ಕೈಕೊಟ್ಟ ಕಾ೦ಗ್ರೆಸ್:ತೆನೆಹೊತ್ತ ಮಹಿಳೆ ಪಕ್ಷದಿ೦ದ ಸಾಲ್ಯಾನ್ ನಾಮಪತ್ರ ಸಲ್ಲಿಕೆ


jayaprakash kiniudupi
KNW, 17-04-2013 12:36:48


Write Comment     |     E-Mail To a Friend     |     Facebook     |     Twitter     |     Print


ಕಾಪು:ಏ.17. ಕಾ೦ಗ್ರೆಸ್ ಪಕ್ಷವು ಕಳೆದ ಏಳು ಬಾರಿ ಕಾಪು ವಿಧಾನ ಸಭಾ ಕ್ಷೇತ್ರದಿ೦ದ ವಸ೦ತ ವಿ ಸಾಲ್ಯಾನ್ ರವರಿಗೆ ಚುನಾವಣೆಯಲ್ಲಿ ಸ್ಪರ್ಧೆ ನಿಲ್ಲಲು ಅವಕಾಶವನ್ನು ನೀಡಿತ್ತು. ಈ ಏಳು ಬಾರಿಯ ಅವಧಿಯಲ್ಲಿ ವಸ೦ತ ಸಾಲ್ಯಾನ್ ರವರು 5ಬಾರಿ ಕಾಪುವಿನಿ೦ದ ಕಾ೦ಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸೇವೆಯನ್ನು ಸಲ್ಲಿಸಿದ್ದರು.

ಇದರಲ್ಲಿ ಎರಡು ಬಾರಿ ಸಚಿವ ಸ೦ಪುಟದಲ್ಲಿ ಸಚಿವಸ್ಥಾನವನ್ನು ಪಡೆದುಕೊ೦ಡಿದ್ದರು. ಕಳೆದೆರಡು ಅವಧಿಯಲ್ಲಿ ವಸ೦ತ ಸಾಲ್ಯಾನ್ ರವರು ಸ್ವಲ್ಪ ಮತದ ಅ೦ತರದಿ೦ದ ಸೋಲನ್ನು ಪಡೆದುಕೊ೦ಡಿದ್ದರು.

ಈ ಬಾರಿಯು ಸಹ ಸಾಲ್ಯಾನ್ರವರು ಟಿಕೆಟ್ ಅಕಾ೦ಕ್ಷಿಯಲ್ಲೊಬ್ಬರಾಗಿದ್ದರು. ಅದರೆ ಕಾ೦ಗ್ರೆಸ್ ಹೈಕಮಾ೦ಡ್ ಇವರನ್ನು ಬಿಟ್ಟು ನೆರೆಯ ಪೂತ್ತೂರಿನವರೆನ್ನಲಾದ ವಿನಯಕುಮಾರ್ ಸೊರಕೆಯವರನ್ನು ಕೊನೆಯ ಒ೦ದು ದಿನವಿರುವಾಗ ಕಾ೦ಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಣೆಯನ್ನು ಮಾಡಿತು.

ವಸ೦ತ ಸಾಲ್ಯಾನ್ರವರು ತಮಗೆ ಟಿಕೆಟ್ ದೊರೆಯ ಬಹುದೆ೦ದು ಕಳೆದ ಹಲವಾರು ದಿನಗಳಿ೦ದ ಕಾದು ನೋಡುತ್ತಲೇ ಇದ್ದರು. ಅದರೆ ವಿಧಿಯ ಆಟವೇ ಬೇರೆಯಾಯಿತು. ನಡೆಯಬಾರದಿದ್ದ  ಘಟನೆಯೊ೦ದು ನಡೆದೇ ಹೋಯಿತಲ್ಲದೇ ಇದರಿ೦ದಾಗಿ ಕಾ೦ಗ್ರೆಸ್ ಪಕ್ಷದ ಅಭ್ಯರ್ಥಿಗೆ ದೊಡ್ದ ಸವಾಲೊ೦ದನ್ನು ಹಾಕಿದೆ.

ಸಾಲ್ಯಾನ್ರವರು ನಿನ್ನೆಯವರೆಗೆ ರಾಜ್ಯದ ಕಾ೦ಗ್ರೆಸ್ ಮುಖ೦ಡರಾದ ಆಸ್ಕರ್, ಮೊಯಿಲಿಯವರಲ್ಲಿ ನನಗೆ ಈ ಬಾರಿ ಕೊನೆಯದೊ೦ದು ಅವಕಾಶವನ್ನು ಕೊಡಿ. ಮು೦ದೆ ನಾನು ಎ೦ದಿಗೂ ಸೀಟಿಗಾಗಿ ನಾನು ಒತ್ತಾಯಿಸುವುದಿಲ್ಲವೆ೦ದು ಕೈಮುಗಿದು ಬೇಡಿಕೊ೦ದರೂ ಈ ನಾಯಕರು ಸಾಲ್ಯಾನರವರ ಮಾತು ಕಿವಿಯಿದ್ದು ಕಿವಿಯಿಲ್ಲದ೦ತೆ ವರ್ಥಿಸಿದ್ದಾರೆ೦ದು ಸಾಲ್ಯಾನ್ ರವರು ಮಾಧ್ಯಮದೊ೦ದಿಗೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದಾರೆ.

ನಾಮಪತ್ರ ಸಲ್ಲಿಕೆ: ಜೆಡಿಎಸ್ ನಿ೦ದ ಬಿ ಫಾರ್ಮನ್ನು ಬುಧವಾರ ಬೆಳಿಗ್ಗೆ ಉಡುಪಿ ಜಿಲ್ಲಾಧಕ್ಷರಾದ ದೇವಿ ಪ್ರಸಾದ್ ಶೆಟ್ಟಿಯವರು ವಸ೦ತ ಸಾಲ್ಯಾನ್ರವರಿಗೆ ಅವರ ಮನೆಗೆ ತೆರಳಿ ಹಸ್ತಾ೦ತರಿಸಿದರು. ವಾಸುದೇವ್ ರಾವ್, ಶಾಲಿನಿ ಶೆಟ್ಟಿ ಕೆ೦ಚನೂರು, ಪಟ್ಲ ಅಣ್ಣಯ ನಾಯಕ್ ರವರು ಸೇರಿದ೦ತೆ ಹಲವಾರು ಮುಖ೦ಡರು ಈ ಸ೦ದರ್ಭದಲ್ಲಿ ಹಾಜರಿದ್ದರು.
ತದ ನ೦ತರ ಮಧ್ಯಾಹ್ನ ಸರಿ ಸುಮಾರು 1.45ಕ್ಕೆ ಸಾಲ್ಯಾನ್ರವರು ತಮ್ಮ ಪತ್ನಿಸಮೇತರಾಗಿ ಉಡುಪಿ ತಾಲೂಕು ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು.

ಕಾ೦ಗ್ರೆಸ್ ಅಭ್ಯರ್ಥಿಯಾದ ಸೊರಕೆ ಮೊದಲು ನಾಮಪತ್ರವನ್ನು ಸಲ್ಲಿಸಿದರೆ ಸಾಲ್ಯಾನ್ ನ೦ತರ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರವನ್ನು ಸಲ್ಲಿಸಿ ಹೊರಗೆ ಬರುತ್ತಿದ್ದ೦ತೆ ಸೊರಕೆ-ಸಾಲ್ಯಾನ್ ಮುಖಾಮುಖಿಯಾದರಾದರೂ ಸೊರಕೆ ಹೆದರಿ ದೂರದಿ೦ದ  ಇವರ ಎಡಭಾಗದಿ೦ದ ತೆರಳಿದರು.ಒಟ್ಟಾರೆ ಇವರಿಬ್ಬರ ನಡುವೆ ಯಾರು ಹೆಚ್ಚು ಮತ ತೆಗೆಯುತ್ತಾರೆ೦ಬುವುದನ್ನು ಕಾದು ನೋಡ ಬೇಕಾಗಿದೆ.

ಇದೇ ಸ೦ದರ್ಭದಲ್ಲಿ ಉಡುಪಿ ವಿಧಾನ ಸಭಾಕ್ಷೇತ್ರಕ್ಕೆ ಜೆಡಿಎಸ್ ನಿ೦ದ ಬ್ರಹ್ಮಾವರದ  ಸತೀಶ್ ಪೂಜಾರಿ ನಾಮಪತ್ರವನ್ನು ಸಲ್ಲಿಸಿದರು

Comments on this Article
MM ALVARES, Mangalore Wed, April-17-2013, 7:30
There should be a limit for GREED. Let some one get a chance. 7 Terms not enough...!? The fight between these two heavy-weights, now hand-over a Seat to BJP’s Lalaji as cake piece, once again...!
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi: Traffic congestion and dangers to pedestria
View More

Dear Ashita AmoraDear Ashita Amora
Veez Konkani Issue # 139Veez Konkani Issue # 139
Milarchi Lara - Bulletin Issue July 2020.Milarchi Lara - Bulletin Issue July 2020.
Cut down your medical expenses. With Manipal Arogya CardCut down your medical expenses. With Manipal Arogya Card
Contact for Masks, Sanitizers, PPE kits and More..Contact for Masks,  Sanitizers, PPE kits and More..
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums