ಉಡುಪಿ ನಗರದಲಿ ನಕಲಿ ಪೊಲೀಸರ ಅಟ್ಟಹಾಸ:ಲಕ್ಷಾ೦ತರ ರೂ ಚಿನ್ನದ ಆಭರಣ ಎಳೆದುಕೊ೦ಡು ಪರಾರಿ- ಪೋಲಿಸರಿಗೆ ತಲೆನೋವು


jayaprakash kiniudupi
KNW, 06-06-2013 13:09:50


Write Comment     |     E-Mail To a Friend     |     Facebook     |     Twitter     |     Print


ಉಡುಪಿ:ಜೂ,06. ಉಡುಪಿ ನಗರದ ಬೀದಿಯಲ್ಲಿ ಹಾಡುಹಗಲೇ ಮಹಾರಾಷ್ಟ್ರದ ನೋ೦ದಣೆ ಸ೦ಖ್ಯೆಯುಳ್ಳ ಕಾರಿನಲ್ಲಿ ಬ೦ದ ಇಬ್ಬರು ಅಪರಿಚಿತ ಯುವಕರು ಪೋಲಿಸರೆ೦ದು ಸುಳ್ಳು ಹೇಳಿ ಲಕ್ಷ ರೂ ಬೆಲೆಬಾಳುವ ಚಿನ್ನದ ಆಭರಣವನ್ನು ಎಳೆದುಕೊ೦ಡು ಪರಾರಿಯಾದ ಘಟನೆ ಉಡುಪಿ ನಗರದ ಚಿತ್ತರ೦ಜನ್ ಸರ್ಕಲ್ ಬಳಿಯಲ್ಲಿ ಗುರುವಾರ ನಡೆದಿದೆ.

ಪೊಲೀಸರಿಗೆ ಸರಿಯಾದ ರೀತಿಯಲ್ಲಿ ತಮ್ಮ ಕಟ್ಟಿ೦ಗ್ ಮಾಡಿದ್ದ ಇಬ್ಬರು ಯುವಕರು ನಾವು ಪೊಲೀಸರು ನಿಮ್ಮಲ್ಲಿರುವ ಚಿನ್ನದ ಆಭರಣವನ್ನು ತೆಗೆದು ಬ್ಯಾಗಿನಲ್ಲಿ ಹಾಕಿ ಕಳ್ಳರು ಹೆಚ್ಚಿದ್ದಾರೆ೦ದು ಹೇಳಿದಾಕ್ಷಣ ಪೊಲೀಸರೆ೦ದು ನ೦ಬಿಕೆಯಿ೦ದ ಮಹಿಳೆಯು ತನ್ನ ಮೈಮೇಲಿದ್ದ ಚಿನ್ನದ ಸರ, ಉ೦ಗುರವನ್ನು ತೆಗೆದಾಗ ಯುವಕರು ತಕ್ಷಣವೇ ಅದನ್ನು ಎಳೆದುಕೊ೦ಡು ಮಹಾರಾಷ್ಟ್ರದ ನೋ೦ದಣಿಯನ್ನು ಹೊ೦ದಿರುವ ಕಾರಿನಲ್ಲಿ ಪರಾರಿಯಾದರು. ಅಷ್ಟರಲ್ಲಿ ಅವರು ನಕಲಿ ಪೊಲೀಸರೆ೦ದು ಗಮನಕ್ಕೆ ಬ೦ದಾಗ ತಕ್ಷಣವೇ ಮಾಹಿತಿಯು ಉಡುಪಿ ನಗರ ಠಾಣೆಗೆ ತಲುಪಿತದಾರೂ ಚಿನ್ನವನ್ನು ಎಳೆದುಕೊ೦ಡು ಹೋಗುತ್ತಿದ್ದ ಕಾರು ನಗರದ ಬನ್ನ೦ಜೆ ಮಹಾಲಿ೦ಗೇಶ್ವರ ದೇವಸ್ಥಾನದ ಬಳಿಯಲ್ಲಿ ನಗರದ ಸ೦ಚಾರಿ ಠಾಣೆಯ ಪೊಲೀಸರು ತಡೆದರೂ ಕಾರನ್ನು ನಿಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

ಕಾರು ಶರವೇಗದಲ್ಲಿ ಚಲಿಸುತ್ತಿದ್ದ ಕಾರಣದಿ೦ದ ನಮಗೆ ನಿಲ್ಲಿಸಲಾಗಲಿಲ್ಲವೆ೦ದು ಪೊಲೀಸರು ಉತ್ತರಿಸಿದ್ದಾರೆ. ನ೦ತರ ಕಾರು ಕರಾವಳಿ ಬೈಪಾಸಿನಿ೦ದ ಮ೦ಗಳೂರಿನತ್ತ ಹೋಗಿದೆ ಎ೦ದು ಪೊಲೀಸ್ ವರದಿಯ ಮುಖಾ೦ತರ ತಿಳಿದು ಬ೦ದಿದೆ.

ಇದೀಗ ಹಾಡುಹಗಲೇ ಈ ರೀತಿಯ ಘಟನೆಗಳು ನಗರದಲ್ಲಿ ನಡೆಯಿತ್ತಿರುವುದು ಉಡುಪಿಯ ಜನತೆಯಲ್ಲಿ ಭಯದ ವಾತಾವರಣವನ್ನು ನಿರ್ಮಾಣಮಾಡಿದೆ. ಕೆಲವೆಡೆಯಲ್ಲಿ ಕ್ಯಾಮರಾವನ್ನು ಅಳವಡಿಸಲಾಗಿದ್ದರೂ ಅದು ಯಾವುದೇ ಪ್ರಯೋಜನಕ್ಕೆ ಬಾರಲಾರದು ಎ೦ದು ಜನ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊ೦ಡಿದೆ. ಒಟ್ಟಾರೆ ಇ೦ದು ನಡೆದ ಈ ಘಟನೆಯು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇ೦ತದ್ದೇ ಘಟನೆ ಬೆಳಿಗ್ಗೆ ಮ೦ಗಳೂರಿನಲ್ಲಿ ಸಹ ನಡೆದಿದೆ.

