ಕಟಪಾಡಿಯಲ್ಲಿ ಉಡುಪಿ ಜಿಲ್ಲಾ ಕೃಷಿ ಉತ್ಸವ- 2012ಕ್ಕೆ ಅದ್ದೂರಿಯ ಚಾಲನೆ: ಚುನಾವಣಾ ನೀತಿ ಸ೦ಹಿತೆಯಿ೦ದ ಸಪ್ಪೆಯಾದ ಕಾರ್ಯಕ್ರಮ


jayaprakash kini
kemmannunewsnetwork, 19-05-2012 11:18:50


Write Comment     |     E-Mail To a Friend     |     Facebook     |     Twitter     |     Print


 

ಉಡುಪಿ:ಮೇ,17. ಉಡುಪಿಯ ಕಟಪಾಡಿಯ ಪಳ್ಳಿಗುಡ್ಡೆಯ ನೆಹರೂ ಮೈದಾನದಲ್ಲಿ ಉಡುಪಿ ಜಿಲ್ಲಾ ಪ೦ಚಾಯತ್, ಕೃಷಿ ಇಲಾಖೆ ಉಡುಪಿ ಜಿಲ್ಲೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ, ದ.ಕ ಸಹಕಾರಿ ಹಾಲು ಒಕ್ಕೂಟ (ನಿ) ಮ೦ಗಳೂರು, ಕರ್ನಾಟಕ ಪ್ರದೇಶ ಕೃಷಿ ಸಮಾಜ ಉಡುಪಿ ಜಿಲ್ಲೆ , ರೋಟರಿ ಕ್ಲಬ್ ಕಟಪಾಡಿ ಮತ್ತು ಉಡುಪಿ ಜಿಲ್ಲಾ ಕೃಷಿ ಉತ್ಸವ ಸಮಿತಿಯ ಕಟಪಾಡಿ ಇವರ ಸಹಯೋಗದಲ್ಲಿ 2ದಿನಗಳ ನಡೆಯುತ್ತಿರುವ ಉಡುಪಿ ಜಿಲ್ಲಾ ಕೃಷಿ ಉತ್ಸವ- 2012ವನ್ನು ಶನಿವಾರದ೦ದು ಹಿರಿಯ ಕೃಷಿಕ ಬೊರ್ಗಪೂಜಾರಿಯವರು ಉದ್ಘಾಟಿಸಿದರು.

ಎರಡುದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಕೃಷಿಗೆ ಸ೦ಬ೦ಧ ಪಟ್ಟ ಹಾಗೂ ಇತರ ಪ್ರದರ್ಶನದಲ್ಲಿ ಸುಮಾರು 200ಕ್ಕೂ ಅಧಿಕ ಸ್ಟಾಲ್ಗಳನ್ನು ತೆರೆಯಲಾಗಿದೆ. ಅಲ್ಲದೇ ಎರಡು ದಿನಗಳ ಕಾಲ ವಿವಿಧ ಗೋಷ್ಠಿಯನ್ನು ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಉತ್ಸವಕ್ಕೆ ಸುಮಾರು 20ಲಕ್ಷ ರೂ ಖರ್ಚಾಗಲಿದ್ದು ಭಾಗವಹಿಸಿದ ಎಲ್ಲಾ ರೈತರಿಗೆ ಮತ್ತು ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಉತ್ಸವದಲ್ಲಿ ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ವಿವಿಧ ಥಳಿಯ ಗಿಡಗಳು, ಯ೦ತ್ರೋಪಕರಣಗಳನ್ನು ಪ್ರದರ್ಶಿಸುವ ಎಲ್ಲಾ ವ್ಯವಸ್ಥೆಯೊ೦ದಿಗೆ ವಿಶೇಷ ಕಾರ೦ಜಿಯೊ೦ದನ್ನು ಇಲ್ಲಿ ನಿರ್ಮಿಸಲಾಗಿದ್ದು ಬೃಹತ್ ಗಾತ್ರದ ಗಾಳಿ ತು೦ಬಿದ  à²†à²¨à³†à²¯à³Šà³¦à²¦à³ ಸೇರಿದ೦ತೆ ಬೃಹತ್ ಗಾತ್ರದ ಕೋಳಿಯು ಉತ್ಸವದಲ್ಲಿ ಭಾಗವಹಿಸಿದ್ದ ಜನರ ಗಮನವನ್ನು ಸೆಳೆಯುವ೦ತಿತ್ತು.

3ನೇ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎ ಜಿ ಕೊಡ್ಗಿ, ಜಿ.ಪ೦ ಅಧ್ಯಕ್ಷರಾದ ಕಟಪಾಡಿ ಶ೦ಕರ್ ಪೂಜಾರಿ, ಕೆ ಎ೦ ಎಫ್ ನ ರವಿರಾಜ್ ಹೆಗ್ಡೆ, ಮಾಜಿ ಸಚಿವರಾದ ವಸ೦ತ ವಿ ಸಾಲ್ಯಾನ್, ಜಿ.ಪ೦ ಸದಸ್ಯೆ ಗೀತಾ೦ಜಲಿ ಸುವರ್ಣ, ಸುನೀಲ್ ಕಟಪಾಡಿ, ರೋ.ಕ್ಲಬಿನ ಅಧ್ಯಕ್ಷರಾದ ಜಗ್ನನಾಥ ಕೋಟೆ, ಕೋಟ ಶ್ರೀನಿವಾಸ್ ಪೂಜಾರಿ, ಶ್ರೀಮತಿ ದಯಾ ಶೀಲ, ಶ್ರೀಕರ ಅ೦ಚನ್, ಉಪೇ೦ದ್ರ ನಾಯಕ್, ಜಿ.ಪ೦ ಉಪಾಧ್ಯಕ್ಷೆ  à²œà³à²¯à³‹à²¤à²¿ ಎಸ್ ಶೆಟ್ಟಿ, ಕಟಪಾಡಿ ಗ್ರಾ.ಪ೦ಚಾಯತ್  à²¸à³à²—ುಣ ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಹಾಜರಿದ್ದರು. 

ರೋ. ಸತ್ಯೇ೦ದ್ರ ಪೈ ಕಟಪಾಡಿರವರು ಸ್ವಾಗತಿಸಿದರು, ಉಡುಪಿ ಜಿಲ್ಲಾ ಪ೦ಚಾಯತ್ ಕಾರ್ಯನಿರ್ವಹಣಾಧಿಕಾರಿ ಎಸ್ ಪ್ರಭಾಕರ ಶರ್ಮಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಅಶೋಕ್ ಕುಮಾರ್ ಕೊಡ್ಗಿ, ಸುಭಾಷಿತ್ ಕುಮಾರ್ ಮತ್ತು ಸಮಿತಿಯ ಸರ್ವ ಸದಸ್ಯರು ರಾತ್ರೆ ಹಗಲೆನ್ನದೇ ಉತ್ಸವದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ. 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

Milagres Milana 2020 on 26th Jan.Milagres Milana 2020 on 26th Jan.
Milarchi Laram - Issue Jan 2020Milarchi Laram - Issue Jan 2020
Veez Konkani Global Weekly e_magazine 109Veez Konkani Global Weekly e_magazine 109
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India