ಉಡುಪಿಯ ಶ್ರೀಕೃಷ್ಣ ಬಾಲ ನಿಕೇತನದಲ್ಲಿ ಅವಕಾಶ ವಂಚಿತ ಮಕ್ಕಳಿಗಾಗಿ ಬೇಸಿಗೆ ಶಿಬಿರ ಉದ್ಘಾಟನೆ



jayaprakashkini
kemmannunewsnetwok, 09-05-2012 13:07:50


Write Comment     |     E-Mail To a Friend     |     Facebook     |     Twitter     |     Print


 

ಉಡುಪಿ:ಮೇ,9. ಸಮಾಜದಲ್ಲಿ ಭವಿತವ್ಯದ ದಿಕ್ಕು ಕಾಣದೆ ಹತಾಶರಾಗಿರುವ ಅವಕಾಶ ವಂಚಿತ ಮಕ್ಕಳ ಅನಾಥ ಪ್ರಜ್ಞೆಯನ್ನು ದೂರಮಾಡಿ ಅವರನ್ನು ಸುಸಂಕೃತರನ್ನಾಗಿ ಹಾಗೂ ಸುಶಿಕ್ಷಿತರನ್ನಾಗಿ ಮಾಡುವ ಸಂಕಲ್ಪದಿಂದ ಶ್ರೀ ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಶ್ರೀ ಕೃಷ್ಣ ಬಾಲನಿಕೇತನವನ್ನು ಸಂಸ್ಥಾಪಿಸಿದರು. ಇಂದು 50 ಮಂದಿ ಮಕ್ಕಳಿಗೆ ಇಲ್ಲಿ ಉಚಿತ ಅಶನ,ವಸನ, ವಸತಿ, ಸ್ಥಳೀಯ ಶಾಲೆಗಳಲ್ಲಿ ಶಿಕ್ಷಣದ ವ್ಯವಸ್ಥೆ, ಭಾರತೀಯ ಮೂಲ ಸಂಸ್ಕೃತಿಯ ಪರಿಚಯ, ನೀತಿಬೋಧನೆ, ವ್ಯಕ್ತಿತ್ವ ವಿಕಸನ ಶಿಬಿರಗಳು ಇತ್ಯಾದಿಗಳನ್ನು ಅಳವಡಿಸಿ ಅವರ ವ್ಯಕ್ತಿತ್ವ ರೂಪಣೆಗೆ ಎಲ್ಲಾ ರೀತಿಯಲ್ಲಿ ಶ್ರಮಿಸಲಾಗುತ್ತಿದೆ.

ಶ್ರೀಕೃಷ್ಣ ಬಾಲನಿಕೇತನದಲ್ಲಿ ಅವಕಾಶ ವಂಚಿತ ಹಾಗೂ ಅನಾಥ ಮಕ್ಕಳಿಗಾಗಿ ವ್ಯಕ್ತ್ವಿತ್ವ ವಿಕಸನ ಹಾಗೂ ಕ್ರಿಯಾಶೀಲತೆಯನ್ನು ಉದ್ದೀಪನಗೊಳಿಸುವ ಬೇಸಿಗೆ ಶಿಬಿರವನ್ನು ರೋಟರಿ, ಉಡುಪಿ ಮತ್ತು ರೋಟರಿ ಉಡುಪಿ ಮಿಡ್ ಟೌನ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಸಾಮೂಹಿಕ ಯೋಗ, ಕವಾಯತು, ಕರಕುಶಲ ವಸ್ತುಗಳ ತಯಾರಿಕೆ, ನಮ್ಮ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ರಂಗಕಲೆಗಳ ತರಬೇತಿ,ನೀತಿ ಮತ್ತು ಇತಿಹಾಸ ಶಿಕ್ಷಣ , ಮಾನಸಿಕ ಹಾಗೂ ದೈಹಿಕ ಆರೋಗ್ಯ ತಪಾಸಣೆ ಮತ್ತು ಶುಶ್ರೂಷೆ ಮುಂತಾದವುಗಳನ್ನು ಅಳವಡಿಸಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಸೂಕ್ತ ಮಾರ್ಗದರ್ಶನ ನೀಡಲು ಬಾಲನಿಕೇತನವು ಎಲ್ಲಾ ಸಿದ್ಧತೆಗಳನ್ನು ನಡೆಸಿದೆ.

