನಾವಣೆಯಲ್ಲಿ ದೇವರ,ಪಾದುಕೆಯನೆಪ ಈ ಬಾರಿ ಜಾತಿಯ ಹೆಸರಿನಲ್ಲಿ ಬಿ.ಜೆ.ಪಿಯವರಿ೦ದ ಮತಭಿಕ್ಷಾಟನೆ:ಕೆಮ್ಮಣ್ಣಿ-ಹೂಡೆ ಚುನಾವಣಾ ಪ್ರಚಾರಸಭೆಯಲ್ಲಿ ಕಾ೦ಗ್ರೆಸ್   ಮುಖ೦ಡರು  


jayaprakashkini
kemmannunewsnetwork, 06-03-2012 16:04:10


Write Comment     |     E-Mail To a Friend     |     Facebook     |     Twitter     |     Print


ಕೆಮ್ಮಣ್ಣು;ಮಾ,6. ಹಿ೦ದಿನ ಚುನಾವಣೆಯಲ್ಲಿ ದೇವರ,ಪಾದುಕೆಯನೆಪವನ್ನು ಹೇಳಿ ಮತದಾರರನ್ನು ವ೦ಚಿಸಿ ಮತವನ್ನು ಪಡೆದುಕೊ೦ಡು ರಾಜ್ಯದಲ್ಲಿ ಆಡಳಿತ ಚುಕ್ಕಾಣಿಯನ್ನು ಹಿಡಿದ ಬಿ.ಜೆ.ಪಿ ಈ ಬಾರಿಯ ಚುನಾವಣೆಯಲ್ಲಿ ಜಾತಿಯ ಹೆಸರಿನಲ್ಲಿ ಮತಭಿಕ್ಷಾಟನೆಯನ್ನು ಮಾಡುತ್ತಿದೆ೦ದು ಕೆಮಣ್ಣುವಿನ ಹೂಡೆಯಲ್ಲಿ ಮ೦ಗಳವಾರದ೦ದು ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಕಾ೦ಗ್ರೆಸ್ ಮುಖ೦ಡರು ಬಿ.ಜೆ.ಪಿಯ ಮುಖ೦ಡರನ್ನು ಲೇವಣಿ ಮಾಡಿದರು.

ಪ್ರಚಾರ ಸಭೆಯಲ್ಲಿ ಕೇ೦ದ್ರದ ಮಾಜಿ ಸಚಿವರಾದ ಬಿ.ಜನಾರ್ಧನ ಪೂಜಾರಿಯವರು ಇತರ ಪಕ್ಷಗಳಿ೦ದ ನೋ೦ದ ಕಾರ್ಯಕರ್ತರನ್ನು ಕಾ೦ಗ್ರೆಸ್ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಸೇರಿಸಿಕೊ೦ಡರು.

ಇದೇ ಸ೦ದರ್ಭದಲ್ಲಿ ಮಾತನಾಡಿದ ಉಡುಪಿ ಬ್ಲಾಕ್ ಕಾ೦ಗ್ರೆಸ್ ಅಧ್ಯಕ್ಷರಾದ ಪ್ರಮೋದ್ ಮಧ್ವರಾಜ್ರವರು ಕಾ೦ಗ್ರೆಸ್ ಸರಕಾರವು ರಾಜ್ಯದಲ್ಲಿ ಹಾಗೂ ಕೇ೦ದ್ರದಲ್ಲಿ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದ ಸ೦ದರ್ಭದಲ್ಲಿ ಹಲವಾರು ಅಭಿವ್ರದ್ಧಿ ಕೆಲಸವನ್ನು ಮಾಡಿಕೊ೦ಡು ಜನರಿ೦ದ ಪ್ರಶ೦ಸೆಯನ್ನು ಪಡೆಕೊ೦ಡ ಪಕ್ಷವಾಗಿದೆ. ನಮ್ಮ ಪಕ್ಷದಲ್ಲಿನ ಯಾವ ಮುಖ್ಯಮ೦ತ್ರಿಗಳು ಸಹ ಜೈಲಿಗೆ ಹೋದ ಘಟನೆ ಸ೦ಭವಿಸಿಲ್ಲ. ಹಿ೦ದೆ ಕೇ೦ದ್ರದಲ್ಲಿ ಇ೦ದಿರಾಗಾ೦ಧಿಯವರು ಸರಕಾರವನ್ನು ನಡೆಸಿದಾಗ ಬಡವರಿಗೆ ಬೇಕಾದ ಜಮೀನನ್ನು ನೀಡಿದವರು. ಇ೦ತಹ ಕೆಲಸವನ್ನು ಬಿಜೆಪಿಯ ಸರಕಾರ ಮಾಡಿಲ್ಲವೆ೦ದು ಹೇಳಿದರು. ಈ ಉಪಚುನಾವಣೆಯು ರಾಜ್ಯದ ಆಡಳಿತ ಚುಕ್ಕಾಣಿಯನ್ನು ಕಾ೦ಗ್ರೆಸ್ ಪಡೆಯುವುದಕ್ಕೆ ನಾ೦ದಿಯಾಗಲಿದೆ ಎ೦ದರು. ಇದಕ್ಕಾಗಿ ನಮ್ಮ ಕಾ೦ಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಕೈ ಚಿಹ್ನೆಗೆ ಮತವನ್ನು ನೀಡಿ ಪ್ರಚ೦ಡ ಬಹುಮತದಿ೦ದ ಗೆಲ್ಲಿಸುವುದರ ಮುಖಾ೦ತರ ಕಾ೦ಗ್ರೆಸ್ ಕರ್ನಾಟಕದಲ್ಲಿ ಮತ್ತೆ ಆಡಳಿತಕ್ಕೆ ಬರುವ೦ತಾಗಲಿ ಎ೦ದರು.

ಉಳ್ಳಾಲ ಶಾಸಕರಾದ ಯು.ಟಿ.ಖಾದರ್, ಎ೦.ಎ.ಗಫೂರ್, ಜಿ.ಪ೦ ಸದಸ್ಯರಾದ ಜನಾರ್ಧನ ತೋನ್ಸೆ,ರಾಜೇಶ್ ಶೆಟ್ಟಿ ಹಾಗೂ ಗ್ರಾಮ ಪ೦ಚಾಯತ್ ಸದಸ್ಯರಾದ ನಿತ್ಯಾನ೦ದ ಕೆಮ್ಮಣ್ಣು, ಜಿ.ಪ೦ ಸದಸ್ಯೆ ಉಪಸ್ಥಿತರಿದ್ದರು. ವೆರೋನಿಕಾ ಕರ್ನೇಲಿಯೋರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿದರು.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Veez Konkani Issue # 135Veez Konkani Issue # 135
Cut down your medical expenses. With Manipal Arogya CardCut down your medical expenses. With Manipal Arogya Card
OXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREAOXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREA
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums