ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು:ಉಡುಪಿ ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು


jayaprakash kiniudupi
KNW, 19-04-2013 11:42:59


Write Comment     |     E-Mail To a Friend     |     Facebook     |     Twitter     |     Print


ಉಡುಪಿ/ಮಣಿಪಾಲ:ಏ.19. ಮು೦ದಿನ ತಿ೦ಗಳ ಮೇ5ರಂದು ನಡೆಯುವ ಉಡುಪಿ ವಿಧಾನ ಸಭೆಗೆ ನಡೆಯುವ ಚುನಾವಣೆಯನ್ನು ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲೆಗೆ ಆಗಮಿಸಿರುವ ಚುನಾವಣಾ ವೀಕ್ಷಕರಿಗೆ ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ರವರು ತಿಳಿಸಿದ್ದಾರೆ.

ಅವರು ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯತ್ ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಮಾತನಾಡಿದರು.

ಚುನಾವಣೆ ಪಾರದರ್ಶಕವಾಗಿ ನಡೆಯಲು ವಿವಿಧ ತಂಡಗಳನ್ನು ನೇಮಕ ಮಾಡಲಾಗಿದ್ದು,81 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದು, ಅವರಿಗೆ ದಂಡನೀಯ ಅಧಿಕಾರವನ್ನು  ಕೊಡಲಾಗಿದೆ ಹಾಗೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸ್ವೀಪ್ ಯೋಜನೆ ಮೂಲಕ ಹೆಚ್ಚಿನ ಪ್ರಚಾರ ನೀಡುತ್ತಿದ್ದು, ಅಂಚೆ ಮತದಾನದ ಕುರಿತು ಹೆಚ್ಚಿನ ಗಮನ ಹರಿಸಲಾಗಿದೆ ಹಾಗೂ ಜಿಲ್ಲೆಯ ಮತದಾನದ ಪ್ರಮಾಣವನ್ನು ಶೇ.೮೦ ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರು ನೀಡಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಇದರ ಮೂಲಕ ಈ ವರೆಗೆ  8ದೂರುಗಳು ಬಂದಿದ್ದು, ಅವುಗಳಲ್ಲಿ 3ಪ್ರಕರಣಗಳ ಕುರಿತು ಐ.ಪಿ.ಸಿ ಹಾಗೂ ಆರ್.ಪಿ. ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಹಾಗೂ 14ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚುನಾವಣೆಯ ಮತ ಎಣಿಕೆಯನ್ನು ಉಡುಪಿಯ ಕುಂಜಿಬೆಟ್ಟುವಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಸಲಾಗುವುದು ಹಾಗೂ ಜಿಲ್ಲೆಗೆ ಚುನಾವಣೆಗಾಗಿ 1197ಎಲೆಕ್ಟ್ರಾನಿಕ್ ಮತ ಯಂತ್ರಗಳು ಬಂದಿದ್ದು, ಅವುಗಳನ್ನು ಪರೀಕ್ಷಿಸಲಾಗಿದೆ  ಮತ್ತು ಮತ ಎಣಿಕೆಯ ಕುರಿತು ಮೇ 7 ರಂದು ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ವರೆಗೆ 53ಅಭ್ಯರ್ಥಿಗಳು 97 ನಾಪತ್ರಗಳನ್ನು ಸಲ್ಲಿಸಿದ್ದು, ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದು, 52ಅಭ್ಯರ್ಥಿಗಳು ಕಣದಲ್ಲಿದ್ದಾರೆoದು ತಿಳಿಸಿದರು.

ಜಿಲ್ಲೆಯ 1038 ಮತಗಟ್ಟೆಗಳಿದ್ದು, ಜಿಲ್ಲೆಯಲ್ಲಿ 599ಪೋಲಿಸ್ ಪೇದೆಗಳು 839 ಗೃಹ ರಕ್ಷಕ ಸಿಬ್ಬಂದಿ ಲಭ್ಯವಿದು, ಉಳಿದ  ಮತಗಟ್ಟೆಗಳಿಗೆ ಮತ್ತು ಕೇಂದ್ರ ಪಡೆಯ ಸಿಬ್ಬಂದಿಯನ್ನು  ನಿಯೋಜಿಸಲಾಗುವುದು. ಚುನಾವಣಾ ಅಕ್ರಮ ತಡೆಗೆ 16 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದು, 58 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 20ಗ್ರಾಮಗಳ 52ಮತಗಟ್ಟೆಗಳು ನಕ್ಸಲ್ ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿವೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ರವರು ತಿಳಿಸಿದರು.

