Land Dispute Main Reason for Killing Vasudeva Adiga Murder,ಜಾಗದ ತಕರಾರು ವಾಸುದೇವ ಅಡಿಗ ಕೊಲೆಗೆ ಕಾರಣ: 2ಪ್ರಮುಖ ಆರೋಪಿಗಳಿಗಾಗಿ ವ್ಯಾಪಕ ಕಾರ್ಯಾಚರಣೆ-ಎಸ್ಪಿ ಬೋರಲಿ೦ಗಯ್ಯ


jpkiniudupi
KNW, 21-01-2013 14:31:24


Write Comment     |     E-Mail To a Friend     |     Facebook     |     Twitter     |     Print


Udupi: In relation to the killing of RTI activist and Kota Block Congress Secretary Vandaru Vasudev Adiga already 6 people have been arrested, the main reason for the killing had been the dispute over land between the two families, clarified SP Dr Boralingaiah.

He was addressing the press meet here at the SP office on Monday January 21, 2013.A case was filed in Shankaranarayana police station about Adiga going missing and his family had raised doubts that he had been kidnapped. Later his bike and mobile phone were found and the kidnapping was confirmed. Adiga’s mother then filed a case of kidnapping

 

 

 

 

 

 

 

 

 à²‰à²¡à³à²ªà²¿:ಜ,21.ಜಾಗದ ತಕರಾರೇ ಆರ್ ಟಿ ಐ ಕಾರ್ಯಕರ್ತರೆನ್ನಲಾದ ವ೦ಡಾರಿನ ವಾಸುದೇವ ಅಡಿಗರ ಕೊಲೆಗೆ ಕಾರಣವೆನ್ನಲಾಗಿದ್ದು ಪ್ರಕರಣದ ತನಿಖೆಯು ಮು೦ದುವರಿದಿದ್ದು ತನಿಖೆಯ ಬಳಿಕ ಸ೦ಪೂರ್ಣ ಮಾಹಿತಿ ಬಹಿರ೦ಗಗೊಳ್ಳಲಿದೆ ಎ೦ದು ಉಡುಪಿ ಎಸ್ಪಿ ಡಾ.ಬೋರಲಿ೦ಗಯ್ಯರವರು ಸೋಮವಾರದ೦ದು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಪ್ರಕರಣಕ್ಕೆ ಸ೦ಬ೦ಧ ಪಟ್ಟ೦ತೆ ಇದುವರೆಗೆ ಒಟ್ಟು 6ಮ೦ದಿಯನ್ನು ಬ೦ಧಿಸಲಾಗಿದ್ದು ನ೦ತರ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಉಳಿದಿಬ್ಬರು ಆರೋಪಿಗಳೆನ್ನಲಾಗಿರುವ ರಮೇಶ ಬಾಯರಿ ಹಾಗೂ ಇನ್ನೊಬ್ಬನ್ನು ಬ೦ಧಿಸುವುದಕ್ಕಾಗಿ ವ್ಯಾಪಕ ಶೋಧಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎ೦ದು ಎಸ್ಪಿ ಬೋರಲಿ೦ಗಯ್ಯರವರು ವಿವರಿಸಿದ್ದಾರೆ.

ದಿನಾಂಕ: 08.01.2013 ರಂದು ಬೆಳಿಗ್ಗಿನ ಜಾವ 01:00 ಗಂಟೆಗೆ ಅರುಣ ಕುಮಾರ್ ಶೆಟ್ಟಿ ಎಂಬವರು  à²¶à²‚ಕರನಾರಾಯಣ ಠಾಣೆಗೆ ಬಂದು ಒಂದು ಲಿಖಿತ ದೂರನ್ನು ನೀಡಿದ್ದು, ವಂಡಾರಿನ ವಾಸುದೇವ ಅಡಿಗ ಎಂಬವರು ಶಿರೂರು ಮೂರುಕೈ ಮೂಲಕ ಮೋಟಾರು ಸೈಕಲ್‌ನಲ್ಲಿ ಮನೆ ಕಡೆಗೆ ಹೊರಟವರು ಮನೆಗೂ ಬಾರದೇ ದೂರವಾಣಿ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾರೆ ಎಂಬುದಾಗಿದ್ದು, ಅದರಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 04/03 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 

ನಂತರ ದಿನಾಂಕ 08/01/2013 ರಂದು ಬೆಳಿಗ್ಗೆ ಗೋಳಿಯಂಗಡಿಯ ಸಮೀಪ ಕಾಣೆಯಾದ ವಾಸುದೇವ ಅಡಿಗನ ಮೋಟಾರು ಸೈಕಲ್ ಸಿಕ್ಕಿದ್ದು, ಈ ಬಗ್ಗೆ ವಾಸುದೇವ ಅಡಿಗರ ತಾಯಿ ಶ್ರೀಮತಿ ಶೃಂಗೇಶ್ವರಿ ಅಡಿಗ ರವರು 17:00 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಅವರ ಮಗ ವಾಸುದೇವ ಅಡಿಗ ಎಂಬುವವರಿಗೂ ಹಾಗೂ ಪಿರ್ಯಾದಿದಾರರ ಮನೆಯ ಪಕ್ಕದಲ್ಲಿ ವಾಸವಾಗಿರುವ ಮಂತ್ರವಾದಿ ಕಸುಬಿನ ರಮೇಶ್‌ ಬಾಯರಿ ಹಾಗೂ ಆತನ ಅಣ್ಣ ಕೃಷ್ಣ ಮೂರ್ತಿ ಹಾಗೂ ಅವನ ಚಿಕ್ಕಪ್ಪ ಶಂಕರನಾರಾಯಣ ಬಾಯರಿಯವರ ನಡುವೆ ಜಾಗದ ವಿಚಾರದಲ್ಲಿ ಹಲವು ವರ್ಷದಿಂದ ತಕರಾರು ಇದ್ದು ಈ ಬಗ್ಗೆ ಕೋರ್ಟನಲ್ಲಿ ವಿಚಾರಣೆ ನಡೆಯುತ್ತಿದ್ದು ಫಿರ್ಯಾಧಿದಾರರ ಜಾಗವನ್ನು ಕಬಳಿಸುವ ದುರುದ್ದೇಶದಿಂದ ಪಿರ್ಯಾದಿದಾರರ ಮಗನಾದ ವಾಸುದೇವ ಅಡಿಗನನ್ನು ಬಲತ್ಕಾರವಾಗಿ ಅಪಹರಿಸಿ ಕೊಲ್ಲುವ ಉದ್ದೇಶದಿಂದ ಅಪಹರಣ ಮಾಡಿದ್ದಾರೆ ಎಂಬ ಬಗ್ಗೆ ಪಿರ್ಯಾದಿದಾರರಿಗೆ ಬಲವಾದ ಅನುಮಾನವಿರುದಾಗಿದ್ದು ಸದ್ರಿ ರಮೇಶ್‌ ಬಾಯರಿ ಹಾಗೂ ಆತನ ಆಣ್ಣ ಕೃಷ್ಣ ಮೂರ್ತಿ ಹಾಗೂ ಅವನ ಚಿಕ್ಕಪ್ಪ ಶಂಕರನಾರಾಯಣ ಬಾಯರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ದೂರು ನೀಡಿದ್ದು ಅದರಂತೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 05/2013 ಕಲಂ 364 ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ವಾಸುದೇವ ಅಡಿಗ ಇವರು ಆರ್.ಟಿ.ಐ ಕಾರ್ಯಕರ್ತರಾಗಿದ್ದು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಉಡುಪಿ ಜಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಬೋರಲಿಂಗಯ್ಯ ಐಪಿಎಸ್ ಇವರು ಸ್ವತಃ ಮತುವರ್ಜಿ ವಹಿಸಿ ಈ ಪ್ರಕರಣದ ತನಿಖೆಯನ್ನು ಶ್ರೀಮತಿ ಯಶೋಧ ಎಸ್ ಒಂಟಗೋಡಿ, ಡಿವೈಎಸ್ಪಿ ಕುಂದಾಪುರ ರವರಿಗೆ ನೀಡಿದ್ದು ಮಂಜುನಾಥ ಕೌರಿ ಸಿಪಿಐ ಕುಂದಾಪುರ ಹಾಗೂ  à²¦à³‡à²œà²ªà³à²ª ಪಿಎಸ್ಐ ಶಂಕರನಾರಾಯಣ ಠಾಣೆರವರು ತನಿಖೆಗೆ ಸಹಕರಿಸಿರುತ್ತಾರೆ. ಆರೋಪಿಗಳ ಪತ್ತೆಯ ಬಗ್ಗೆ ಸಿಪಿಐಗಳ ನೇತೃತ್ವದ ವಿಶೇಷ ತಂಡಗಳನ್ನು ರಚಿಸಿದರು. ಅದರಂತೆ ಮಾರುತಿ ಜಿ ನಾಯಕ್, ಸಿಪಿಐ ಉಡುಪಿ ವೃತ್ತ ಹಾಗೂ ವಿಶೇಷ ಕರ್ತವ್ಯದ ಬಗ್ಗೆ ನೇಮಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಮಹೇಶ್ ಪ್ರಸಾದ್ ರವರನ್ನು ಒಂದು ತಂಡವಾಗಿ ರಚಿಸಿ ಅದರಲ್ಲಿ ತಾಂತ್ರಿಕ ಸಿಬ್ಬಂದಿಗಳಾದ ಶಿವಾನಂದ ಶೆಟ್ಟಿ, ನಿತಿನ್ ರಾವ್ ಹಾಗೂ ಸುಧೀರ್ ರೊಂದಿಗೆ ತನಿಖೆಯನ್ನು ಚುರುಕುಗೊಳಿಸಿದರು. ಅಲ್ಲದೇ ಶ್ರೀ ಅರುಣ ನಾಯಕ್, ಸಿಪಿಐ ಬೈಂದೂರು ಇವರ ನೇತೃತ್ವದಲ್ಲಿ ಒಂದು ತಂಡ ಹಾಗೂ ಪ್ರವೀಣ್ ಹೆಚ್. ನಾಯಕ್, ಪಿಐ ಡಿಸಿಐಬಿ ಉಡುಪಿ ಇವರ ಒಂದು ತಂಡ ಹಾಗೂ ಸಂಪತ್ ಕುಮಾರ್ ಪಿಎಸ್ಐ ಗಂಗೊಳ್ಳಿರವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿತು.

 à²®à²¾à²°à³à²¤à²¿ ಜಿ ನಾಯಕ್, ಸಿಪಿಐ ಉಡುಪಿ ವೃತ್ತ ಇವರ ಹಾಗೂ ವಿಶೇಷ ಕರ್ತವ್ಯದ ಬಗ್ಗೆ ನೇಮಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಮಹೇಶ್ ಪ್ರಸಾದ್ ರವರ ತಂಡ ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಇತರ ಸ್ಥಳಗಳಿಗೆ ಭೇಟಿ ನೀಡಿ ಈ ಘಟನೆಯ ಬಗ್ಗೆ ಕೂಲಂಕುಷವಾಗಿ ವಿಚಾರಿಸಿ ಹಲವಾರು ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ಆ ಮಾಹಿತಿಗಳನ್ನು ಆಧರಿಸಿ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಆರೋಪಿಗಳ ಜಾಡನ್ನು ಪತ್ತೆಹಚ್ಚಿದರು.

ಅದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೋಲಿಸ್ ಠಾಣಾ ಸರಹದ್ದಿನ ಮದಗದ ಕರೆಯಲ್ಲಿ ಅಪಹರಣಕ್ಕೊಳಗಾದ ವಾಸುದೇವ ಅಡಿಗರ ಮೃತ ದೇಹವು ದಿನಾಂಕ 12/01/2013 ರಂದು  à²ªà²¤à³à²¤à³†à²¯à²¾à²—ಿದ್ದು ಕಡೂರು ಠಾಣಾ ಅಪರಾಧ ಕ್ರಮಾಂಕ 09/13 ಕಲಂ 302, 201 ಐಪಿಸಿಯಂತೆ ಪ್ರಕರಣ ದಾಖಲಾಯಿತು. ಮತ್ತು ಶವ ಪರೀಕ್ಷೆ ಹಾಗೂ ಇತರ ತನಿಖೆಗಳ ಬಳಿಕ ವಾಸುದೇವ ಅಡಿಗರನ್ನು ಅಪಹರಿಸಿದ ಬಗ್ಗೆ ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರವುದನ್ನು ಅರಿತ ತನಿಖಾಧಿಕಾರಿಗಳು ಪ್ರಕರಣದ ಮುಂದಿನ ತನಿಖೆಯ ಬಗ್ಗೆ  à²ªà³à²°à²•à²°à²£à²µà²¨à³à²¨à³ ಶಂಕರನಾರಾಯಣ ಠಾಣೆಗೆ ಹಸ್ತಾಂತರಿಸಿರುತ್ತಾರೆ.

ವಿಶೇಷ ಕರ್ತವ್ಯದಲ್ಲಿದ್ದ ಬೈಂದೂರು ಸಿಪಿಐ ಅರುಣ ನಾಯಕ್ ಇವರು ತಾಂತ್ರಿಕತೆಯ ಮಾಹಿತಿ ಹಾಗೂ ಅಪಹರಣ ನಡೆದ ಪರಿಸರದಲ್ಲಿ ಸಂಚರಿಸಿದ ವಾಹನದ ಸುಳಿವನ್ನು ಆಧರಿಸಿ ದಿನಾಂಕ 17/01/2013 ರಂದು ಬೆಳಿಗ್ಗೆ 11:00 ಗಂಟೆಗೆ ಆರೋಪಿಗಳಾದ 1.ಉಮೇಶ ಪ್ರಾಯ 32 ವರ್ಷ ತಂದೆ: ದಿವಂಗತ ಮುರುಗೇಶ ವಾಸ: ನಂಬ್ರ 186, 6 ನೇ ಮೇನ್, ಬನಶಂಕರಿ, 3 ನೇ ಹಂತ ಬೆಂಗಳೂರು – 85, 2. ನವೀನ ಸಿ.ಪ್ರಾಯ 31 ವರ್ಷ, ತಂದೆ: ದಿ: ಚೆನ್ನಪ್ಪ, ವಾಸ:  à²¨à²‚ಬ್ರ: 124, ಹೊಸಕೆರೆಹಳ್ಳಿ, ಪುಷ್ಪಗಿರಿ ನಗರ ಲೇ   ಔಟ್, ಬನಶಂಕರಿ 3ನೇ ಹಂತ, ಬೆಂಗಳೂರು – 85, 3. ಕೆ.ಎಸ್. ರಾಘವೇಂದ್ರ (29) ತಂದೆ: ಶ್ರೀನಿವಾಸ: ಮೂರ್ತಿ ವಾಸ 4/1, 4 ನೇ ಕ್ರಾಸ್,  à²—ೌಡನಪಾಳ್ಯ,  à²ªà²¦à³à²®à²¨à²¾à²­ ನಗರ, ಬೆಂಗಳೂರು – 70 ಇವರುಗಳನ್ನು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿರುವುದಾಗಿದೆ ಅಪಾದಿತರುಗಳನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 7 ದಿವಸಗಳ ಪೊಲೀಸ್ ಕಸ್ಟಡಿಗೆ ನೀಡಿರುತ್ತದೆ,

 à²µà²¿à²¶à³‡à²· ಕರ್ತವ್ಯದಲ್ಲಿ ಬೆಂಗಳೂರಿಗೆ ತೆರಳಿದ ಸಂಪತ್ ಕುಮಾರ್ ಪಿಎಸ್ಐ ಗಂಗೊಳ್ಳಿರವರ ತಂಡವು ದಿನಾಂಕ 19/01/2013 ರಂದು ಈ ಕೆಳಗಿನ ಅಪಾದಿತರುಗಳನ್ನು ಬೆಂಗಳೂರಿನಲ್ಲಿ ಬಂಧಿಸಿರುತ್ತಾರೆ.

