ಡ್ರಗ್ಸ್‌ ಚಟಕ್ಕೆ ವಿದ್ಯಾರ್ಥಿನಿ ಬಲಿ -Addiction to drugs young Girl  suicide in Mangalore


jpkiniudupi
KNW, 03-02-2013 17:27:28


Write Comment     |     E-Mail To a Friend     |     Facebook     |     Twitter     |     Print


Mangalore, Feb 3: Sneha (18), a resident of Padavinangadi here allegedly committed suicide by hanging in her room on Saturday February 2. The incident came to light on Sunday February 3 morning when her parents knocked on her door and did not get any response.

The main reason for her suicide is said to be her addiction to drugs, alcohol, ghutka and tobacco. Her body has been brought to Wenlock mortuary, where the post-mortem will be conducted and the body will be handed over to the family for the last rites

ಮಂಗಳೂರು: ಮಂಗಳೂರಿನಲ್ಲಿ ಡ್ರಗ್ಸ್‌ ಮಾಫಿಯಾ ತೀವ್ರವಾಗಿದೆ ಹಾಗೂ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ ಎನ್ನುವುದಕ್ಕೆ ಪುರಾವೆ ಎಂಬಂತೆ ಮಾದಕ ದ್ರವ್ಯಗಳ ವ್ಯಸನಕ್ಕೆ ಸಿಲುಕಿದ ಪಿ.ಯು. ತರಗತಿಯ ವಿದ್ಯಾರ್ಥಿನಿಯೋರ್ವಳು ರವಿವಾರ ಮುಂಜಾನೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಪದವಿನಂಗಡಿಯ ಸ್ನೇಹಾ ಉಪಾಧ್ಯಾಯ (17) ಆತ್ಮಹತ್ಯೆಗೆ ಶರಣಾದ ಹದಿ ಹರೆಯದ ಯುವತಿ. ನಗರದ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಆಕೆ ಕಳೆದ 1 ವರ್ಷದಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದಳು.

ರವಿವಾರ (ಫೆ. 3) ಮುಂಜಾನೆ 1.15ರಿಂದ ಬೆಳಗ್ಗಿನ 6 ಗಂಟೆ ಮಧ್ಯೆ ಆಕೆ ಮನೆಯ ಬೆಡ್‌ರೂಂನಲ್ಲಿ ಸೀರೆ ಉಪಯೋಗಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಿಕ್ಷಣ ಮೊಟಕು


ಡ್ರಗ್ಸ್‌ ಮತ್ತು ಅಮಲು ಪದಾರ್ಥ ಸೇವನೆಯ ದುಶ್ಚಟಕ್ಕೆ ಬಲಿ ಬಿದ್ದ ಕಾರಣ ಆಕೆಯನ್ನು ಕಾಲೇಜಿನಿಂದ ಬಿಡಿಸಲಾಗಿತ್ತು ಮತ್ತು ಕಳೆದ 1 ವರ್ಷದಿಂದ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಯನ್ನು ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ.

15ನೇ ವರ್ಷ ಪ್ರಾಯದಲ್ಲಿಯೇ ಆಕೆ ಮಾದಕ ದ್ರವ್ಯ ಮತ್ತು ಅಮಲು ಸೇವನೆಯ ಚಟಕ್ಕೆ ಬಲಿಯಾಗಿದ್ದಳು. ಕಳೆದ ವರ್ಷ ಹೆತ್ತವರಿಗೆ ವಿಷಯ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಮಂಗಳೂರಿನ ಫಾದರ್‌ ಮುಲ್ಲರ್‌ ಮತ್ತು ಮಂಗಳಾ ಆಸ್ಪತ್ರೆಗಳ ವೈದ್ಯರ ಸಲಹೆಯ ಮೇರೆಗೆ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಗಾಗಿ ಬೆಂಗಳೂರಿನ ಸ್ಪಂದನಾ ಆಸ್ಪತ್ರೆಗೆ 2012 ಫೆಬ್ರವರಿ ತಿಂಗಳಲ್ಲಿ ದಾಖಲಿಸಿದ್ದರು. ಅಲ್ಲಿ ಸುಮಾರು 7 ತಿಂಗಳ ಕಾಲ ಚಿಕಿತ್ಸೆ ಪಡೆದು ಶೇ. 60ರಷ್ಟು ಗುಣಮುಖ ಹೊಂದಿದ್ದಳು. ಆ ಬಳಿಕ ಆಕೆಯನ್ನು ಮನೆಗೆ ಕರೆತರಲಾಗಿತ್ತು.

ಕಳೆದ ಜನವರಿ 10ರಂದು 30 ಬಿಪಿ (ರಕ್ತದೊತ್ತಡ) ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಳಾಗಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಗುಣಮುಖಳಾದ ಬಳಿಕ ಮನೆಗೆ ಕರೆದೊಯ್ಯಲಾಗಿತ್ತು.

ಅಮ್ಮನಲ್ಲಿ ಸಾಲಕ್ಕೆ ಬೇಡಿಕೆ !

ಶನಿವಾರ ಆಕೆ ತನಗೆ 1,500 ರೂ. ಹಣ ಬೇಕು, ತಿಂಗಳಾಂತ್ಯಕ್ಕೆ ಅದನ್ನು ಹಿಂದಿರುಗಿಸುತ್ತೇನೆ ಎಂದು ಬೇಡಿಕೆ ಮಂಡಿಸಿದ್ದಳು. ಹಣ ಕೊಡಲು ತಾಯಿ ನಿರಾಕರಿಸಿದಾಗ ಗಲಾಟೆ ಮಾಡಿದ್ದಳು. ಬಳಿಕ ಬೆಡ್‌ರೂಂ ಒಳಗೆ ಹೋಗಿ ಬಾಗಿಲು ಹಾಕಿದ್ದಳು. ತಡ ರಾತ್ರಿವರೆಗೂ ಹೆತ್ತವರು ಆಕೆಯ ಮೇಲೆ ಗಮನ ಇರಿಸಿದ್ದರು. ಇಡೀ ರಾತ್ರಿ ಲೈಟ್‌ ಉರಿಯುತ್ತಲೇ ಇತ್ತು. ಬೆಳಗ್ಗೆ 6 ಗಂಟೆ ವೇಳೆಗೆ ಹೆತ್ತವರು ಬೆಡ್‌ ರೂಂನ ಬಾಗಿಲು ಬಡಿದಾಗ ಒಳಗಿನಿಂದ ಪ್ರತಿಕ್ರಿಯೆ ಇರಲಿಲ್ಲ. ಬಲವಂತವಾಗಿ ಬಾಗಿಲಿನ ಚಿಲಕ ಮುರಿದು ಒಳಗೆ ಹೋಗಿ ನೋಡಿದಾಗ ಆಕೆ ಫ್ಯಾನಿಗೆ ನೇತಾಡುತ್ತಿರುವುದು ಕಂಡು ಬಂತು.

ಕಾವೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.

ಪದವಿನಂಗಡಿಯ ಶ್ರೀನಿವಾಸ್‌ ಕಾಂಪ್ಲೆಕ್ಸ್‌ನ ಗುರುರಾಜ ಉಪಾಧ್ಯಾಯ ಮತ್ತು ಸುನಿತಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಸ್ನೇಹಾ ಹಿರಿಯವಳಾಗಿದ್ದಳು. ಸುಮಾರು ಒಂದೂವರೆ ವರ್ಷದ ಹಿಂದೆ ಸ್ನೇಹಾ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದು, ಮಾದಕ ದ್ರವ್ಯ, ಅಮಲು ಪದಾರ್ಥ, ಗುಟ್ಕಾ, ತಂಬಾಕು ಇತ್ಯಾದಿಗಳನ್ನು ಸೇವಿಸುತ್ತಿದ್ದಳು. ಆಕೆಯ ವರ್ತನೆ ಮತ್ತು ಜೀವನ ಶೈಲಿಯನ್ನು ಗಮನಿಸಿದಾಗ ಹೆತ್ತವರಿಗೆ ಸಂಶಯ ಬಂದಿತ್ತು.

9ನೇ ತರಗತಿವರೆಗೆ ತರಗತಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಸ್ನೇಹಾ ಬಳಿಕ ಹಿನ್ನಡೆ ಅನುಭವಿಸಿದ್ದಳು. ಆಕೆಯ ಮೇಲೆ ನಿಗಾ ಇರಿಸಿದಾಗ ತರಗತಿಗೆ ಚಕ್ಕರ್‌, ಹೊಟೇಲ್‌ಗ‌ಳಲ್ಲಿ ಡಿಜೆ ಪಾರ್ಟಿಗಳಿಗೆ ಹೋಗುತ್ತಿರುವುದು ಹಾಗೂ ಮನೆಯಿಂದ ಹಣ ಪಡೆದು ಪಬ್‌ಗ ತೆರಳುತ್ತಿರುವುದು ಕಂಡುಬಂದಿತ್ತು ಎಂದು ಆಕೆಯ ಪೋಷಕರು ಹೇಳುತ್ತಾರೆ.

ನಾಪತ್ತೆಯಾಗಿದ್ದಳು

ಕೆಲವು ತಿಂಗಳ ಹಿಂದೆ ಆಕೆ ಒಂದು ಬಾರಿ ನಾಪತ್ತೆಯಾಗಿದ್ದು, ಹುಡುಕಾಡಿದಾಗ ಮಣಿಪಾಲ ಎಂಡ್‌ ಪಾಯಿಂಟ್‌ ಬಳಿ ಪತ್ತೆಯಾಗಿದ್ದಳು. ಈ ಘಟನೆ ಬಳಿಕ ಆಕೆಯನ್ನು ಮನೆಯಿಂದ ಹೊರ ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಮನೆ ಮಂದಿಯ ಮೇಲೆ ಸಿಟ್ಟುಗೊಂಡ ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರಿಗೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳಿಗೆ ದೂರು ನೀಡಿದ್ದಳು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯವರು ಸ್ನೇಹಾಳಿಗೆ ಚಿಕಿತ್ಸೆ ಒದಗಿಸುವಂತೆ ಸಲಹೆ ಮಾಡಿದ್ದರು.

