ಉಡುಪಿ ನವೀಕೃತ ವರ್ಣ ನೈಸ್‌ ಪ್ರಿಂಟ್‌ ಉತ್ಕೃಷ್ಟ ಸೇವೆ ಉದ್ಘಾಟನೆ


jayaprakash kiniudupi
KNW, 17-04-2013 13:56:12


Write Comment     |     E-Mail To a Friend     |     Facebook     |     Twitter     |     Print


ಉಡುಪಿ: ಕರಾವಳಿಯಲ್ಲಿ ಬಹುವರ್ಣ ಫೋಟೋ ಮುದ್ರಣದಲ್ಲಿ ಖ್ಯಾತಿ ಗಳಿಸಿರುವ ಉಡುಪಿಯ  ವರ್ಣ ನೈಸ್‌ ಪ್ರಿಂಟ್‌ನ ನವೀಕೃತ ವಿಭಾಗವನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಎ.16ರ ಮ೦ಗಳವಾರದ೦ದು ಉದ್ಘಾಟಿಸಿದರು.

ಭೌತಿಕವಾಗಿ ಚಿತ್ರಗಳನ್ನು ದಾಖಲಿಸಿಡುವ ಕ್ರಮಕ್ಕೆ ವಿಶೇಷ ಒತ್ತು ನೀಡಿರುವ ವರ್ಣ ಕಲರ್ ಲ್ಯಾಬ್‌ ಅವರು ಕಳೆದ ಎರಡೂವರೆ ದಶಕಗಳಿಂದ ವಿಶೇಷ ಖ್ಯಾತಿ ಗಳಿಸಿದ್ದಾರೆ. ಚಿತ್ರ ಮುದ್ರಣ ಕ್ಷೇತ್ರದಲ್ಲಿ ಅಪಾರ ವಿಶ್ವಾಸ ಪಡೆದ ಸಂಸ್ಥೆ ಇದೀಗ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮತ್ತಷ್ಟು ಹೊಸ ಸೇವೆ ನೀಡಲು ಸಿದ್ಧವಾಗಿದೆ. ಅವರ ಯೋಜನೆಗಳು ಯಶಸ್ವಿಯಾಗಲಿ ಎಂದು ಶ್ರೀಪಾದರು ಆಶೀರ್ವದಿಸಿದರು.

ಫೋಟೋ ಮುದ್ರಣಕ್ಕೆ ಮಾತ್ರ ಸೀಮಿತಗೊಳ್ಳದ ವರ್ಣ ಡಿಜಿಟಲ್‌ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. ಆಲ್ಬಮ್‌, ಡಿಜಿಟಲ್‌ ಫೂಟೋ ಮಿಕ್ಸಿಂಗ್‌, ಕಪ್ಪು ಬಿಳುಪು ಚಿತ್ರಗಳನ್ನು ಬಹುವರ್ಣಕ್ಕೆ ಪರಿವರ್ತಿಸುವಿಕೆ, ಚಿಕ್ಕ ಚಿತ್ರಗಳನ್ನು ಹಿಗ್ಗಿಸುವಿಕೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಚಿತ್ರಗಳ ಸಂರಕ್ಷಣೆಗೂ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಡಿಜಿಟಲ್‌ ಕೆಮರಾ, ಮೊಬೈಲ್‌ ಕೆಮರಾ, ಸಿಡಿ, ಡಿವಿಡಿ, ಪೆನ್‌ಡ್ರೈವ್‌, ಮೆಮರಿ ಕಾರ್ಡ್‌ನಿಂದ ನೇರವಾಗಿ ಮುದ್ರಣ;36 ಇಂಚು ಅಗಲದ ವರೆಗೆ ಎನ್‌ಲಾರ್ಜ್‌ಮೆಂಟ್‌ ಮುದ್ರಣ, 1,440 ಡಿಪಿಐಯಲ್ಲಿ ಎರಡೂ ಬದಿಗಳಲ್ಲಿಯೂ ಮುದ್ರಣ, ನಾನ್‌ಟಿಯರ್ ಬಲ್‌, ಆರ್ , ಸಿಸಿ ಗ್ಲಾಸಿ ಅಥವಾ ಮ್ಯಾಟ್‌ ಮುದ್ರಣದೊಂದಿಗೆ ಫೆದರ್ ಟಚ್‌ ಅಲ್ಬಮ್‌ ತಯಾರಿ ಮಾಡಲಾಗುತ್ತದೆ. ಬಿಸಿನೆಸ್‌ ಕಾರ್ಡ್‌, ಕ್ಯಾಲೆಂಡರ್ , ಗುರುತುಪತ್ರ, ಆಮಂತ್ರಣ ಮುದ್ರಿಸಿ ಕೊಡುವ ಸೌಲಭ್ಯಗಳೂ ಲಭ್ಯ ಎಂದು ವರ್ಣ ನೈಸ್‌ ಪ್ರಿಂಟ್‌ನ ಮಾಲಕ ಭುವನೇಂದ್ರ ಕಿದಿಯುರು ತಿಳಿಸಿದರು.

ನೊರಿಟ್ಸು ಕಂಪೆನಿ ಮಹಾ ಪ್ರಬಂಧಕ ರಾಜೇಂದ್ರ ಸಿಂಗ್‌ ರಾಥೋಡ್‌ ಮಾತನಾಡಿ, ಚಿತ್ರಗಳ ಮುದ್ರಣ ಕ್ಷೇತ್ರದಲ್ಲಿ ವಿಶ್ವದರ್ಜೆ ಕಾಪಾಡಿಕೊಂಡು ಬಂದ ತಮ್ಮ ಸಂಸ್ಥೆ ಛಾಯಾಚಿತ್ರಗಾರರ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ನವನವೀನ ಸಂಶೋಧನೆ ನಡೆಸಿ ಚಿತ್ರ ಮುದ್ರಣಕ್ಕೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದೆ ಎಂದರು.

ಹೀರಾ ಬಿ. ಕಿದಿಯುರು, ಪ್ರಾದೇಶಿಕ ಪ್ರಬಂಧಕ ದಾಮೋದರ ಹೆಗಡೆ, ಸಿಂಡಿಕೇಟ್‌ ಬ್ಯಾಂಕ್‌ ಕಡೆಕಾರು ಶಾಖೆ ಪ್ರಬಂಧಕ ಕೃಷ್ಣಾನಂದ ಪೈ, ಎಸ್‌ಕೆಪಿಎ ಅಧ್ಯಕ್ಷ ವಾಸುದೇವ ರಾವ್‌, ಎಸ್‌ಕೆಪಿಎ ಉಡುಪಿ ವಲಯ ಅಧ್ಯಕ್ಷ ಸುಂದರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಫೊಟೋಗ್ರಾಫ‌ರ್ ಅಸೋಸಿಯೇಶನ್‌ ನಿರ್ದೇಶಕರಾಗಿ ಚುನಾಯಿತರಾದ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ ಹಾಗೂ ವರ್ಣ ನೈಸ್‌ ಪ್ರಿಂಟ್‌ನಲ್ಲಿ ಸುಮಾರು 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಯಂತ್‌ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು.

ಹೊಟೇಲ್‌ ಕಿದಿಯುರಿನ ನಿರ್ದೇಶಕ ಜಿತೇಶ್‌ ಕಿದಿಯುರು ಸ್ವಾಗತಿಸಿ, ಪೆರ್ಡೂರು ರತ್ನಾಕರ ಕಲ್ಯಾಣಿ ವಂದಿಸಿದರು.ಪ್ರೊ.ವಿನ್ಸೆಂಟ್‌ ಆಳ್ವ ಕಾರ್ಯಕ್ರಮ ನಿರೂಪಿಸಿದರು.ನ೦ತರ ಹಲವಾರು ಮನೋರ೦ಜನಾ ಕಾರ್ಯಕ್ರಮ ಜರಗಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi: Traffic congestion and dangers to pedestria
View More

Dear Ashita AmoraDear Ashita Amora
Veez Konkani Issue # 139Veez Konkani Issue # 139
Milarchi Lara - Bulletin Issue July 2020.Milarchi Lara - Bulletin Issue July 2020.
Cut down your medical expenses. With Manipal Arogya CardCut down your medical expenses. With Manipal Arogya Card
Contact for Masks, Sanitizers, PPE kits and More..Contact for Masks,  Sanitizers, PPE kits and More..
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums