ತುಳಸಿ ಗಬ್ಬರ್ಡ್‌ ದಾಖಲೆ: ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿರುವ ಮೊದಲ ಹಿಂದು-ಅಮೆರಿಕನ್‌ ಮಹಿಳೆ


jayaprakash kini
KNWT, 07-11-2012 15:52:20


Write Comment     |     E-Mail To a Friend     |     Facebook     |     Twitter     |     Print


Washington, Nov 7 — While all five Indian-American candidates hoping to enter the US Congress lost out, Tulsi Gabbard today created history by becoming the first Hindu-American to enter the US House of Representatives.
 
An Iraq war veteran, 31-year-old Gabbard defeated K. Crowley of the Republican Party with a handsome margin in Hawaii’s second Congressional district. Her victory has been cheered by the Hindu-American community across the country.


The heavily Democratic district also elected one of two Buddhists to have ever served in the Congress, Mazie Hirono, who won her seat in 2006 but is now running for the US Senate.
 
Born in American Samoa to a Catholic father and a Hindu mother, Gabbard moved to Hawaii when she was two. In 2002, at age 21, she was elected to the Hawaii state legislature.
 
The next year, she joined the Hawaii National Guard, and in 2004 was deployed to Baghdad as a medical operations specialist. After completing officers’ training, she was deployed to Kuwait in 2008 to train the country’s counter-terrorism units.
 
"Although there are not very many Hindus in Hawaii, I never felt discriminated against. I never really gave it a second thought growing up that any other reality existed, or that it was not the same everywhere," Gabbard said in a statement soon after she took an unbeatable lead over her Republican challenger.
 
"On my last trip to the mainland, I met a man who told me that his teenage daughter felt embarrassed about her faith, but after meeting me, she’s no longer feeling that way," Gabbard said.
 
"He was so happy that my being elected to Congress would give hope to hundreds and thousands of young Hindus in America, that they can be open about their faith, and even run for office, without fear of being discriminated against or attacked because of their religion," Gabbard said.
 
At 21, Gabbard became the youngest person elected to the Hawaii legislature. At 23, she was the state’s first elected official to voluntarily resign to go to war. At 28, she was the first woman to be presented with an award by the Kuwait Army National Guard.
 

ತುಳಸಿ ಗಬ್ಬರ್ಡ್‌ ದಾಖಲೆ: ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿರುವ ಮೊದಲ ಹಿಂದು-ಅಮೆರಿಕನ್‌ ಮಹಿಳೆ


ವಾಷಿಂಗ್ಟನ್‌: ಹವಾಯಿ ಸಂಸದೀಯ ಕ್ಷೇತ್ರದಲ್ಲಿ ಎದುರಾಳಿ ರಿಪಬ್ಲಿಕನ್‌ ಪಾರ್ಟಿಯ ಅಭ್ಯರ್ಥಿಯನ್ನು ಭಾರೀ ಮತಗಳ ಅಂತರದಿಂದ ಮಣಿಸಿ ಗೆದ್ದಿರುವ ತುಳಸಿ ಗಬ್ಬರ್ಡ್‌ ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿರುವ ಮೊದಲ ಹಿಂದು-ಅಮೆರಿಕನ್‌ ಮಹಿಳೆ ಎನ್ನುವ ಇತಿಹಾಸ ರಚಿಸಿದ್ದಾರೆ.
 
ಇರಾಕ್‌ ಸಮರ ವೀರ ವನಿತೆಯಾಗಿರುವ 31ರ ಹರೆಯದ ತುಳಸಿ ಎದುರಾಳಿ ಕೆ. ಕ್ರೌಲಿ ಅವರನ್ನು ಏಕಪಕ್ಷೀಯ ಸ್ಪರ್ಧೆಯಲ್ಲಿ ಭಾರೀ ಅಂತರದಿಂದ ಕೆಡವಿದ್ದಾರೆ. ದೇಶವ್ಯಾಪಿ ಇರುವ ಹಿಂದು-ಅಮೆರಿಕನ್‌ ಸಮುದಾಯದವರು ತುಳಸಿ ಗೆಲುವಿಗೆ ಸಂಭ್ರಮಿಸುತ್ತಿದ್ದಾರೆ.
 