1. ಮೋಹನ್ ಕುಮಾರ್  à²¡à²¿, ಪ್ರಾಯ 30 ವರ್ಷ, ತಂದೆ: ಧರ್ಮಲಿಂಗಂ, ವಾಸ: ನಂಬ್ರ : 9, 15 ನೇ ಕ್ರಾಸ್, ರನೇ ಮೈನ್, ಬನಶಂಕರಿ 2 ನೇ ಹಂತ, ಬೆಂಗಳೂರು – 70, 2. ರವಿಚಂದ್ರ, ಟಿ.ಸಿ., ಪ್ರಾಯ 30 ವರ್ಷ, ತಂದೆ: ಚಂದ್ರಶೇಖರಯ್ಯ, ವಾಸ: ನಂಬ್ರ: 3088, ಎಂ. ಕ್ರಾಸ್, ಸಿ. ಬ್ಲಾಕ್, ಗಾಯತ್ರಿನಗರ, ಬೆಂಗಳೂರು - 21 ಅಪಾದಿತರುಗಳನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 7 ದಿವಸಗಳ ಪೊಲೀಸ್ ಕಸ್ಟಡಿಗೆ ನೀಡಿರುತ್ತದೆ.

ಈ ಪ್ರಕರಣದ ಇನೋರ್ವ ಅಪಾದಿತ ಸುಬ್ರಹ್ಮಣ್ಯ ಉಡುಪ, ಪ್ರಾಯ : 52 ವರ್ಷ, ತಂದೆ:  à²µà³†à²‚ಕಟ್ರಮಣ ಉಡುಪ, ವಾಸ:  à²®à²¾à²³à²¿à²—ೆ ಮನೆ, ಮನೆ ನಂಬ್ರ : 34/7, 14 ನೇ ಕ್ರಾಸ್,  10ನೇ ಮೈನ್,  à²µà²¿à²²à³à²¸à²¨à³ ಗಾರ್ಡನ್, ಬೆಂಗಳೂರು – 30 ಇವರನ್ನು ದಿನಾಂಕ 18/01/2013 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಸ್ಸು ನಿಲ್ದಾಣದ ಬಳಿ ಉಡುಪಿ ಸಿಪಿಐ ಮಾರುತಿ. ಜಿ. ನಾಯಕ್ ಇವರು ಬಂಧಿಸಿರುತ್ತಾರೆ. ಅಪಾದಿತರನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 7 ದಿವಸಗಳ ಪೊಲೀಸ್ ಕಸ್ಟಡಿಗೆ ನೀಡಿರುತ್ತದೆ.

 à²ˆ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ಪ್ರಕರಣ ತನಿಖಾ ಹಂತದಲ್ಲಿದ್ದು ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಂಡಿರುತ್ತಾರೆ.

 à²ˆ ಬಗ್ಗೆ ಪ್ರತಾಪ್ ರೆಡ್ಡಿ ಸಿ.ಹೆಚ್. ಐಜಿಪಿ ಪಶ್ಚಿಮ ವಲಯರವರು ತನಿಖೆಯ ಬಗ್ಗೆ  à²¸à³‚ಕ್ಷ್ಮ ಮಾರ್ಗದರ್ಶನಗಳನ್ನು ನೀಡಿದ್ದು ಪ್ರಕರಣ ಪತ್ತೆಯಾದ ಬಗ್ಗೆ ಪ್ರಶಂಶಿಸಿರುತ್ತಾರೆ.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Milagres College, KallianpurMilagres College, Kallianpur
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Donate Your Old Smart Phone this DiwaliDonate Your Old Smart Phone this Diwali
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
The Tablet - International Catholic WeeklyThe Tablet - International Catholic Weekly
GSB delicacies at Hotte Thumba Fish Court UdupiGSB delicacies at Hotte Thumba Fish Court Udupi
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Computerised Clinical Laboratory, Kemmannu.Computerised Clinical Laboratory, Kemmannu.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India