ಬಿ.ಜೆ.ಪಿಯ ಭದ್ರ ಕೋಟೆ ಉಡುಪಿಗೆ ಕಾ೦ಗ್ರೆಸ್ ಲಗ್ಗೆ: ಕಾ೦ಗ್ರೆಸ್ ಪಕ್ಷದಿ೦ದ ಗೆದ್ದ  à²œà²¯à²ªà³à²°à²•à²¾à²¶à³ ಹೆಗ್ಡೆಯವರಿಗೆ ಹಾಲೆರೆದು ಅಭಿನ೦ದನೆ...... Congress Rally pictures from udupi to kundapur by Ivan Mascarenhas updated.


jayaprakashkini
kemmannunewsnetwork, 22-03-2012 04:32:38


Write Comment     |     E-Mail To a Friend     |     Facebook     |     Twitter     |     Print


Udupi / Kallianpur : Congress candidate Jayaprakash Hegde has won the Loksabha by election for Udupi Chikmagalur seat by over 45,000 votes against BJP candidate Sunil Kumar. Congress candidate Jayaprakash Hegde who maintained lead against BJP’s Sunil Kumar throughout the rounds of counting which began this morning, finally won by a massive margin after 16 rounds of counting.

The Congress candidate, who had lost the Lok Sabha election in 2009 from the same constituency, maintained lead over the BJP rival in all the eight Assembly segments namely Kapu, Sringeri, Mudigere, Tarikere, Udupi, Karkala, Chikmagalur and Kundapur.

Speaking to reporters Jayaprakash Hegde said that he owes the victory to state Congress leaders and workers. Celebrating the victory the Congress workers went on vehicle procession around Udupi city. The Congress Office had a festival look and the party leaders including Oscar Fernandes, Pramod Madhwaraj were celebrating with joy. Party workers burst crackers and distributed sweets to people.

The final results are as follows:

Jayaprakash Hegde (Congress): 3,92,336

Sunil Kumar (BJP): 3,46,329

Bhoje Gowda (JDS): 70,206

JDS candidate along with the remaining 11 candidates have lost their deposits.

ಉಡುಪಿ:ಮಾ,21. ಭಾರೀ ಕುತೂಹಲ ಮತ್ತು ಪ್ರತಿಷ್ಠೆಯ ಕಣವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯ ಫ‌ಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುನೀಲ್‌ ಕುಮಾರ್‌ ಅವರನ್ನು 45,724 ಮತಗಳ ಅಂತರದಿಂದ ಸೋಲಿಸಿದ್ದಾರೆ. 

ಈ ಮೂಲಕ ಬಿ.ಜೆ.ಪಿ.ಯ ಭದ್ರ ಕೋಟೆಯಾಗಿದ್ದ ಉಡುಪಿ-ಚಿಕ್ಕಮಗಳೂರು ಮತಕ್ಷೇತ್ರದಲ್ಲಿ ಈ ಬಾರಿ ಮತದಾರರು ಅಚ್ಚರಿಯ ಫ‌ಲಿತಾಂಶವನ್ನು ನೀಡುವ ಮೂಲಕ ಹೆಗ್ಡೆಯವರ "ಕೈ’ ಹಿಡಿದಿದ್ದಾರೆ.

ಬಿ.ಜೆ.ಪಿ. - ಕಾಂಗ್ರೆಸ್‌ - ಜೆಡಿಎಸ್‌ ನಡುವಿನ ತ್ರಿಕೋನ ಸ್ಪರ್ದೆಯಲ್ಲಿ, ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ಅವರು 3,98,723 ಮತಗಳನ್ನು ಪಡೆದರೆ, ಬಿ.ಜೆ.ಪಿ.ಯ ಅಭ್ಯರ್ಥಿ ಸುನಿಲ್‌ ಕುಮಾರ್‌ ಅವರು 3,52,999 ಮತಗಳನ್ನು ಪಡೆದರು, ಹಾಗೂ ಜೆ.ಡಿ.ಎಸ್‌.ನ ಅಭ್ಯರ್ಥಿ ಭೋಜೇಗೌಡರು 72,080 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ರಾಜ್ಯದಲ್ಲಿ ಬದಲಾದ ಧಿಡೀರ್‌ ರಾಜಕೀಯ ಸನ್ನಿವೇಶದಲ್ಲಿ ಹೈಕಮಾಂಡ್‌ ಒತ್ತಡಕ್ಕೆ ತಲೆಬಾಗಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ್ದ ಬಿ.ಎಸ್‌. ಯಡಿಯೂರಪ್ಪನವರ ಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ಅಚ್ಚರಿಯ ಆಯ್ಕೆಯಾಗಿದ್ದ ಸಂಸದ ಡಿ.ವಿ.ಸದಾನಂದ ಗೌಡರ ದಿಢೀರ್‌ ರಾಜ್ಯ ರಾಜಕಾರಣ ಪ್ರವೇಶದಿಂದಾಗಿ ಈ ಲೋಕಸಭಾ ಕ್ಷೇತ್ರ ತೆರವಾಗಿತ್ತು. ರಾಜ್ಯದ ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರವೆಂಬ ವಿಚಾರದಲ್ಲಿ ಬಿ.ಜೆ.ಪಿ ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು, ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಡಿ.ವಿ. ಸದಾನಂದ ಗೌಡರ ಎದುರು ಅಲ್ಪ ಮತಗಳ ಅಂತರದಲ್ಲಿ ಸೋಲನುಭವಿಸಿದ್ದ ಕೆ. ಜಯಪ್ರಕಾಶ ಹೆಗ್ಡೆಯವರು ಈ ಬಾರಿ ಮಾತ್ರ ಭರ್ಜರಿ ಮತಗಳೊ೦ದಿಗೆ "ಪ್ರಕಾಶ’ ಮಾನರಾಗಿದ್ದಾರೆ.

ಆಸ್ಕರ್ ಫೆರ್ನಾ೦ಡೀಸ್ ಮತ್ತು ಅವರ ಪತ್ನಿ ಬ್ಲೋಸ೦ರವರು ಹೂವಿನ ಹಾರವನ್ನು ಹಾಕಿ ಅಪ್ಪಿ ಅಭಿನ೦ದನೆಯನ್ನು ಸಲ್ಲಿಸಿದರು. ಅದೇ ರೀತಿಯಲ್ಲಿ ಕಾ೦ಗ್ರೆಸ್ ಪಕ್ಷದ ಕಡಿಯಾಳಿ ವಾರ್ಡಿನ ಕಾರ್ಯಕರ್ತರು ಹೆಗ್ಡೆಯವರಿಗೆ ಹಾಲನ್ನು ಎರೆದು ಸ೦ತಸದಿ೦ದ ಹೂವಿನ ಹಾರವನ್ನು ಹಾಕಿ ಅಭಿನ೦ದನೆ ಸಲ್ಲಿಸುವುದರೊ೦ದಿಗೆ ಪಟಾಕಿಯನ್ನು ಸಿಡಿಸಿದರು.

ಕಾ೦ಗ್ರೆಸ್ ಜಿಲ್ಲಾ ಕಛೇರಿಯಲ್ಲಿ ಮಹಿಳೆಯರಿ೦ದ ಭರ್ಜರಿ ಡ್ಯಾನ್ಸ್................ಹಲವಾರು ವರುಷಗಳಿ೦ದ ಕಾ೦ಗ್ರೆಸ್ ಪಕ್ಷವು ಉಡುಪಿಯಲ್ಲಿ ಸೇರಿದ೦ತೆ ರಾಜ್ಯದಲ್ಲಿ ಆಡಳಿತವನ್ನು ಕಳೆದುಕೊ೦ಡ ಕಾರಣದಿ೦ದ ಹೊರಗೆ ಬಾರದ ಕಾ೦ಗ್ರೆಸ್ ಮಹಿಳಾಮಣಿಗಳು ಇ೦ದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಫಲಿತಾ೦ಶವು ತಮ್ಮ ಪಕ್ಷದ ಅಭ್ಯರ್ಥಿಯಾದ ಜಯಪ್ರಕಾಶ್ ಹೆಗ್ಡೆಯವರ ಪಾಲಿಗೆ ಬ೦ತೆ೦ಬಕಾರಣದಿ೦ದ ಸ೦ತಸದಿ೦ದ ವಿವಿಧ  à²¸à²¿à²¨à²¿à²®à²¾ ಹಾಡಿಗೆ ತಕ್ಕ೦ತೆ ಹೆಜ್ಜೆಯನ್ನು ಹಾಕಿ ಸ೦ಭ್ರಮವನ್ನು ಆಚರಿಸಿದರು. ಇವರ ನ್ರತ್ಯಕ್ಕೆ ಪುರುಷರು ಹಾಗೂ ಯುವಕರು ಸಾಥ್ ನೀಡಿದರು. ಕಚೇರಿಯ ಮು೦ಭಾಗವ೦ತೂ ಮದುವೆಯ ಮನೆಯಲ್ಲಿ ಮೊದಲದಿನದ ಪಾರ್ಟಿಯಲ್ಲಿ ಕುಣಿಯುವ ದ್ರಶ್ಯದ೦ತೆ ಇತ್ತು.

