ಬತ್ತಿ ಹೋದ ಸ್ವರ್ಣನದಿ ಮಡಿಲು: ನಗರದಲ್ಲಿ ನೀರಿಗಾಗಿ ಪರದಾಟ- ಸರಕಾರದಿ೦ದ ಬರವನ್ನು ಪರಿಹರಿಸಲು ಬ೦ದ ಹಣ ಎಲ್ಲಿಗೆ ಹೋಯಿತು?


jayaprakashkini
kemmannunewsnetwok, 16-05-2012 15:43:44


Write Comment     |     E-Mail To a Friend     |     Facebook     |     Twitter     |     Print


ವಿಶೇಷ ಚಿತ್ರ/ವರದಿ:ಜಯಪ್ರಕಾಶ್ ಕಿಣಿ, ಉಡುಪಿ.

ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರುಣಿಸುವ ಪ್ರಮುಖ ಮೂಲವಾದ ಸ್ವರ್ಣಾ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು ಹಲವು ದಿನಗಳಿಂದ ಉಡುಪಿ ನಗರದ ಮತ್ತು ಸುತ್ತಲಿನ ಗ್ರಾಮ ಪ೦ಚಾಯತ್  à²¹à²¾à²—ೂ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬುಧವಾರದ೦ದು ಕೆಮ್ಮಣ್ಣು ಡಾಟ್ ಕಾ೦ ತ೦ಡವು ಸ್ವರ್ಣನದಿಯ ಪ್ರಥಮ ಹಾಗೂ ದ್ವಿತೀಯ ಹ೦ತದ ಅಣೆಕಟ್ಟು ಪ್ರದೇಶಕ್ಕೆ  à²­à³‡à²Ÿà²¿ ನೀಡಿದಾಗ ಇನ್ನು ಕೆಲವೇ ದಿನಗಳಿಗೆ ಬೇಕಾಗುವಷ್ಟು ನೀರು ಮಾತ್ರ ಲಭ್ಯ. ಮತ್ತೆ  à²•à³†à²°à³† - ಬಾವಿಗಳನೀರೇ ಗತಿ ನಿಶ್ಚಿತ.  

ನೀರಿಗಾಗಿ ಉಡುಪಿ ನಗರ ಸಭೆಯು ಸುಮಾರು 57ಕೋಟಿ ಹಣವನ್ನು ಕೇವಲ ಅಣೆಕಟ್ಟನ್ನು ಕಟ್ಟಲು ಉಪಯೋಗಿಸಿದೆ. ಮತ್ತು  à²ªà³à²°à²¥à²® ಹ೦ತದಿ೦ದ ನೀರನ್ನು ನೇರವಾಗಿ ಮಣಿಪಾಲದ ಕೆ.ಎ೦.ಸಿಗೆ ನೀಡಲಾಗುತ್ತಿದೆ ಎ೦ದು ಮೂಲವೊ೦ದರ ಮುಖಾ೦ತರ ತಿಳಿದು ಬ೦ದಿದೆ. ಕೆಮ್ಮಣ್ಣು ಡಾಟ್ ಕಾ೦ ವರದಿಗಾರರು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದ ಚಿತ್ರವನ್ನು ಕ೦ಡರೆ ಎಲ್ಲವೂ ನಿಮಗೆ ಅರ್ಥವಾಗಬಲ್ಲದು.

ದ್ವಿತೀಯ ಹ೦ತದ ಅಣೆಕಟ್ಟು ಪ್ರದೇಶದಲ್ಲಿ ಕಲ್ಲುಗಳ ರಾಶಿ ತು೦ಬಿದೆ. ಮತ್ತು ನೀರು ಸರಿಯಾಗಿ ಶೇಖರಣೆಯಾಗಲು ಬೇಕಾಗುವ ಸ್ಥಳದಲ್ಲಿ ಹೂಳು ತು೦ಬಿದೆ. ಇದನ್ನು ಸರಿಯಾದ ರೀತಿಯಲ್ಲಿ ನದಿ ದ೦ಡೆಗೆ ಎತ್ತಿ ಹಾಕಿದರೆ ನೀರು ಶೇಖರಣೆ ಸಹಾಯವಾಗಬಹುದು.

ಪ್ರಥಮ ಹ೦ತದ ಅಣೆಕಟ್ಟಿನ ಮು೦ಭಾಗದಲ್ಲಿ ಉಡುಪಿಯ ಉದ್ಯಮಿಯೊಬ್ಬರು ಹೊರಹರಿಯುವ ನೀರನ್ನು ತಡೆದು ಕಿರುವಿದ್ಯುತ್ ಸ್ಥಾವರವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದರೆ ಎಷ್ಟು ದಿನ ಇವರು ವಿದ್ಯುತನ್ನು ತಯಾರಿಸಿ ನ೦ತರ ಈ ಸ್ಥಾವರವನ್ನು ಮುಚ್ಚಿ ಅಲ್ಲಿ ರೆಸಾರ್ಟ್ ನ್ನು ನಿರ್ಮಿಸುತ್ತಾರೆ೦ದು ಕಾದು ನೋಡಬೇಕಾಗಿದೆ. ಈ ಎಲ್ಲ ಕಾಮಗಾರಿಗೆ ಅನುಮತಿಯನ್ನು ಸರಕಾರ ನೀಡಿತೇ ಅಥವಾ ಸ್ಥಳೀಯ ಗ್ರಾ.ಪ೦ ನೀಡಿತೇ ಅಥವಾ ನಗರ ಸಭೆ ನೀಡಿತೇ ಮತ್ತು ಕಾಣದ ಕೈಗಳಿಗೆ ಕತ್ತಲಲ್ಲಿ ಹಣದ ಬ್ಯಾಗ್ ಕಾಣದ ಕೈಗಳಿ೦ದ ಜನಪ್ರತಿನಿಧಿಗಳಿಗೆ ತಲುಪಿದ್ದರಿ೦ದ ಇದಕ್ಕೆ ಕಾರಣವಾಗಿರ ಬಹುದೆ೦ದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೇ ಆಗಲಿ ಅ೦ದು ಭಾರೀ ಪ್ರಚಾರಕ್ಕೆ ಕಾರಣವಾದ ಸ್ವರ್ಣನದಿ  à²¦à³à²µà²¿à²¤à³€à²¯ ಹ೦ತದ ಕುಡಿಯುವ ನೀರಿ ವ್ಯವಸ್ಥೆ ಇ೦ದು ಜನಪ್ರತಿನಿಧಿಗಳಿಗೆ ಶಾಪವಾಗಿ ಪರಿಣಮಿಸಿದೆ.

ಮು೦ದಿನ ದಿನಗಳಲ್ಲಿ  à²¬à³ƒà²¹à²¤à²¾à²—ಿ ಬೆಳೆಯಲಿರುವ ಉಡುಪಿ ನಗರಕ್ಕೆ ನೀರು ಎಲ್ಲಿ೦ದ ನೀಡುವುದೆ೦ದು ಈಗಲೇ ಪರಿಹಾರ ಸೂತ್ರವನ್ನು ಕ೦ಡುಹಿಡಿಯುವುದು ಅಗತ್ಯವಾಗಿದೆ. 

ಸ್ವರ್ಣ ಎರಡನೇ ಹ೦ತದ ಕಾಮಗಾರಿಯಾದರೆ ಮಾತ್ರ ನಗರಕ್ಕೆ ನೀರಿನ ಸಮಸ್ಯೆಯಿಲ್ಲವೆ೦ದು ಜ೦ಭಕೊಚ್ಚಿಕೊಳ್ಳುತ್ತಿದ್ದ ಜನಪ್ರತಿನಿಧಿಗಳು ಈಗೇನು ಹೇಳುತ್ತಾರೆ? ......

ಓಟು ಬ್ಯಾ೦ಕಿಗಾಗಿ ರಾಜಕೀಯ ಪಕ್ಷವೊ೦ದು ಇಲ್ಲಿನ ನೀರನ್ನು ಪ೦ಚಾಯತ್ ಗಳಿಗೆ ನೀಡಿದ್ದೇ ಈಗ ನಗರಕ್ಕೆ ನೀರಿನ ಸಮಸ್ಯೆ ಹುಟ್ಟಲು ಕಾರಣವೇ ಹೊರತು ಬೇರೆ ಏನೂ ಅಲ್ಲ.

ಉಡುಪಿ ನಗರ, ಮಣಿಪಾಲದ ಈಶ್ವರನಗರ, ಹುಡ್ಕೊ ಕಾಲನಿ,ದೊಡ್ನಗುಡ್ಡೆ, 80ಬಡಗುಬೆಟ್ಟು, ಮೂಡಬೆಟ್ಟು , ಕೊಡಂಕೂರು ಮೊದಲಾದೆಡೆ ಕುಡಿಯುವ ನೀರಿನ ಸಮಸ್ಯೆ ತೀವ್ರ ರೀತಿಯಲ್ಲಿ  à²‰à²‚ಟಾಗಿದೆ. ನದಿಯಲ್ಲಿ ನೀರಿನ ಪ್ರಮಾಣ  à²¸à³¦à²ªà³‚ರ್ಣ ಕಡಿಮೆಯಾಗಿದೆ. ಹಾಗಾಗಿ ಬಜೆ ಅಣೆಕಟ್ಟಿನ ಮೈನ್‌ ಪಂಪ್‌ ಇರುವಲ್ಲಿಗೆ ನೀರಿನ ಹರಿವು ಆಗುತ್ತಿಲ್ಲ ಮತ್ತು ನೀರನ್ನು ಮೇಲೆತ್ತಲು ಸಮಸ್ಯೆಯಾಗಿದೆ. ಅದಕ್ಕಾಗಿ ನೀರು ನಿಂತಿರುವ ಸ್ಥಳಗಳಿಗೆ ಪ್ರತ್ಯೇಕ ಪಂಪ್‌ಗ್ಳನ್ನು ಅಳವಡಿಸಿ ನೀರು ಮೇಲೆತ್ತಲು ಕ್ರಮ ಕೈಗೊಳ್ಳಲಾಗುತ್ತಿದೆ ಎ೦ದು ನಗರ ಸಭೆಯ ಪ್ರಕಟಣೆ ಹೇಳಿದೆಯಾದರೂ ಎಲ್ಲವೂ ಸತ್ಯವಲ್ಲ. 

’ಪುತ್ತಿಗೆ ಬ್ರಿಡ್ಜ್ ಮತ್ತು ಮಾಣೈ ಬ್ರಿಡ್ಜ್ ಬಳಿ ಎರಡು ಪಂಪ್‌ಗ್ಳನ್ನು ಅಳವಡಿಸಲಾಗಿದೆ. ಉಳಿದ ಒಂದೆರಡು ಕಡೆಗಳಲ್ಲೂ ಇದೇ ರೀತಿಯ ಪಂಪ್‌ಗ್ಳನ್ನು ಹಾಕಲಾಗುವುದು. 

ಟ್ಯಾಂಕರ್‌ ಸಿಗುತ್ತಿಲ್ಲ ? : ಟ್ಯಾಂಕರ್‌ ಗಳ ಮೂಲಕ ನೀರು ಪೂರೈಸುವ ಪ್ರಯತ್ನವನ್ನು ಮಣಿಪಾಲದಲ್ಲಿ ಮಾಡಲಾಗಿದ್ದರೂ ಕೆಲವು ಟ್ಯಾಂಕರ್‌ ಮಾಲಕರು ಬರಲು ಒಪ್ಪಲಿಲ್ಲ. ಹೆಚ್ಚುವರಿ ಬಾಡಿಗೆ ಕೊಟ್ಟರೂ ಮನೆ ಮನೆಗೆ ತೆರಳಿ ನೀರು ನೀಡಲು ಟ್ಯಾಂಕರ್‌ನವರು ಒಪ್ಪುತ್ತಿಲ್ಲ ಎಂದು ಕೆಲವು ಮಂದಿ ನಗರಸಭಾಸದಸ್ಯರುಗಳು ಹೇಳುತ್ತಿದ್ದಾರೆ. ಇವರಿಗೆ ಜನರ ಚಿ೦ತೆಯಿಲ್ಲ ಇವರೆಲ್ಲರೂ ಲ್ಯಾ೦ಡ ವ್ಯವಹಾರದಲ್ಲಿ ಡಿಲಿ೦ಗ್ ಮಾಡುವಲ್ಲಿ ತೊಡಗಿದ್ದಾರೆ. ನಗರದ ಎಲ್ಲಾ ಹೊಟೇಲ್ ಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದೆ.

ಮಳೆ ಬಾರದಿದ್ದರೆ?

ಕೆಲವು ದಿನಗಳ ಹಿ೦ದೆ ಉಡುಪಿ ಜಿಲ್ಲೆಯ ಕೆಲವೆಡೆಯಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಸ್ವರ್ಣೆ ನದಿ ಹರಿಯುವ ಪ್ರದೇಶದಲ್ಲಿ ಮಳೆಯಾಗದೆ ಸಮಸ್ಯೆಯಾಗಿದೆ. ಕಾರ್ಕಳ, ಎಣ್ಣೆಹೊಳೆ ಅಥವಾ ಆಗುಂಬೆ ಭಾಗದಲ್ಲಿ ಮಳೆಯಾಗಿದ್ದರೂ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಕಳೆದ ಬಾರಿ ಮಾರ್ಚ್‌ ತಿಂಗಳಲ್ಲೇ ಮಧ್ಯಂತರ ಮಳೆಯಾಗಿದ್ದರಿಂದ ನೀರಿನ ಸಮಸ್ಯೆ ಉದ್ಭವಿಸಿರಲಿಲ್ಲ. ಈಗ ಮತ್ತೆ ಮಳೆಯನ್ನೇ ಕಾಯಬೇಕಾದ ಅನಿವಾರ್ಯತೆ ಬಂದಿದೆ. ಮುಂದಿನ 10-15 ದಿನಗಳಲ್ಲಿ ಮಳೆಯಾಗದಿದ್ದರೆ ನೀರಿನ ಸಮಸ್ಯೆ ಉಲ್ಬಣಿಸುವ ಆತಂಕವಿದೆ.

’ಒಮ್ಮೆ ನೀರಿನ ಟ್ಯಾಂಕ್‌ ಖಾಲಿಯಾದುದರಿಂದಾಗಿ ಸಮಸ್ಯೆಯಾಯಿತು. ಈಗ ಎರಡು ಹೆಚ್ಚುವರಿ ಪಂಪ್‌ಗ್ಳನ್ನು ಹಾಕಿ ನೀರು ತುಂಬಿಸಲಾಗುತ್ತಿದೆ. ಹಾಗಾಗಿ ಮುಂದಿನ 10-15 ದಿನಗಳವರೆಗೆ ಸಮಸ್ಯೆ ಉಂಟಾಗದು’ ಎಂದು ನಗರಸಭೆ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಆಗಿರುವುದೇನು?:- ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು ಹೌದು. ಆದರೆ ನೀರು ಇದೆ. ಬಂಡೆಕಲ್ಲುಗಳ ತಡೆಯಿಂದಾಗಿ ಅದು ಮುಖ್ಯಪಂಪ್‌ನ ಸ್ಥಳಕ್ಕೆ ಹರಿಯುವುದು ಕಡಿಮೆಯಾಗಿದೆ. ಹಾಗಾಗಿ ನೀರು ಇರುವ ಸ್ಥಳಗಳಿಗೆ ಪಂಪ್‌ ಹಾಕಬೇಕಾಗಿದೆ. ಡ್ರಜ್ಜಿಂಗ್‌ ಪಂಪ್‌ಗ್ಳನ್ನು ಬಳಸಿ ನೀರೆತ್ತುವ ಕಾರ್ಯಆರಂಭಗೊಂಡಿದೆ.

ಸರಕಾರದಿ೦ದ ನೀರಿನ ಸಮಸ್ಯೆಯನ್ನು ಪರಿಹರಿಸಲು ಬ೦ದ ಹಣ ಎಲ್ಲಿಗೆ ಹೋಯಿತು? ಇದಕ್ಕೆ ಜಿಲ್ಲಾಧಿಕಾರಿಯವರು ನೇರ ಹೊಣೆಗಾರರಾಗಿದ್ದಾರೆ. 

Comments on this Article
CDS, Kemmannu Thu, May-17-2012, 4:27
Thanks Mr.Kini for taking pain to go the source of quenching our thirst i.e, source of our drinking water’ Great photographs. I wonder with the rapid development of Udupi and Manipal it is better, people develop the habit of filling their toilet plush with mineral water. Hope the Municipality will collect some additional tax from the wealthy builders, who are mushrooming like mushrooms in the rainy season.
Agree[0]
Rain, Rani-NaGAR Thu, May-17-2012, 1:07
A sadhu, who had attained nirvana, was in deep prayer. He was in Nirvana, perhaps he was high on smoking. His beard, hair and scanty clothes got on fire. His desciples tried to awake him but he admonished them, "Dont bother me, I am praying for Rain to put out this fire." Pray folks pray, it will rain pretty soon....
Agree[0]
Vinoda, Dubai/Udupi Wed, May-16-2012, 7:19
Alarming situation!! Good pictures
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Udupi: Traffic congestion and dangers to pedestria
View More

Milagres Milana 2020 on 26th Jan.Milagres Milana 2020 on 26th Jan.
Milarchi Laram - Issue Jan 2020Milarchi Laram - Issue Jan 2020
Veez Konkani Global Weekly e_magazine 109Veez Konkani Global Weekly e_magazine 109
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India