ದೊಡ್ಡಣಗುಡ್ಡೆ ಮನೆದರೋಡೆ ಪ್ರಕರಣ:ಕಾರು ಹಾಗೂ ಒಬ್ಬ ಆರೋಪಿಯ ಬ೦ಧನ-3ಮ೦ದಿಗಾಗಿ ವ್ಯಾಪಕ ಶೋಧ


jayaprakash kini
kemmannunewsnetwork, 09-03-2012 13:58:19


Write Comment     |     E-Mail To a Friend     |     Facebook     |     Twitter     |     Print


Udupi, Mar 9: Police have arrested a 26-year-old youth in connection with the robbery and stabbing incident reported at a house in Doddanagudde on the night of Sunday March 4.

The arrested is Sringesh, who hails from Mavalli in Teerthahalli, Shimoga.

ಮಣಿಪಾಲ:ಮಾ,9.ಕಳೆದ 4 ದಿನಗಳ ಹಿಂದೆ ಉಡುಪಿಯ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಯ ಬಳಿ ಶ್ರೀಮತಿ ಕನಕ ಅಮೀನ್ ರವರ ಮನೆಗೆ ರಾತ್ರಿ ಸುಮಾರು 10:30 ಗಂಟೆಗೆ 4 ಜನ ಯುವಕರು ನುಗ್ಗಿ ಚಾಕು ತೋರಿಸಿ ಮನೆಯಲ್ಲಿದ್ದ ಕನಕ ರವರ ತಮ್ಮನಾದ ವಾಸುದೇವ ಪೂಜಾರಿ ರವರ ಬಲ ಭುಜಕ್ಕೆ ಹಾಗೂ ಕಾಲಿಗೆ ತಿವಿದು ರಕ್ತ ಗಾಯ ಮಾಡಿ,ಮನೆಯಲ್ಲಿದ್ದ ಸಂಬಂಧಿಕರಾದ ಪ್ರಕಾಶ ಮತ್ತು ಗುರುದಾಸ ಇವರುಗಳ ಬಾಯಿಗೆ ಪ್ಲಾಸ್ಟರ್‌ನ್ನು ಅಂಟಿಸಿ ಅವರೆಲ್ಲರನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ, ಮನೆಯಲ್ಲಿದ್ದ, 60 ಗ್ರಾಂನ 6 ಬಳೆಗಳು, 25 ಗ್ರಾಂ ನ ವೈಟ್‌ ಚಿನ್ನದ ಬಳೆ-1, ಬಾದಾಮಿ ಆಕಾರದ ಪೆಂಡೆಂಟ್‌ ಇರುವ 35 ಗ್ರಾಂನ ಚೈನ್‌- 1, ವಜ್ರದ ಉಂಗುರ- 1, ಅಮೆರಿಕನ್‌ ಡೈಮಂಡ್‌ ಉಂಗುರ-1, ವಜ್ರದ ಕಿವಿಯ ಬೆಂಡೊಲೆ (ಮಾಟಿ ಸಹಿತ)- 1, ಮೂರು ವಾಚ್‌ಗಳು, ನಗದು 1,75,000/- ರೂಪಾಯಿ, ಮೂರು ಮೊಬೈಲ್‌ಗಳು, ಒಂದು ಲ್ಯಾಪ್‌ಟಾಪ್‌, ಲಕ್ಷ್ಮಿ ಪೆಂಡೆಂಟ್‌ ಇರುವ 35 ಗ್ರಾಂ ಚೈನ್‌ ಹಾಗೂ 26 ಗ್ರಾಂನ ಎರಡು ಬಳೆಗಳನ್ನು ಸುಲಿಗೆ ಮಾಡಿಕೊಂಡು, ವರಾಂಡದಲ್ಲಿದ್ದ ಒಂದು ಇನ್ನೊವಾ ಕಾರನ್ನು (ಕೆ.ಎ 20 ಎನ್ 8868) ಸಹ ಕೊಂಡು ಹೋಗಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ರೂ. 14,50,000/- ಗಳಾಗಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸದಾನಂದ ತಿಪ್ಪಣ್ಣವರ್ ಇವರು ತನಿಖೆ ಮಾಡುತ್ತಿರುತ್ತಾರೆ.

ಪ್ರಕರಣವು ಅತೀ ಗಂಭೀರ ಸ್ವರೂಪದಾದ್ದರಿಂದ, ಉಡುಪಿಯ ಪೊಲೀಸ್ ಅಧೀಕ್ಷಕರಾದ ಡಾ. ಎಂ.ಬಿ ಬೋರಲಿಂಗಯ್ಯ ರವರ ಸೂಚನೆಯಂತೆ ಉಡುಪಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ.ವಿ ವೆಂಕಟೇಶಪ್ಪ ಇವರ ಮಾರ್ಗದರ್ಶನದಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ ಪ್ರಭುದೇವ್ ಬಿ. ಮಾನೆ ರವರು ಈ ಪ್ರಕರಣದಲ್ಲಿಯ ಸುಲಿಗೆ ಮಾಡಿದ ಸೊತ್ತುಗಳನ್ನು ಮತ್ತು ಆರೋಪಿತರನ್ನು ಪತ್ತೆ ಮಾಡುವ ಸಲುವಾಗಿ ಉಡುಪಿ ವೃತ್ತ ನಿರೀಕ್ಷಕರಾದ ಗಿರೀಶ್‌ ಎಸ್‌.ವಿ ಹಾಗೂ ಬ್ರಹ್ಮಾವರ ಠಾಣೆಯ ಪಿ.ಎಸ್.ಐ ರವರಾದ ಗಿರೀಶ್ ಕುಮಾರ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರವಿಚಂದ್ರ, ಸುಧೀರ, ಕೃಷ್ಣ ಪ್ರಸಾದ್‌, ರತ್ನಾಕರ, ಹಾಗೂ ಅಬ್ದುಲ್ ಖಾದರ್‌ ರವರನ್ನು ಒಳಗೊಂಡಂತೆ ಒಂದು ವಿಶೇಷ ಪತ್ತೆ ತಂಡವನ್ನು ರಚಿಸಿದ್ದಿರುತ್ತದೆ.

ಸುಲಿಗೆ ಮಾಡಿದ ಆರೋಪಿತರು ಸೋಮೇಶ್ವರ ಪೊಲೀಸ್ ಚೆಕ್ ಪೋಸ್ಟ್ ಮೂಲಕ ಹೋದ ಬಗ್ಗೆ ಅಲ್ಲಿ ಕರ್ತವ್ಯ ದಲ್ಲಿದ್ದ ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿಗಳಾದ ರಾಮ್‌ದಾಸ್ ನಾಯಕ್ ಮತ್ತು ಸುರೇಂದ್ರ ಭೋವಿ ಇವರಿಂದ ಸುಳಿವು ಪಡೆದು, ಅದರ ಜಾಡು ಹಿಡಿದು ಆರೋಪಿಗಳ ಬೆನ್ನು ಹತ್ತಿದ ವಿಶೇಷ ಪತ್ತೆ ತಂಡವು, ಬೆಂಗಳೂರಿನಲ್ಲಿ ನಾಲ್ಕು ದಿನ ಹೊಂಚು ಹಾಕಿ, ಬೆಂಗಳೂರು ಹೊರವಲಯದ ದೇವರ ಚಿಕ್ಕನಹಳ್ಳಿಯಲ್ಲಿ ನಿನ್ನೆ ದಿನಾಂಕ 08/03/2012 ರಂದು ಪ್ರಕರಣದ ಪ್ರಮುಖ ಆರೋಪಿ ಶೃಂಗೇಶ (26), ತಂದೆ: ವಾಸುದೇವ ಆಚಾರಿ, ವಾಸ: ಮಂಡಗದ್ದೆ, ಮೂವಳ್ಳಿ, ಹೆಮ್ಮಕ್ಕಿ ಗ್ರಾಮ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ. ಎಂಬಾತನನ್ನು ಸುಲಿಗೆ ಮಾಡಿದ ಇನೋವಾ ಕಾರಿನೊಂದಿಗೆ ಪತ್ತೆ ಮಾಡಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡು ಇನೋವಾ ಕಾರನ್ನು, ಸುಲಿಗೆ ಮಾಡಿದ ಹಣದಲ್ಲಿ ತನ್ನ ಪಾಲಿಗೆ ಬಂದಿದ್ದ ಹಣದಲ್ಲಿ ಖರ್ಚು ಮಾಡಿ ಉಳಿದ ರೂ 22,000/- ಹಣವನ್ನು, ಒಂದು ಚಿನ್ನದ ಉಂಗುರ, ಒಂದು ಜೊತೆ ಬೆಳ್ಳಿಯ ಕಾಲು ಗೆಜ್ಜೆ, ಹಾಗೂ 3 ಬಂಗಾರ ಬಣ್ಣದ ಲೇಡಿಸ್ ವಾಚನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಅಪಾದಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ 3ಮ೦ದಿ ಜನ ಆರೋಪಿತರನ್ನು ಪತ್ತೆ ಮಾಡಿ, ಅವರಿಂದ ಸುಲಿಗೆ ಮಾಡಿದ ಉಳಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಬೇಕಾಗಿರುತ್ತದೆ. ಇವರನ್ನು ಪತ್ತೆ ಮಾಡಲು ವಿಶೇಷ ಪತ್ತೆ ತಂಡವು ಸತತವಾಗಿ ಕಾರ್ಯನಿರತವಾಗಿದ್ದು, ಸದ್ಯದಲ್ಲೆ ಅವರನ್ನು ಪತ್ತೆ ಮಾಡಿ ಉಳಿದ ಸೊತ್ತುಗಳನ್ನು ವಶಪಡಿಸಿಕೊಳ್ಳುವ ವಿಶ್ವಾಸವಿದೆ. ಶೀಘ್ರ ಗತಿಯಲ್ಲಿ ಪ್ರಕರಣವನ್ನು ಭೇದಿಸಿದ ವಿಶೇಷ ಪತ್ತೆ ತಂಡದ ಕಾರ್ಯಕ್ಕೆ ಮತ್ತು ಆರೋಪಿ ಸುಲಿಗೆಕೋರರ ಬಗ್ಗೆ ಸುಳಿವು ನೀಡಿದ ಹೆಬ್ರಿ ಪೊಲೀಸ್ ಠಾಣೆಯ ಚೆಕ್ ಪೋಸ್ಟ್ ಸಿಬ್ಬಂದಿಗಳ ಕರ್ತವ್ಯ ನಿಷ್ಠೆಯ ಬಗ್ಗೆ ಪೊಲೀಸ್‌ ಅಧೀಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸಿರುತ್ತಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Open Air Dance and Music Festival at Aryan Resorts, near Kemmannu on 7th March.Open Air Dance and Music Festival at Aryan Resorts, near Kemmannu on 7th March.
Campus Selection at Milagres College, KallianpurCampus Selection at Milagres College, Kallianpur
KEMMANNU CHURCH - Weekly Announcements.KEMMANNU CHURCH - Weekly Announcements.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 113Veez Konkani Illustrated Weekly e-Magazine # 113
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India