Udupi Colorful dances, parade mark Independence Day Celebrations,ಸಂವಿಧಾನಕ್ಕೆ ಬದ್ಧರಾಗಿ ನಡೆಯುವುದೇ ಸ್ವಾತಂತ್ರ್ಯ: ಉಡುಪಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜವರಳಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ


jpkiniudupi
KNW, 16-08-2012 06:38:05


Write Comment     |     E-Mail To a Friend     |     Facebook     |     Twitter     |     Print


Udupi, Aug 15: Minister of Muzarai and Udupi District- in charge minister Kota Srinivas Poojary graced the 66th Independence Day ceremony here on Wednesday August 15 and said that the BJP-led state government is giving importance to development not only in urban areas but in rural places as well.

Addressing a gathering of district officials, students, military units and the public, Poojary said that the government has sanctioned several projects on three basic aspects - economic, social and agricultural.

"Importance will be given to road development and even more to drinking water projects. Several projects have been initiated for the welfare of the poor," he said.

ಉಡುಪಿ:ಆ,15. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಮನ ಬಂದಂತೆ ವರ್ತಿಸುವುದಲ್ಲ. ಸ್ವಾ- ತಂತ್ರಕ್ಕೆ ಅಂದರೆ, ಅನುಶಾಸನಕ್ಕೆ ಅರ್ಥಾತ್ ಸಂವಿಧಾನಕ್ಕೆ ಬದ್ಧರಾಗಿ ನಡೆಯುವುದೇ ಸ್ವಾತಂತ್ರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜವರಳಿಸಿ, ಗೌರವ ರಕ್ಷೆ ಸ್ವೀಕರಿಸಿ, ಪಥ ಸಂಚಲನ ವೀಕ್ಷಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

ಸ್ವಾತಂತ್ರ್ಯಾನಂತರ ಭಾರತ, ತನಗೆ ತಾನೇ ಸಂವಿಧಾನವೊಂದನ್ನು ರಚಿಸಿಕೊಂಡು ರಾಷ್ಟ್ರವನ್ನು ಮುನ್ನಡೆಸುತ್ತಿದೆ. ಹೀಗಾಗಿ ಸಂವಿಧಾನಕ್ಕೆ ಬದ್ಧರಾಗಿ ನಡೆಯುವುದೇ ಸ್ವಾತಂತ್ರ್ಯಕ್ಕೆ ನಾವು ನೀಡುವ ಗೌರವ ಎಂದು ಪ್ರತಿಪಾದಿಸಿದರು.

ರಾಷ್ಟ್ರವೇ ದೇವರು, ರಾಷ್ಟ್ರೀಯ ಭಾವನೆಯೇ ನಮ್ಮ ಜೀವನ ಎಂಬ ಮನೋಭಾವದಿಂದ ದೇಶದ ಪ್ರಗತಿಗೆ ನಮ್ಮೆಲ್ಲರ ಆಕಾಂಕ್ಷೆಗಳು ಬೆಳೆಯಲಿ ಹಾಗೂ ಸಾಮಾಜಿಕ ಮತ್ತು ವ್ಯಕ್ತಿಗತ ಮೌಲ್ಯಗಳಿಗೆ ನಾವೆಲ್ಲ ಪ್ರಾಮುಖ್ಯತೆ ನೀಡೋಣ. ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ತಲೆಮಾರಿಗೆ ತಿಳಿಸಿ ಅವರ ಬದುಕು ಅರಳಿಸಬೇಕು. ದೇಶದ ಕಲ್ಯಾಣಕ್ಕಾಗಿ ಕಟಿಬದ್ಧರಾಗಬೇಕು. ಆ ಮೂಲಕ ಹೊಸ ನಾಡನ್ನು ಕಟ್ಟಬೇಕು ಎಂದವರು ಆಶಿಸಿದರು.

ಪರಸ್ಪರ ಐಕ್ಯಮತ್ಯದಿಂದ ಜೀವಿಸಬೇಕೆಂಬ ಆಶಯ ವ್ಯಕ್ತಪಡಿಸಿದ ಸಚಿವ ಕೋಟ, ಸರಕಾರ ಜನತೆಯ ಕಲ್ಯಾಣಕ್ಕಾಗಿ ವಿಭಿನ್ನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಮೂಲಭೂತ ಸೌಕರ್‍ಯಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದೆ. ಆರ್ಥಿಕ, ಸಾಮಾಜಿಕ ಮತ್ತು ಕೃಷಿ ಸಂಪನ್ಮೂಲಗಳೆಂಬ ಶೀರ್ಷಿಕೆಯಡಿ ಕಾರ್‍ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ರಸ್ತೆ, ವಿದ್ಯುತ್, ನೀರಾವರಿ ಯೋಜನೆ ಸಾಕಾರಗೊಳಿಸಲಾಗುತ್ತಿದೆ.

ಬಡವರ ಕಲ್ಯಾಣ ಯೋಜನೆ ಅನುಷ್ಠಾನಗೊಳಿಸಲಾಗಿದ್ದು ಜಿಲ್ಲೆಯಲ್ಲಿ 16,731 ವೃದ್ಧಾಪ್ಯ ವೇತನ, 42,724 ಸಂಧ್ಯಾಸುರಕ್ಷಾ, 20,249 ಅಂಗವಿಕಲ ವೇತನ, 36,710ವಿಧವಾವೇತನ ನೀಡಲಾಗಿದೆ. ಕಂದಾಯ ಇಲಾಖೆಯ ಈಚಿನ ತಿದ್ದುಪಡಿಯನ್ವಯ 12 ಸಾವಿರಕ್ಕೂ ಅಧಿಕ ಮಂದಿ ಬಡವರಿಗೆ ಹಕ್ಕುಪತ್ರ ನೀಡಲುದ್ದೇಶಿಸಲಾಗಿದೆ. ಆದರ್ಶ ವಿವಾಹ ಯೋಜನೆಯಡಿ 40 ಮಂದಿಗೆ ಠೇವಣಿ ಇರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ 2,584 ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದೆ. ಬಾಲ ಸಂಜೀವಿನಿ ಯೋಜನೆಯಡಿ ಅಪೌಷ್ಠಿಕತೆಯಿಂದ ಬಳಲುತ್ತಿರುವ 74ಮಕ್ಕಳಿಗೆ ಆರೋಗ್ಯ ಸೌಲಭ್ಯ, ಪೌಷ್ಠಿಕ ಆಹಾರ ಒದಗಿಸಲಾಗಿದೆ. ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ವಿವಿಧ ಕಲ್ಯಾಣ ಯೋಜನೆ ಜಾರಿಗೊಳಿಸಲಾಗಿದೆ

ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಗತ ಸಾಲಿನಲ್ಲಿ 15,46 ಕೋ. ವೆಚ್ಚದಲ್ಲಿ ೪೫೮ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಪ್ರಸಕ್ತ ಸಾಲಿಗೆ 33.96 ಕೋ. ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 183 ಕಾಮಗಾರಿ ಹಾಗೂ 13ನೇ ಹಣಕಾಸು ಯೋಜನೆ ರಸ್ತೆ ನಿರ್ವಹಣೆ ಯೋಜನೆಯಡಿ 331 ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಸವ ವಸತಿ ನೆ, ಮತ್ಸ್ಯಾಶ್ರಯ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯಡಿ 326 ಲಕ್ಷ ರೂ. ಅನುದಾನ ಮಂಜೂರಾಗಿದೆ.

ಸ್ವರ್ಣ ಜಯಂತಿ ಸ್ವರೋಜ್‌ಗಾರ್ ಯೋಜನೆಯಡಿ 227 ಸ್ವಸಹಾಯ ಗುಂಪು ಹಾಗೂ ೪೩ ವೈಯಕ್ತಿಕ ಫಲಾನುಭವಿಗಳಿಗೆ ಅನುಕ್ರಮವಾಗಿ 415 ಲಕ್ಷ ಮತ್ತು 122 ಲಕ್ಷ ಸಹಾಯಧನ ವಿತರಿಸಲಾಗಿದೆ. ಕೃಷಿ ಇಲಾಖೆ ವತಿಯಿಂದ ಸುವರ್ಣ ಭೂಮಿ ಯೋಜನೆಯಡಿ ಕೃಷಿ ಚಟುವಟಿಕೆಗಾಗಿ 131 ಲಕ್ಷ ಹಾಗೂ ಸಾವಯವ ಕೃಷಿ ಅಭಿವೃದ್ಧಿಗಾಗಿ 121 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಕೃಷಿ ಯಾಂತ್ರೀಕರಣ ಯೋಜನೆ, ಬಿತ್ತನೆ ಬೀಜ ವಿತರಣೆ, ಭೂಚೇತನ ಇತ್ಯಾದಿ ಕಾರ್‍ಯಕ್ರಮಗಳು ಜಿಲ್ಲೆಯಲ್ಲಿ ಅನುಷ್ಠಾನದಲ್ಲಿದೆ. ಆರೋಗ್ಯ ಇಲಾಖೆಯ ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ ಯೋಜನೆ ಕಾರ್‍ಯಗತವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ 147.42 ಲಕ್ಷ ಮೌಲ್ಯದ ಪಠ್ಯಪುಸ್ತಕ ವಿತರಣೆ, ಅನುದಾನಿತ ಶಾಲಾ ಮಕ್ಕಳಿಗೆ 101.33ಲಕ್ಷ ಮೌಲ್ಯದ ಸಮವಸ್ತ್ರ ವಿತರಿಸಲಾಗಿದ್ದು,8ನೇ ತರಗತಿಯ 11,903 ಮಕ್ಕಳಿಗೆ ಬೈಸಿಕಲ್ ನೀಡಲುದ್ದೇಶಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 4 ಬಾಲಕ- ಬಾಲಕಿಯರ ವಿದ್ಯಾರ್ಥಿನಿಲಯ ಮಂಜೂರಾಗಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ವತಿಯಿಂದ 1,423 ವಿದ್ಯಾರ್ಥಿಗಳಿಗೆ 49,83ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ ಎಂದರು. ಕೊರಗ ಸಮುದಾಯ ಅಭಿವೃದ್ಧಿ, ಅಗತ್ಯವಿರುವಲ್ಲಿ ಯಾತ್ರಿ ನಿವಾಸ ಸ್ಥಾಪನೆ, ಕೆರೆಗಳ ಪುನರುಜ್ಜೀವನ, ಪ್ರಾಕೃತಿಕ ವಿಕೋಪದಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರಧನ ವಿತರಣೆ ಇತ್ಯಾದಿ ಪೂರೈಸಲಾಗಿದೆ.