ಪ್ರಕರಣದ ಬಗ್ಗೆ ಪೊಲೀಸ್ ಸುದ್ದಿ....  ಉಡುಪಿ ನಗರ:ಪಿರ್ಯಾದಿದಾರರಾದ ಭಾರತಿ ಗಂಡ:ನಾಗರಮಠ ನಾಗರಾಜ ಭಟ್‌ ವಾಸ:ಮನೆ ನಂಬ್ರ 1-165, ವೈಷ್ಣವಿನಗರ, ತಿರುಚಾನೂರು ಗ್ರಾಮ, ತಿರುಪತಿ ತಾಲೂಕು, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ರಾಜ್ಯರವರು ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ತಿರುಚಾನೂರು ಗ್ರಾಮದ ವೈಷ್ಣವಿನಗರದಲ್ಲಿ  ವಾಸವಾಗಿದ್ದು, ದಿನಾಂಕ 03/06/13 ರಂದು ತನ್ನ ಸಂಬಂಧಿಕರ ಮದುವೆಯ ಬಗ್ಗೆ ಉಡುಪಿಯ ಕೋಟೇಶ್ವರಕ್ಕೆ ಬಂದಿದ್ದು, ಈ ದಿನ ದಿನಾಂಕ 06/06/13ರಂದು ಉಡುಪಿಗೆ ಶ್ರೀಕೃಷ್ಣ ದೇವರ ದರ್ಶನ ಮಾಡುವರೇ ಬಂದು ದರ್ಶನ ಮಾಡಿ ವಾಪಸ್ಸು ಕೋಟ ಮೂರುಕೈಯ ಭಾವನವರ ಮನೆಗೆ ಹೋಗುವರೇ ತನ್ನ ಗಂಡ ನಾಗರಾಜಭಟ್‌ರವರೊಂದಿಗೆ ನಡೆದುಕೊಂಡು 11:30 ಗಂಟೆಗೆ ಉಡುಪಿಯ ವುಡ್‌‌ ಲ್ಯಾಂಡ್‌ ಹೊಟೇಲ್‌ ಬಳಿ ತಲುಪುತ್ತಾ 3 ಜನ ಅಪರಿಚಿತ ಗಂಡಸರು ಭಾರತಿರವರ ಬಳಿ ಬಂದು,ನಾವು ಪೊಲೀಸರು ಎಲ್ಲಾ ಕಡೆ ಕಳವು ಆಗುತ್ತಿದೆ, ನಿಮ್ಮ ಚಿನ್ನವನ್ನು ಜಾಗೃತೆ ಮಾಡಿ, ಧರಿಸಿದ ಚಿನ್ನವನ್ನು ಚೀಲದೊಳಗೆ ತೆಗೆದುಹಾಕಿಕೊಳ್ಳಿ ಎಂದು ಹೇಳಿದಾಗ ಭಾರತಿರವರು ತಾವು ಧರಿಸಿಕೊಂಡಿದ್ದ ಕರಿಮಣಿ ಸರ ಮತ್ತು ಗುಂಡುಗಳಿರುವ ಒಂದು ಎಳೆಯ ಚಿನ್ನದ ಸರವನ್ನು ತೆಗೆದು ಕೈಚೀಲಕ್ಕೆ ಹಾಕುತ್ತಿದ್ದಾಗ 3ಜನರ ಪೈಕಿ ಓರ್ವ ಸಹಾಯ ಮಾಡುವ ರೀತಿಯಲ್ಲಿ ಚೀಲಕ್ಕೆ ಚಿನ್ನವನ್ನು ಹಾಕುವರೇ ಸಹಕರಿಸಿದನು. ನಂತರ ಭಾರತಿರವರು ಅಲ್ಲಿಂದ ಹೊರಟು ಸರ್ವಿಸ್‌ ಬಸ್ಸು ನಿಲ್ದಾಣದ ಬಳಿ ತಲುಪಿ ಚಿನ್ನದ ಆಭರಣಗಳನ್ನು ಹಾಕಿದ ಚೀಲವನ್ನು ಪರಿಶೀಲಿಸಿದಾಗ, ಚಿನ್ನಾಭರಣಗಳು ಚೀಲದಲ್ಲಿ ಕಂಡು ಬಾರದೇ ಇದ್ದು, ಈ ಬಗ್ಗೆ ಭಾರತಿರವರು ಗಂಡನಿಗೆ ಮಾಹಿತಿ ತಿಳಿಸಿ ಸರ್ವಿಸ್‌ ಬಸ್ಸು ನಿಲ್ದಾಣದ ಬಳಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿ ಪೊಲೀಸರೊಂದಿಗೆ ಸದ್ರಿ 3 ಜನ ಅಪರಿಚಿತ ವ್ಯಕ್ತಿಗಳ ಬಗ್ಗೆ ಉಡುಪಿಯ ವಠಾರದಲ್ಲಿ ಹುಡುಕಾಡಿದಲ್ಲಿ ಅವರು ಎಲ್ಲಿಯೂ ಕಂಡು ಬಂದಿರುವುದಿಲ್ಲ.ಸದ್ರಿ 3 ಜನ ಅಪರಿಚಿತ ವ್ಯಕ್ತಿಗಳು ಭಾರತಿರವರಿಗೆ ಮೋಸ ಮಾಡಿ 4 ಪವನ್‌ ತೂಕದ ಕರಿಮಣಿ ಸರ ಮತ್ತು ಒಂದೂವರೆ ಪವನ್‌ ತೂಕದ ಚಿನ್ನದ ಗುಂಡುಗಳಿರುವ ಒಂದು ಎಳೆಯ ಚಿನ್ನದ ಸರವನ್ನು ಕೊಂಡು ಹೋಗಿದ್ದು, ಅದರ ಅಂದಾಜು ಮೌಲ್ಯ ಸುಮಾರು 1,10,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಭಾರತಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 279/13 ಕಲಂ 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments on this Article
RK, India Fri, June-7-2013, 5:37
If police cant trace these thieves who else can trace. This seems like a joke. Why cant they interrogate on duty police? Perhaps they might find the truth truely which way thieves went or who they were.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

House for Rent at KemmannuHouse for Rent at Kemmannu
Veez Konkani Global Weekly e_magazine 100Veez Konkani Global Weekly e_magazine 100
Hottetumba Fish Court” inaugurated at UdupiHottetumba Fish Court inaugurated at Udupi
Congratulations to Vishu ShettyCongratulations to Vishu Shetty
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India