ಶೇ.50ರಷ್ಟು ಮತ ಎಣಿಕೆ ಮುಗಿಯುತ್ತಿರುವಾಗಲೇ ತುಳಸಿ 1,20,000 ಮತಗಳ ಬೆನ್ನಟ್ಟಲಾಗದ ಮುನ್ನಡೆಯನ್ನು ಸಾಧಿಸಿಯಾಗಿತ್ತು. ಹವಾಯಿಯ ಎರಡನೇ ಸಂಸದೀಯ ಮತಕ್ಷೇತ್ರವನ್ನು ತುಳಸಿ ಪ್ರತಿನಿಧಿಸಲಿದ್ದಾರೆ ಎನ್ನುವ ಘೋಷಣೆ ಹೊರಡಲು ಮಾತ್ರ ಬಾಕಿಯಿದೆ. ಸಂಸದರಾಗಿ ಆಯ್ಕೆಯಾಗಿರುವ ಮೊದಲ ಮಾಜಿ ಯೋಧೆ ಎನ್ನುವ ದಾಖಲೆಯೂ ತುಳಸಿ ಹೆಸರಿಗೆ ಬರೆಯಲ್ಪಡಲಿದೆ.
 
ಹವಾಯಿಯಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿದ್ದರೂ ತುಳಸಿ ಈ ಅದ್ಭುತ ಗೆಲುವು ಸಾಧಿಸಿದ್ದಾರೆ. ಇಲ್ಲಿ ನನಗೆ ಯಾವುದೇ ತಾರತಮ್ಯದ ಅನುಭವವಾಗಿಲ್ಲ. ವಾಸ್ತವವನ್ನು ಒಪ್ಪಿಕೊಂಡು ಬದುಕುವುದಕ್ಕೆ ನಾನು ಮಗುದೊಮ್ಮೆ ಚಿಂತಿಸುವ ಪ್ರಮೇಯವೇ ಉಂಟಾಗಿರಲಿಲ್ಲ ಎಂದು ತನ್ನ ಗೆಲುವು ಖಾತರಿಯಾಗುತ್ತಿದ್ದಂತೆ ತುಳಸಿ ಹೇಳಿದರು.
 
ಮುಖ್ಯ ಭೂಮಿಗೆ ಹೋದ ಸಂದರ್ಭದಲ್ಲಿ ನನ್ನನ್ನು ಭೇಟಿಯಾದ ವ್ಯಕ್ತಿಯೊಬ್ಬರು ಹದಿಹರೆಯದ ಮಗಳು ತನ್ನ ಧರ್ಮದ ಬಗ್ಗೆ ಬಹಳ ಮುಜುಗರ ಪಡುತ್ತಿರುವ ವಿಚಾರವನ್ನು ತಿಳಿಸಿದರು. ನಾನು ಅವಳನ್ನು ಭೇಟಿಯಾದ ಬಳಿಕ ಅವಳ ಈ ಕೀಳರಿಮೆ ದೂರವಾಯಿತು. ನಾನು ಸಂಸತ್ತಿಗೆ ಆಯ್ಕೆಯಾಗಿರುವುದನ್ನು ತಿಳಿದು ಆ ವ್ಯಕ್ತಿಗೆ ಬಹಳ ಖುಷಿಯಾಗಿದೆ ಹಾಗೂ ಅಮೆರಿಕದಲ್ಲಿ ವಾಸವಾಗಿರುವ ಸಾವಿರಾರು ಯುವ ಹಿಂದು-ಅಮೆರಿಕನ್‌ ಸಮುದಾಯದವರಿಗೆ ನಾನು ಸ್ಪೂರ್ತಿಯಾಗಬೇಕೆಂದು ಹಾರೈಸಿದ್ದಾರೆ ಎಂದು ತುಳಸಿ ಹೇಳಿದ್ದಾರೆ.
 
ತುಳಸಿ ಪರವಾಗಿ ಸ್ವತಃ ಅಧ್ಯಕ್ಷ ಬರಾಕ್‌ ಒಬಾಮಾ ಅವರೇ ಪ್ರಚಾರ ಮಾಡಿದ್ದರು.ಹಿಂದು ಧರ್ಮಿàಯಳಾಗಿರುವುದಕ್ಕೆ ಬಹಳ ಹೆಮ್ಮೆಪಟ್ಟುಕೊಳ್ಳುತ್ತಿರುವ ತುಳಸಿ ಭಾರತೀಯಳಲ್ಲ ಮತ್ತು ಭಾರತೀಯ ಪರಂಪರೆಯನ್ನು ಹೊಂದಿಲ್ಲ. ತುಳಸಿಯ ತಂದೆ ಮೈಕ್‌ ಗಬ್ಬರ್ಡ್‌ ಪ್ರಸ್ತುತ ಹವಾಯಿ ರಾಜ್ಯದ ಸೆನೆಟರ್‌ ಆಗಿದ್ದಾರೆ ಹಾಗೂ ತಾಯಿ ಕ್ಯಾರೋಲ್‌ ಪೋರ್ಟರ್‌ ಗಬ್ಬರ್ಡ್‌ ಶಿಕ್ಷಕಿ ಹಾಗೂ ಉದ್ಯಮಿ.

21 ವರ್ಷ ಪ್ರಾಯದಲ್ಲೇ ತುಳಸಿ ಹವಾಯಿ ಶಾಸನಸಭೆಗೆ ಆಯ್ಕೆಯಾಗಿ ದಾಖಲೆ ಮಾಡಿದ್ದರು. 23 ವರ್ಷ ಪ್ರಾಯದಲ್ಲಿ ಅವರು ಶಾಸನಸಭೆಗೆ ರಾಜೀನಾಮೆ ನೀಡಿ ಸೇನೆಗೆ ಸೇರಿ ಯುದ್ಧಭೂಮಿಗೆ ಹೋದರು. ಇದರಲ್ಲೂ ಅವರದ್ದು ಪ್ರಥಮದ ದಾಖಲೆ. 28 ವರ್ಷ ಪ್ರಾಯದಲ್ಲಿ ಅವರು ಕುವೈಟ್‌ ಆರ್ಮಿ ನ್ಯಾಶನಲ್‌ ಗಾರ್ಡ್‌ ಪ್ರಶಸ್ತಿಯನ್ನು ಪಡೆದುಕೊಂಡರು.
 
ಐವರ ಸೋಲು: ಇದೇ ವೇಳೆ ಅಮೆರಿಕ ಸಂಸತ್‌ ಚುನಾವಣೆಗೆ ಸ್ಪರ್ಧಿಸಿರುವ ಆರು ಮಂದಿ ಭಾರತೀಯ ಮೂಲದವರ ಪೈಕಿ ಡಾ| ಅಮಿ ಬೇರಾ ಗೆಲುವು ಬಹುತೇಕ ಖಚಿತಗೊಂಡಿದ್ದರೆ ಉಳಿದ ಐವರು ಸೋಲುವ ಸಾಧ್ಯತೆಗಳು ಗೋಚರಿಸಿವೆ. ಡಾ| ಬೇರಾ ಗೆಲುವು ದೃಢಪಟ್ಟರೆ ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿರುವ ಮೂರನೇ ಭಾರಿತೀಯ ಮೂಲದ ವ್ಯಕ್ತಿ ಎನ್ನುವ ದಾಖಲೆ ಅವರ ಹೆಸರಿಗೆ ಬರೆಯಲ್ಪಡಲಿದೆ.
 
ಕ್ಯಾಲಿಫೋರ್ನಿಯ ಜಿಲ್ಲೆಯ 7ನೇ ಸಂಸದೀಯ ಮತಕ್ಷೇತ್ರದ ಎಲ್ಲ ಮತಗಳ ಎಣಿಕೆ ಮುಗಿದಾಗ ಡಾ| ಅಮಿ ಬೇರಾ 184 ಮತಗಳ ಅಲ್ಪ ಮುನ್ನಡೆ ಪಡೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯ ರಾಜ್ಯದ ಕಾರ್ಯದರ್ಶಿ ಈ ಮತಕ್ಷೇತ್ರದ ಫ‌ಲಿತಾಂಶವನ್ನು ‘ನಿಕಟ ಸ್ಪರ್ಧೆ’ಯ ವರ್ಗಕ್ಕೆ ಸೇರಿಸಿ ತಡೆಹಿಡಿದಿದ್ದಾರೆ. ಮೊದಲ ಮತ್ತು ದ್ವಿತೀಯ ಸ್ಥಾನಿ ಅಭ್ಯರ್ಥಿಗಳ ನಡುವೆ ಶೇ. 2ಕ್ಕಿಂತ ಕಡಿಮೆ ಮತಗಳ ಅಂತರವಿದ್ದರೆ ಅಥವಾ ಮತಪತ್ರ ಮಾನದಂಡದಲ್ಲಿ ಹೌದು ಅಥವಾ ಅಲ್ಲ ಎನ್ನುವ ಅಂತರವಿದ್ದರೆ ಫ‌ಲಿತಾಂಶನ್ನು ನಿಕಟ ಸ್ಪರ್ಧೆ ವರ್ಗಕ್ಕೆ ಸೇರಿಸಿ ತಡೆಹಿಡಿಯಲಾಗುತ್ತದೆ.