ಜಿಲ್ಲೆಯಲ್ಲಿ ಸಕಾಲ ಯೋಜನೆ ಜಾರಿಯಲ್ಲಿದ್ದು, ಕಾಯ್ದೆ ಅನುಷ್ಠಾನಗೊಂಡ ಬಳಿಕ ಬಂದ 1,28,935 ಅರ್ಜಿ ಪೈಕಿ 1,20,830ಅರ್ಜಿ ವಿಲೇಗೊಳಿಸಲಾಗಿದ್ದು, ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ, ರಾಜ್ಯದಲ್ಲಿ ೮ನೇ ಸ್ಥಾನದಲ್ಲಿದೆ. ಮೂಲಗೇಣಿ ಮಾಲಿಕರಿಗೆ ಭೂಮಾಲಿಕತ್ವ ಹಕ್ಕು ನೀಡುವ ಕಾಯ್ದೆಗೆ ರಾಷ್ಟ್ರಪತಿ ಅಂಗೀಕಾರ ಮಾಡಿದ್ದು, ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಅಗತ್ಯವಿರುವಲ್ಲಿ ಆರೋಗ್ಯ ಕವಚ ವಿಸ್ತರಣೆ, ರಾಜ್ಯ ಹೆದ್ದಾರಿ ವಿಸ್ತರಣೆ, ಪ್ರಾಣಿಗಳಿಗೆ ತುರ್ತು ಚಿಕಿತ್ಸಾ ಆಂಬುಲೆನ್ಸ್ ಜಾರಿ ಇತ್ಯಾದಿ ಶೀಘ್ರ ಆರಂಭಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯ ೩ನೇ ಹಣಕಾಸು ಆಯೋಗ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎ. ಜಿ. ಕೊಡ್ಗಿ, ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಡಾ. ಎಂ. ಟಿ. ರೆಜು, ಎಸ್‌ಪಿ ಡಾ. ಬೋರಲಿಂಗಯ್ಯ ಇದ್ದರು. ಜಿ. ಪಂ. ಉಪಾಧ್ಯಕ್ಷೆ ಜ್ಯೋತಿ ಶೆಟ್ಟಿ, ನಗರಸಭೆ ಅಧ್ಯಕ್ಷ ಕಿರಣ್‌ಕುಮಾರ್, ಜಿ. ಪಂ. ಸಿ‌ಇ‌ಓ ಪ್ರಭಾಕರ ಶರ್ಮ, ನಗರಸಭೆಪೌರಾಯುಕ್ತ ಗೋಕುಲದಾಸ ನಾಯಕ್ ಇದ್ದರು.

ಪೊಲೀಸ್, ಎನ್‌ಸಿಸಿ- ಎನ್‌ಎಸ್‌ಎಸ್, ಸೇವಾದಳ, ವಿದ್ಯಾರ್ಥಿಗಳಿಂದ ಪಥ ಸಂಚಲನ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳು, ವೈಯಕ್ತಿಕ ಸಾಧಕರು, ಸರಕಾರದ ಯೋಜನೆ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದ ಸಂಸ್ಥೆಗಳನ್ನು ಸಚಿವರು ಸನ್ಮಾನಿಸಿದರು. ಪೊಲೀಸ್ ಮೀಸಲು ಪಡೆ ಮುಖ್ಯಸ್ಥ ಎಂ. ಎಂ. ಯಾದವಾಡ್ ಪೆರೇಡ್ ನಡೆಸಿಕೊಟ್ಟರು. ಶಿಕ್ಷಕ ಕುದಿ ವಸಂತ ಶೆಟ್ಟಿ ನಿರೂಪಿಸಿದರು. 

 

 

 

 

 

 

 

 

 

 

 

 

 

 

 

 

 

 

 

 

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
ನನ್ನ ಸ್ನೇಹಿತರಲ್ಲಿ ನನ್ನದೊಂದು ಅರಿಕೆ.ನನ್ನ ಸ್ನೇಹಿತರಲ್ಲಿ ನನ್ನದೊಂದು ಅರಿಕೆ.
Veez Konkani Issue #122Veez Konkani Issue #122
Veez Konkani Weekly - Issue # 121Veez Konkani Weekly - Issue # 121
Smparka Feb 2020Smparka Feb 2020
Land for Sale at Neelavara, Udupi District.Land for Sale at Neelavara, Udupi District.
Milagres English Medium, School, KallianpurMilagres English Medium, School, Kallianpur
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India