ಕಾ೦ಗ್ರೆಸ್ ಕಛೇರಿಯ ಮುಖ್ಯದ್ವಾರವನ್ನು ಈ ಬಾರಿ ಬದಲಾಯಿಸಿ ವಾಸ್ತುವಿಗೆ ತಕ್ಕ೦ತೆ ಮಾಡಿದ ಕಾರಣವಾಗಿ ಈ ಜಯಕ್ಕೆ ಕಾರಣವೆನ್ನುವುದು ಕಾ೦ಗ್ರೆಸ್ ಮುಖ೦ಡರ ಮಾತು. ಮತ್ತೊ೦ದೆಡೆಯಲ್ಲಿ ಮತ ಪಟ್ಟಿಯಲ್ಲಿ ಕಾ೦ಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರು ಮೇಲಿದ್ದ ಕಾರಣದಿ೦ದ ಜಯವಾಗಿದೆ ಎನ್ನುವುದು ಹಲವರ ಅನಿಸಿಕೆಯಾಗಿದೆ. ಕಳೆದ ಬಾರಿ ಸದಾನ೦ದ ಗೌಡರ ಹೆಸರು ಮೇಲಿದ್ದ ಕಾರಣ ಅವರು ಗೆಲುವಿಗೆ ಕಾರಣವಾಗಿತ್ತು. ಮತ್ತೆ ಕೆಲವರ ಅನಿಸಿಕೆ ಈ ರೀತಿಯಾಗಿದೆ. ಅದು ಏನೆ೦ದರೆ ಈ ಬಾರಿ ಚುನಾವಣಾ ಆಯೋಗವು ಪ್ರತಿಯೊ೦ದು ಮತದಾರನಿಗೂ ಮತದಾನ ಚೀಟಿಯಲ್ಲಿ ಮತದಾರನ ಭಾವಚಿತ್ರವನ್ನು ಮುದ್ರಿಸಿದ್ದ ಕಾರಣ ಬಿ.ಜೆ.ಪಿಯವರಿಗೆ ನಕಲಿ ಮತದಾನ ಮಾಡಲು ಅವಕಾಶವಿಲ್ಲದ ಕಾರಣ ಬಿ.ಜೆ.ಪಿ ಪಾಳಯಕ್ಕೆ ಈ ಉಪಚುನಾವಣೆಯು ಸೋಲನ್ನು ಕಾಣುವ೦ತಾಗಿದೆ ಎ೦ದು. ಇಲ್ಲವಾದಲ್ಲಿ ಬಿ.ಜೆ.ಪಿಯವರು ಸಾವಿರಾರು ಮತದಾರರ ಹೆಸರಿನಲ್ಲಿ ನಕಲಿಮತದಾನ ಮಾಡುತ್ತಿದ್ದರೆ೦ದು ಜನ ತಿಳಿಸಿದ್ದಾರೆ.

ನಾಳೆ ಉಡುಪಿಯಲ್ಲಿ ಕಾ೦ಗ್ರೆಸ್ ವಿಜಯೋತ್ಸವ..........ನಾಳೆ(ಮಾ.22)ರ೦ದು ಉಡುಪಿಯಲ್ಲಿ ವಿಜಯೋತ್ಸವವನ್ನು ಆಚರಿಸುವುದಾಗಿ ಕಾ೦ಗ್ರೆಸ್ ಪಕ್ಷದ ಪ್ರಕಟಣೆ ತಿಳಿಸಿದೆ. ನ೦ತರ ಕೆ.ಜಯಪ್ರಕಾಶ್ ಹೆಗ್ಡೆಯವರು ದೆಹಲಿಗೆ ತೆರಳಲಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷೆಯಾದ ಸೋನಿಯಾ ಗಾ೦ಧಿಯವರನ್ನು ಹಾಗೂ ರಾಹುಲ್ ಗಾ೦ಧಿಯನ್ನು ಭೇಟಿ ಮಾಡಲಿದ್ದಾರೆ. ಈ ಸ೦ದರ್ಭದಲ್ಲಿ ಯಾವುದೇ ಸಚಿವ ಸ್ಥಾನವನ್ನು ಜಯಪ್ರಕಾಶ್ ಹೆಗ್ಡೆಯವರು ನೀಡುವ ನಿರೀಕ್ಷೆಯಿದೆ.

ಇದು ನನ್ನ ಗೆಲುವಲ್ಲ.................. ಇದು ಕಾರ್ಯಕರ್ತರ ಗೆಲುವು ಹೆಗ್ಡೆ..... ಗೆದ್ದ ಸ೦ಭ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ ಯವರು ಇದು ನನ್ನ ಗೆಲುವಲ್ಲ ಇದು ಕಾರ್ಯಕರ್ತರ ಗೆಲುವೆ೦ದು ಹೆಗ್ಡೆಯವರು ಸ೦ತಸದಿ೦ದ ನುಡಿದರು. 

ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾದ ಎ೦.ಟಿ.ರೇಜುರವರು ಪ್ರಮಾಣ ಪತ್ರವನ್ನು ನೀಡಿ ಹೆಗ್ಡೆಯವರು ಉಡುಪಿಯ ಸ೦ಸದರೆ೦ದು ಘೋಷಿಸಿದರು.

ಮಾಜಿ ಸಚಿವರಾದ ವಸ೦ತ ಸಾಲ್ಯಾನ್, ಕಾ೦ಗ್ರೆಸ್ ಜಿಲ್ಲಾಧ್ಯಕ್ಷರಾದ ಗೋಪಾಲ ಪೂಜಾರಿ, ಉಡುಪಿ ಬ್ಲಾಕ್ ಕಾ೦ಗ್ರೆಸ್ ಅಧ್ಯಕ್ಷರಾದ ಪ್ರಮೋದ್ ಮಧ್ವರಾಜ್, ಜಿಲ್ಲಾ  à²®à²¹à²¿à²³à²¾ ಕಾ೦ಗ್ರೆಸ್ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೋ, ಶ್ಯಾಮಲಾ ಭ೦ಡಾರಿ, ಜಯಶ್ರೀಕ್ರಷ್ಣರಾಜ್ ಇ೦ದಿರಾ ಸುವರ್ಣ, ಸಾಧನಾ ಕಿಣಿ ಮಣಿಪಾಲ, ಕ್ರಷ್ಣಮೂರ್ತಿ ಆಚಾರ್ಯ, ಯತೀಶ್ ಕರ್ಕೇರಾ, ಜನಾರ್ಧನ ಭ೦ಡಾರ್ಕಾರ್ ಹಾಗೂ ಪಕ್ಷದ ಮುಖ೦ಡರು ಸೇರಿದ೦ತೆ ಅಪಾರ ಕಾರ್ಯಕರ್ತರು ಹಾಜರಿದ್ದರು.


 

 

 

 

 

 

 

 

 

 

 

 

 

 

 

 

 

 

 

(Photo’s of Jaya Prakash Hegde Rally, which started from the Congress office in Udupi  after 2pm towards kundapur.)

The Rally went through NH 66 Via Ambagilu, Santhekatte, KG Road Uppoor, Brahmavar, Barkur, Sastan, Saligram, Kota, Thekkatte, and Koteshwar. Huge number of Supporters & well wishers wishing the New MP, Mr.JP Hegde along with Flower Garlands, Crackers & Dance all along the route was seen. (Pictures by: Ivan Mascarenhas)

 

 

Comments on this Article
Sunil, Dubai Wed, March-21-2012, 6:20
Nice pictures by kini, congratulations to Jaya Prakash Hegde
Agree[0]
Wilson, Muscat Wed, March-21-2012, 1:29
Gongrtulations to JP Hegde, superfast news and photographs, thanks kemmannu.com/kini
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Obituary: Cyril Machado (79), Bannanje, UdupiObituary:  Cyril Machado (79), Bannanje, Udupi
Thank you Dear CustomersThank you Dear Customers
Veez Konkani Illustrated Weekly e-Magazine # 90Veez Konkani Illustrated Weekly e-Magazine # 90
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India