ಶಿಬಿರಾರ್ಥಿಗಳು: ಶ್ರೀ ಕೃಷ್ಣ ಬಾಲನಿಕೇತನದ ೫೦ ಮಂದಿ ಮಕ್ಕಳಲ್ಲದೆ, ಸರಕಾರಿ ಪ್ರಾಯೋಜಿತ ಬಾಲಮ‌ಒಂದಿರ ನಿಟ್ಟೂರು ಇಲ್ಲಿಯ ಮಕ್ಕಳು, ಕೃಷ್ಣಾನುಗ್ರಹ, ವಸುಂದರ ನಗರ, ಉಡುಪಿ ಇಲ್ಲಿಯ ಮಕ್ಕಳು ಮಾತ್ರವಲ್ಲ ಸಾರ್ವಜನಿಕ ವಲಯದಿಂದಲೂ ಹಲವಾರು ಮಕ್ಕಳು – ಒಟ್ಟು ಸುಮಾರು ೧೬೦ ಮಂದಿ ೬ ರಿಂದ ೧೬ ವಯಸ್ಸಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.

ಶ್ರೀ ಕೃಷ್ಣ ಬಾಲನಿಕೇತನದ ವತಿಯಿಂದ ನಡೆಯುತ್ತಿರುವ ಈ ಶಿಬಿರದ ಉದ್ಘಾಟನೆಯನ್ನು ಬಾಲನಿಕೇತನದ ಆವರಣದಲ್ಲಿ ಬುಧವಾರದ೦ದು ಶ್ರೀಪೇಜಾವರ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊ೦ಡಿತು. 

ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಸಾರಿಗೆ ಉದ್ಯಮಿ ರೊ. ಪಾಂಗಾಳ ರಬೀಂದ್ರ ನಾಯಕ್ ಹಾಗೂ ಉಡುಪಿ ರೋಟರಿ ಅಧ್ಯಕ್ಷ ಬಿ.ಜಿ. ವಾರಂಬಳ್ಳಿ, ರೋಟರಿ ಉಡುಪಿ ಮಿಡ್ ಟೌನ್ ಅಧ್ಯಕ್ಷರಾದ ದಿನೇಶ್ ಬೀಡು ಸಮಾರ೦ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯರವರು ವರದಿಯನ್ನು ಮ೦ಡಿಸಿ, ಜೋನಲ್ ಲೆಫ್ಟಿನೆಂಟ್ ಸುಬ್ರಹ್ಮಣ್ಯ ಬಾಸ್ರಿ ರವರು ಕಾರ್ಯಕ್ರಮವನ್ನು ನಿರೂಪಿಸಿ, ವ೦ದಿಸಿದರು. ನ೦ತರ ಮಕ್ಕಳಿ೦ದ ವಿವಿಧ ಸಾ೦ಸ್ಕ್ರತಿಕ ಕಾರ್ಯಕ್ರಮ ನಡೆಯಿತು.  

 

 

 

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

Funeral Details: Lilly Lewis (76), Baligre Kudru, KemmannuFuneral Details Lilly Lewis (76), Baligre Kudru, Kemmannu
ICYM Kemmannu - Jingle Bells 2019ICYM Kemmannu - Jingle Bells 2019
Milagres CollegeMilagres College
Veez Konkani Global Weekly e_magazine 103Veez Konkani Global Weekly e_magazine 103
Senora Unisex Salon opened in GSJ Galaxy, Santhekatte, KallianpurSenora Unisex Salon opened in GSJ Galaxy, Santhekatte, Kallianpur
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India