ರಾಜ್ಯ ಕಾರ್ಯದರ್ಶಿಯವರ ಕಚೇರಿ ಮೂಲಗಳ ಪ್ರಕಾರ ಚಲಾವಣೆಯಾಗಿರುವ ಒಟ್ಟು ಮತಗಳ ಪೈಕಿ ಡಾ| ಬೇರಾ ಶೇ. 50.1 ಮತ್ತು ಅವರ ಎದುರಾಳಿ ಹಾಲಿ ಸಂಸದ ಡ್ಯಾನ್‌ ಲುಂಗ್ರೆನ್‌ ಶೇ. 49.9 ಮತಗಳನ್ನು ಗಳಿಸಿದ್ದಾರೆ. ಬೇರಾಗೆ 88,406 ಮತ್ತು ಲುಂಗ್ರೆನ್‌ಗೆ 88,222 ಮತಗಳು ಬಿದ್ದಿವೆ.
 
ಅಮೆರಿಕದ ಇತಿಹಾಸದಲ್ಲಿ ಇಷ್ಟರ ತನಕ ಕೇವಲ ಇಬ್ಬರು ಭಾರತೀಯರು ಮಾತ್ರ ಸಂಸತ್‌ ಚುನಾವಣೆಯಲ್ಲಿ ಗೆದ್ದ ದಾಖಲೆಯಿದೆ. 1950ರಲ್ಲಿ ದಲೀಪ್‌ ಸಿಂಗ್‌ ಸೌಂದ್‌ ಹಾಗೂ 2005ರಲ್ಲಿ ಬಾಬ್ಬಿ ಜಿಂದಾಲ್‌ ಗೆದ್ದಿದ್ದಾರೆ. 2008ರ ತನಕ ಸಂಸದರಾಗಿದ್ದ ಜಿಂದಾಲ್‌ ಬಳಿಕ ಲೂಸಿಯಾನದ ಗವರ್ನರ್‌ ಆಗಿ ಆಯ್ಕೆಯಾಗಿದ್ದಾರೆ.
 
ಬೇರಾ ಹೆತ್ತವರು ಸುಮಾರು 50 ವರ್ಷದ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿ ನೆಲೆಯಾಗಿದ್ದಾರೆ. 45ರ ಹರೆಯದ ಬೇರಾ ಅವರ ಪರವಾಗಿ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಪ್ರಚಾರ ಮಾಡಿದ್ದರು.
 
ಆದರೆ ಪಕ್ಕದಲ್ಲಿರುವ ಒಂಬತ್ತನೇ ಸಂಸದೀಯ ಮತಕ್ಷೇತ್ರದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ರಿಪಬ್ಲಿಕನ್‌ ಪಾರ್ಟಿಯ ಯಂಗ್‌ ಗನ್‌ ರಿಕ್ಕಿ ಗಿಲ್‌ 10,000ಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದಾರೆ. ಉಳಿದ ನಾಲ್ವರು ಭಾರತೀಯ ಮೂಲದ ಅಭ್ಯರ್ಥಿಗಳಾಗಿರುವ ಡಾ| ಹಯದ್‌ ತಾಜ್‌, ಡಾ| ಮನನ್‌ ತ್ರಿವೇದಿ, ಉಪೇಂದ್ರ ಚಿವುಕುಲ ಮತ್ತು ಜ್ಯಾಕ್‌ ಉಪ್ಪಲ್‌ ಸೋತಿದ್ದಾರೆ. ಗಿಲ್‌ ಹೊರತುಪಡಿಸಿ ಉಳಿದ ಐವರು ಭಾರತೀಯ ಮೂಲದವರು ಸ್ಪರ್ಧಿಸಿದ್ದು ಡೆಮಾಕ್ರಟಿಕ್‌ ಪಾರ್ಟಿಯ ಟಿಕೆಟಿನಲ್ಲಿ.

 

 

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Welcome to Thonse Naturecure Hospital
View More

Land for Sale at Neelavara, Udupi District.Land for Sale at Neelavara, Udupi District.
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 115Veez Konkani Illustrated Weekly e-Magazine # 115
Milagres English Medium, School, KallianpurMilagres English Medium, School, Kallianpur
Open Air Dance and Music Festival at Aryan Resorts, near Kemmannu on 7th March.Open Air Dance and Music Festival at Aryan Resorts, near Kemmannu on 7th March.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India