ಹೆತ್ತವರಲ್ಲಿ ಆತಂಕ

ಡ್ರಗ್ಸ್‌ ಮಾಫಿಯಾ ಮಂಗಳೂರಿನಲ್ಲಿ ಸಕ್ರಿಯವಾಗಿದೆ ಎಂದು ಕಳೆದ 2- 3 ವರ್ಷಗಳಿಂದ ವಿವಿಧ ಸಂಘಟನೆಗಳು, ಸಾರ್ವಜನಿಕರು ಆರೋಪಿಸುತ್ತಲೇ ಬಂದಿದ್ದಾರೆ. ಒಂದೂವರೆ ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿಯೋರ್ವಳು ಮಾದಕ ದ್ರವ್ಯ ವ್ಯಸನಕ್ಕೆ ಬಲಿ ಬಿದ್ದು, ಆಕೆಯನ್ನು ಮುಂಬಯಿಗೆ ಕರೆದೊಯ್ಯಲು ಸಿದ್ಧತೆ ನಡೆಯುತ್ತಿದ್ದಾಗ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಗಮನಕ್ಕೆ ಬಂದು ಸಂಘಟನೆಯೊಂದರ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಮುಂಬಯಿ ಯಾನವನ್ನು ತಡೆಗಟ್ಟಿದ್ದರು. ಈ ವಿದ್ಯಾರ್ಥಿನಿಗೆ ಹಲವು ತಿಂಗಳುಗಳ ಕಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಿದ್ದು, ಇದಕ್ಕಾಗಿ ಹೆತ್ತವರು ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು.

ಮಕ್ಕಳಿಗೆ ಸಿಗುತ್ತದೆ; ಪೊಲೀಸರಿಗೆ ....?

ಈ ಸಂದರ್ಭದಲ್ಲಿ ಸಾರ್ವಜನಿಕರು ಡ್ರಗ್ಸ್‌ ಮಾಫಿಯಾ ಬಗ್ಗೆ ತೀವ್ರ ಆತಂಕ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಒಂದು ಬಾರಿ ಎಚ್ಚರಗೊಂಡು ಅಲ್ಲಲ್ಲಿ ದಾಳಿ ಮತ್ತು ಇತರ ಕಾರ್ಯಾಚರಣೆ ನಡೆಸಿದ್ದರು. ಜಿಲ್ಲಾಡಳಿತವು ಮಾದಕ ದ್ರವ್ಯ ಮತ್ತು ಅಮಲು ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸಿತ್ತು. ವಿಧಾನಸಭಾ ಉಪಸಭಾಧ್ಯಕ್ಷರು ಡ್ರಗ್‌ ಮಾಫಿಯಾ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಕ್ರಮೇಣ ಇವೆಲ್ಲವೂ ಮರೆತು ಹೋದಂತಿದೆ. ಪೊಲೀಸರು ಅಪರೂಪಕ್ಕೊಮ್ಮೆ ಕೆಲವು ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆಹಚ್ಚುತ್ತಾರೆ. ಮಾದಕ ದ್ರವ್ಯ ಪತ್ತೆಗಾಗಿ ನಗರದಲ್ಲಿ ಪ್ರತ್ಯೇಕ ಪೊಲೀಸ್‌ ಘಟಕ ಇದ್ದು, ಅದರ ಕಾರ್ಯ ನಿರ್ವಹಣೆಯೇ ಪ್ರಶ್ನಾರ್ಹ. ಏಕೆಂದರೆ ಶಾಲಾ, ಕಾಲೇಜು ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಅಷ್ಟೊಂದು ಸುಲಭವಾಗಿ ಡ್ರಗ್ಸ್‌ ಸಿಗುತ್ತಿರುವ ಬಗ್ಗೆ ಹೆತ್ತವರು ತೀವ್ರ ಆತಂಕಿತರಾಗಿದ್ದಾರೆ.

ಸ್ನೇಹಾಳ ಸ್ನೇಹ ಸಂಪಾದಿಸಿದವರು ಮತ್ತು ಸ್ನೇಹಾಳಿಗೆ ಸ್ನೇಹ ಕೊಟ್ಟು ಇದೇ ರೀತಿ ನರಳುತ್ತಿರುವ ಇನ್ನಷ್ಟು ಮಂದಿ ಮುಗªà²°à³ ಇರಬಹುದು. ಅವರಿಗೆ ಮತ್ತು ಸಮಾಜದ ಎಲ್ಲರಿಗೂ ಸ್ನೇಹಾಳ ಸಾವು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

Obituary: Lawrence Lobo (69), KemmannuObituary: Lawrence Lobo (69), Kemmannu
House for Rent at KemmannuHouse for Rent at Kemmannu
Veez Konkani Global Weekly e_magazine 100Veez Konkani Global Weekly e_magazine 100
Hottetumba Fish Court” inaugurated at UdupiHottetumba Fish Court inaugurated at Udupi
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India