ಜಿಲ್ಲೆಗೆ 15 ಕೇಂದ್ರೀಯ ಭದ್ರತಾ ಪಡೆಯ ತುಕಡಿಗಳನ್ನು ಹಾಗೂ 4 ಕೆ.ಎಸ್.ಆರ್.ಪಿ. ಹಾಗೂ ರಾಜ್ಯ ನಕ್ಸಲ್ ನಿಗ್ರಹ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದ್ದು, ಈ ಸಿಬ್ಬಂದಿಗೆ ಅಗತ್ಯ ವಸತಿ ಸೌಲಭ್ಯಗಳನ್ನು ಹಾಗೂ ಕಾರ್ಯ ನಿರ್ವಹಿಸುವ ಸ್ಥಳಗಳನ್ನು ಗುರುತಿಸಿ, ಸಂಬಂದಪಟ್ಟ ಸ್ಥಳಗಳಿಗೆ ನಿಯೋಜಿಸಲಾಗಿದೆ ಹಾಗೂ  ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಸೂಚಿಸಲಾಗಿದೆ ಹಾಗೂ ಜಿಲ್ಲೆಯ 5ವಿಧಾನ ಸಭಾ ವ್ಯಾಪ್ತಿಯಲ್ಲಿ ಪೋಲಿಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಮತ್ತು ಜಿಲ್ಲೆಯಲ್ಲಿ ಖಾಸಗಿ ವ್ಯಕ್ತಿಗಳ ಬಳಿ ಇದ್ದ ಶೇ.99ರಷ್ಟು ಶಸ್ತಾಸ್ರ್ತಗಳ ಠೇವಣಿಯನ್ನು ಮಾಡಲಾಗಿದೆ ಎಂದು ಪೋಲಿಸ್ ವರಿಷ್ಠಾಧಿಕಾರಿಗಳು ತಿಳಿಸಿದರು.

ಜಿಲ್ಲೆಯ ಪ್ರತಿ ಮತಗಟ್ಟೆ ಮತ್ತು ಸಂಬಂದಪಟ್ಟ ಅಧಿಕಾರಿಗಳ  ವಿವರಗಳನ್ನು ಎನ್.ಐ.ಸಿ. ಯಲ್ಲಿ ದಾಖಲಿಸಿದ್ದು, ಮತದಾನದ ಸಂದರ್ಭದಲ್ಲಿ ಮತದಾನದ ವಿವರಗಳನ್ನು ಶೀಘ್ರವಾಗಿ ಪಡೆಯಲು ವ್ಯವಸ್ಥೆ ರೂಪಿಸಲಾಗಿದೆ ಎಂದು ಎನ್.ಐ.ಸಿ ಅಧಿಕಾರಿ ಮಂಜುನಾಥ್ ತಿಳಿಸಿದರು.


ಉಡುಪಿ ವಿಧಾನಸಭಾ ಚುನಾವಣಾ ವೀಕ್ಷಕರಾದ ಪಿ.ಕೆ ಮೋಹಾಂತಿ ರವರು   ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆಗೆ ಎಲ್ಲಾ ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.
 à²¸à²­à³†à²¯à²²à³à²²à²¿ ಕಾಪು ಚುನಾವಣಾ ವೀಕ್ಷಕರಾದ ಕರಣ್ ಸಿಂಗ್ ಚೌಹಾನ್, ಕಾರ್ಕಳ ಚುನಾವಣಾ ವೀಕ್ಷಕರಾದ ಪ್ರಕಾಶ್ ಕುಮಾರ್, ಕುಂದಾಪುರ ಚುನಾವಣಾ ವೀಕ್ಷಕರಾದ ಟಿ.ಕೆ. ಛೌಬೆ, ಬೈಂದೂರು ಚುನಾವಣಾ ವೀಕ್ಷಕರಾದ ಎಸ್.ಸಿ. ರಾಹತ್ ಗಾಂವಕರ್, ಪೋಲಿಸ್ ವೀಕ್ಷಕರಾದ ಎಂ.ಸಿ. ಸಾರಂಗನ್, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು, ಚುನಾವಣಾ ಕಾರ್ಯಕ್ಕೆ ನೇಮಿಸಿರುವ ವಿವಿಧ ಸಮಿತಿಗಳ ಮುಖ್ಯಸ್ಥರು, ಪೋಲಿಸ್ ಅಧಿಕಾರಿಗಳು ಮತ್ತು ಕೇಂದ್ರ ಭದ್ರತಾ ಪಡೆಗಳ ಮುಖ್ಯಸ್ಥರು ಹಾಜರಿದ್ದರು.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Dear Ashita AmoraDear Ashita Amora
Veez Konkani Issue # 139Veez Konkani Issue # 139
Milarchi Lara - Bulletin Issue July 2020.Milarchi Lara - Bulletin Issue July 2020.
Cut down your medical expenses. With Manipal Arogya CardCut down your medical expenses. With Manipal Arogya Card
Contact for Masks, Sanitizers, PPE kits and More..Contact for Masks,  Sanitizers, PPE kits and More..
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums