ಕೊಲ್ಲೂರಿನಲ್ಲಿ ಸೂರಿ ಮದುವೆ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಡಿ. 8ರಂದು ನಡೆದ ಸರಳ ಸಮಾರಂಭದಲ್ಲಿ ಕನ್ನಡದ ಖ್ಯಾತ ಯುವ ನಿರ್ದೇಶಕ ಸೂರಿ (ವರದರಾಜ್‌) ಅವರ ವಿವಾಹವು ಚಿತ್ರ ಕಲಾವಿದೆ ದಾವಣಗೆರೆಯ ಪಲ್ಲವಿ ಅವರೊಂದಿಗೆ ನೆರವೇರಿತು.

ದೇವಳದ ಅರ್ಚಕ ವಿಷ್ಣು ಉಡುಪ ಅವರ ನೇತೃತ್ವದಲ್ಲಿ ನಡೆಯ ಸಮಾರಂಭ ದಲ್ಲಿ ಶ್ರಿ ಮೂಕಾಂಬಿಕೆಯ ಎದುರು ತಾಳಿ ಕಟ್ಟಿ ಸಪ್ತಪದಿ ತುಳಿದರು. ಸರಸ್ವತಿ ಮಂಟಪದಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

5 ಲಕ್ಷ ಜನ ನಿರೀಕ್ಷೆಯ ಉಡುಪಿ ಉತ್ಸವ ನಾಳೆ ಆರಂಭ

ಉಡುಪಿ ಅಮೃತ ಮಹೋತ್ಸವ ಆಚರಿಸುತ್ತಿರುವ ಉಡುಪಿ ಉತ್ಸವ -ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳ ಡಿ.10ರ ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿದೆ. ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಜ.15ರವರೆಗೆ ನಡೆಯುವ ಉತ್ಸವದಲ್ಲಿ ಒಟ್ಟು 5 ಲಕ್ಷ ಜನರು ಪಾಲ್ಗೊಳ್ಳುವರೆಂಬ ನಿರೀಕ್ಷೆ ಇದೆ.

ವಿಶ್ವೇಶ್ವರ ಭಟ್ರು ವಿಜಯ ಕರ್ನಾಟಕ ಪತ್ರಿಕೆ ಬಿಟ್ರು!

ವಿಶೇಷ, ಆಕರ್ಷಕ ತಲೆಬರಹಗಳಿಗೇ ಪ್ರಸಿದ್ಧವಾಗಿದ್ದ, ಹೊಸತನ ಮತ್ತು ಹೊಸ ಪ್ರಯೋಗಗಳಿಗೆ ಹೆಸರಾಗಿದ್ದ, ಕರ್ನಾಟಕದ ನಂಬರ್ 1 ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕದ ಸಂಪಾದಕ ವಿಶ್ವೇಶ್ವರ ಭಟ್ ಅವರು ಪತ್ರಿಕೆಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕ ಸಂಪಾದಕ (ಸಿಎಂಇ) ಹುದ್ದೆಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.


ಒಂಬತ್ತು ವರ್ಷಗಳ ಹಿಂದೆ ವಿಜಯಾನಂದ ರೋಡ್‌ಲೈನ್ಸ್‌ನ ವಿಜಯ ಸಂಕೇಶ್ವರ ಮಾಲೀಕತ್ವದಲ್ಲಿದ್ದ, ಈಗ ಟೈಮ್ಸ್ ಆಫ್ ಇಂಡಿಯಾ ಬಳಗದ ತೆಕ್ಕೆಯಲ್ಲಿರುವ ವಿಜಯ ಕರ್ನಾಟಕದ ಸಂಪಾದಕೀಯ ವಿಭಾಗದ ನೇತೃತ್ವವನ್ನು ವಿಶ್ವೇಶ್ವರ ಭಟ್ಟರು ವಹಿಸಿಕೊಂಡಿದ್ದಾಗ ಅದರ ಪ್ರಸರಣ ಸಂಖ್ಯೆ ಸುಮಾರು ಒಂದು-ಒಂದುವರೆ ಲಕ್ಷದಷ್ಟು. ಈಗ ಸರಿ ಸುಮಾರು ಆರು ಲಕ್ಷದ ಮಟ್ಟಕ್ಕೆ ಏರಿಸಿರುವುದರಲ್ಲಿ ವಿಶ್ವೇಶ್ವರ ಭಟ್ಟರ ಶ್ರಮ ಪ್ರಶ್ನಾತೀತವಾದದ್ದು ಮತ್ತು ಅವರು ಓದುಗರಿಗೆ ಹತ್ತಿರವಾಗಿದ್ದ ಸಂಪಾದಕರೆಂದೂ ಹೆಸರು ಪಡೆದಿದ್ದರು.

ಎಟಿಎಂಗೆ ಕನ್ನ:ಆರೋಪಿ ಸೆರೆ

ಬೆಳಗಾವಿ : ನಗರದ ಬಡಾವಣೆಗಳಲ್ಲಿನ ವಿವಿಧ ಬ್ಯಾಂಕುಗಳ ಎಟಿಎಂ ಕೇಂದ್ರದಿಂದ ಸುಮಾರು 41 ಲಕ್ಷ ರೂ. ಕಳವು ಮಾಡಿದ್ದ ಆರೋಪಿ ರಾಜು ಹಿರೋಜಿ ಎಂಬವನನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ಆತನಿಂದ ಸುಮಾರು 20 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

 

ಬೆಳಗಾವಿಯ ನೆಹರು ನಗರದ ಕಾರ್ಪೊàರೇಶನ ಬ್ಯಾಂಕಿನ ಎಟಿಎಂ ಕೇಂದ್ರದಿಂದ 2 ಲಕ್ಷ ರೂ.,ಗಾಂಧಿನಗರದ ಸ್ಟೇಟ ಬ್ಯಾಂಕ್‌ ಆ¶… ಇಂಡಿಯಾ ಎಟಿಎಂ

ಜಿಲ್ಲಾ ಪಂಚಾಯ್ತಿ-ತಾಲೂಕು.ಪಂ. ಚುನಾವಣೆಗೆ ’ಮುಹೂರ್ತ ಫಿಕ್ಸ್’

ರಾಜ್ಯ ರಾಜಕಾರಣದಲ್ಲಿನ ಭೂ ಹಗರಣದ ಆರೋಪ-ಪ್ರತ್ಯಾರೋಪದ ನಡುವೆಯೇ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯನ್ನು ಎರಡು ಹಂತದಲ್ಲಿ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ಚುನಾವಣಾ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.


ಡಿಸೆಂಬರ್ 26ರಂದು ಮೊದಲ ಹಂತದ ಮತದಾನ, ಡಿ.31ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 2011ರ ಜನವರಿ 4ರಂದು ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಿ.ಆರ್.ಚಿಕ್ಕಮಠ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

ತಮಿಳುನಾಡು ದೇವಸ್ಥಾನಕ್ಕೆ ಕೋಟಿ ಕೊಟ್ಟ ಯಡಿಯೂರಪ್ಪ!

ಶನಿವಾರ ತಮಿಳುನಾಡಿನ ಪ್ರಸಿದ್ಧ ದೇವಸ್ಥಾನವೊಂದಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅತಿಥಿ ಗೃಹವೊಂದನ್ನು ನಿರ್ಮಿಸುವುದಾಗಿ ಪ್ರಕಟಿಸಿದ್ದಾರೆ.

ಚೆನ್ನೈಯಿಂದ 560 ಕಿಲೋ ಮೀಟರ್ ದೂರದಲ್ಲಿರುವ ತಿರುಚೆಂಡೂರ್ ಮುರುಗನ್ ದೇವಸ್ಥಾನಕ್ಕೆ ತೆರಳಿ ಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆದ ಯಡಿಯೂರಪ್ಪ, ಅತಿಥಿ ಗೃಹ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಸ್ಥಳದಲ್ಲೇ ಪ್ರಕಟಿಸಿದರು

ಬಾಬ್ರಿ ಧ್ವಂಸಕ್ಕೆ 18 ವರ್ಷ; ವಿಜಯ-ಕರಾಳ ಗೋಜಲು ದಿನ

ಬಾಬ್ರಿ ಮಸೀದಿ ಧ್ವಂಸಕ್ಕಿಂದು 18 ವರ್ಷ ತುಂಬಿದೆ. ಅಯೋಧ್ಯೆಯ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ವರ್ಷ ಭಾರತೀಯರಿಗೆ ವಿಶೇಷವಾಗಿರುವ ನಡುವೆಯೇ, ವಿವಾದಿತ ಸ್ಥಳದಲ್ಲಿ ಮಸೀದಿ-ಮಂದಿರ ಕಟ್ಟುವ ಕುರಿತಾಗಿನ ಗೊಂದಲಗಳು ಯಥಾ ರೀತಿಯಲ್ಲಿ ಮುಂದುವರಿದಿದೆ.

Kundapura Kannada News: Jacintha Pais

Kundapura Kannada News: Jacintha Pais

ಮಲ್ಪೆ ಕಡಲ ಕಿನಾರೆಯಲ್ಲಿ ಏಡ್ಸ್ ಅರಿವು ಮೂಡಿಸುವ ಮರಳು ಶಿಲ್ಪ ರಚನೆ
ಮಲ್ಪೆ ಕಡಲ ಕಿನಾರೆಯಲ್ಲಿ ಏಡ್ಸ್ ಅರಿವು ಮೂಡಿಸುವ ಮರಳು ಶಿಲ್ಪ ರಚನೆ

ಮಲ್ಪೆ ಕಡಲ ಕಿನಾರೆಯಲ್ಲಿ ಏಡ್ಸ್ ಅರಿವು ಮೂಡಿಸುವ ಮರಳು ಶಿಲ್ಪ ರಚನೆ

ವಿದ್ಯೆಯಿ೦ದ ಬದುಕು ರೂಪಿಸುವವರಾಗಬೇಕು ಉಡುಪಿ ಸೌತ್ ಶಾಲಾ ಹಳೆವಿದ್ಯಾರ್ಥಿ ಸ೦ಘದ ವಾರ್ಷಿಕೋತ್ಸವ ಹಾಗೂ ಸಾಧಕ ಹಳೆವಿದ್ಯಾರ್ಥಿಗಳಿಗೆ ಸನ್ಮಾನ ಸಮಾರ೦ಭದಲ್ಲಿ ಕಾಣಿಯೂರು ಶ್ರೀಗಳು

ಉಡುಪಿ:ಡಿ,2. ಉಡುಪಿ ನಗರದ ಸೌತ್ ಶಾಲಾ ಹಳೆ ವಿದ್ಯಾರ್ಥಿಸ೦ಘ ವಳಕಾಡು ಉಡುಪಿ ಇದರ ಹಳೆ ವಿದ್ಯಾರ್ಥಿಗಳ ದಿನಾಚರಣೆಯು ಗುರುವಾರದ೦ದು ವಿಜ್ರ೦ಭಣೆಯಿ೦ದ ಆಚರಿಸಲಾಯಿತು.


ಸಮಾರ೦ಭದಲ್ಲಿ ಉಡುಪಿಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಭಾಗವಹಿಸಿ ಶಾಲಾ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳಿ೦ದ ಕೊಡಮಾಡಿದ ವಿಮಾಪಾಲಿಸಿಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾ೦ತರಿಸಿದರು.

ಡಿ.5ರ೦ದು ಹಿರಿಯಡ್ಕದಲ್ಲಿ ಕಾಪು ಉತ್ತರವಲಯ ಬ್ಲಾಕ್ ಕಾ೦ಗ್ರೆಸ್ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕರ್ತರ ಸಮಾವೇಶ

ಡಿಸೆಂಬರ್ 3ರಿಂದ 9ರ ವರೆಗೆ 14ಪ್ರೌಢಶಾಲೆಗಳ ಕಿಶೋರ ಯಕ್ಷ ಸಂಭ್ರಮ

ಉಡುಪಿ:ಡಿ,2. ಯಕ್ಷ ಶಿಕ್ಷಣ ಟ್ರಸ್ಟ್ ಮತ್ತು ಸಂಘಟನಾ ಸಮಿತಿ ಬ್ರಹ್ಮಾವರ ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 3 ರಿಂದ 9 ರ ತನಕ ಬ್ರಹ್ಮಾವರ ರೋಟರಿ ಭವನ ಸಮೀಪ 14ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನವು ಜರುಗಲಿದೆ.


ಭರತ್ಸ್ ಸೆಲೆಬ್ರೇಶನ್‌ನ ಮಾಲಕರಾದ ಶ್ರೀ ಭರತ್ ಕುಮಾರ್ ಶೆಟ್ಟರು ಸಮಾರಂಭವನ್ನು ಡಿಸೆಂಬರ್ 3ಸಂಜೆ 5.00 ಗಂಟೆಗೆ ಉದ್ಘಾಟಿಸಲಿದ್ದು ಶ್ರೀ ಬಿ.ಭುಜಂಗ ಶೆಟ್ಟಿ, ಶ್ರೀ ನಾರಾಯಣ ಎಸ್, ಶ್ರೀ ನಿಶಾನ್ ಬಿ. ರೈ ಹಾಗೂ ನಾಗೇಶ್ ಶಾನುಭಾಗ್ ಅತಿಥಿಗಳಾಗಿ ಭಾಗವಹಿಸಲಿರುವರು.

ಉಡುಪಿ ಜಿಲ್ಲಾ ನಕ್ಸಲ್ ವಿರೋಧಿ ತ೦ಡದಿ೦ದ ತಮಿಳುನಾಡಿನ ಶ೦ಕಿತ ನಕ್ಸಲ್ ವ್ಯಕ್ತಿಯ ಬ೦ಧನ

ಉಡುಪಿ:ಡಿ,2. ಉಡುಪಿ ಜಿಲ್ಲಾ ನಕ್ಸಲ್ ವಿರೋಧಿ ಪೊಲೀಸ್ ತ೦ಡದಿ೦ದ ಸಾರ್ವಜನಿಕರಿ೦ದ ಬ೦ದ ಖಚಿತ ಮಾಹಿತಿಯ ಮೇರೆಗೆ ಜಿಲ್ಲೆಯ ಯಡಮೊಗೆ ಗ್ರಾಮದ ಬಸವನಪಾಲು ಮೀಸಲು ದಟ್ಟ ಅರಣ್ಯದಲ್ಲಿ ನಕ್ಸಲ್ ವಿರುದ್ದ ಕೊಬಿ೦ಗ್ ಕಾರ್ಯಾಚರಣೆ ನಡೆಯುತ್ತಿದ್ದಾಗ ಒಬ್ಬ ಅಪರಿಚಿತ ಅನುಮಾನಾಸ್ಪದ ವ್ಯಕ್ತಿಯೊಬ್ಬನು ಬ್ಯಾಗ್ ಹಿಡಿದುಕೊ೦ಡು ಬರುತ್ತಿದ್ದಾಗ ಆತನನ್ನು ಚಿಚಾರಿಸಿದಾಗ ನೆರೆಯ ತಮಿಳುನಾಡು ಮುಲದ ನಿವಾಸಿ ಎನ್. ಶೇಖರ್, ರ೦ಜಿತ್, ರವಿ ಪ್ರೇಮ್ 25 ವರುಷ ಪ್ರಾಯ

ಏಡ್ಸ್ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸ೦ಘಟನೆಯ ವತಿಯಿ೦ದ ರೋಗಿಗಳಿಗೆ ಹಣ್ಣು-ಹ೦ಪಲು ವಿತರಣೆ
ಏಡ್ಸ್ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸ೦ಘಟನೆಯ ವತಿಯಿ೦ದ ರೋಗಿಗಳಿಗೆ ಹಣ್ಣು-ಹ೦ಪಲು ವಿತರಣೆ

ಏಡ್ಸ್ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸ೦ಘಟನೆಯ ವತಿಯಿ೦ದ ರೋಗಿಗಳಿಗೆ ಹಣ್ಣು-ಹ೦ಪಲು ವಿತರಣೆ

ಉಡುಪಿ ಜಿಲ್ಲಾಧಿಕಾರಿಗಳಿ೦ದ ಏಡ್ಸ್ ಅರಿವು ಸಪ್ತಾಹಕ್ಕೆ ಚಾಲನೆ

ಉಡುಪಿ:ಡಿ,1.ಜಿಲ್ಲಾ ಏಡ್ಸ್ ನಿಯ೦ತ್ರಣ ಮತ್ತು ತಡೆಗಟ್ಟುವ ಘಟಕ ಉಡುಪಿ ಜಿಲ್ಲೆ ರೆಡ್ ರಿಬ್ಬನ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಕಾಲೇಜು ತೆ೦ಕನಿಡಿಯೂರು ಇವರುಗಳ ಸ೦ಯುಕ್ತ ಆಶ್ರಯದಲ್ಲಿ ಡಿಸೆ೦ಬರ್ ಒ೦ದರಿ೦ದ ಒ೦ದು ತಿ೦ಗಳಕಾಲ ನಡೆಯಲಿರುವ ಏಡ್ಸ್ ಅರಿವು ಸಪ್ತಾಹವನ್ನು ಬುಧವಾರದ೦ದು ಉಡುಪಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಹೇಮಲತಾರವರು ತೆ೦ಕನಿಡಿಯೂರು ಕಾಲೇಜಿನ ಸಭಾ೦ಗಣದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿದರು.

ಅಕ್ಕುಂಜೆಯ ಅಶ್ವಿ‌ನಿ... ಭಾರತದ ಕ್ರೀಡಾ ಬಾಂದಳದ ನವತಾರೆ....

ಉಡುಪಿ ಜಿಲ್ಲೆಯ ಕುಂದಾಪುರದ ತಾಲೂಕಿನ ಅಕ್ಕುಂಜೆಯ ಅಶ್ವಿ‌ನಿ ಶೆಟ್ಟಿ ಭಾರತದ ಕ್ರೀಡಾಲೋಕದಲ್ಲಿ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ; ಮಿಂಚಿನ ಸಂಚಲನ ಉಂಟುಮಾಡಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಮೂಡಿಬಂದ ಅವರ ಪ್ರತಿಭೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಂಡಿದೆ. ದಿಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ ಚೀನಾ ಏಶ್ಯಾಡ್‌ನ‌ಲ್ಲಿ ಚಿನ್ನ ಗೆದ್ದ ಕರ್ನಾಟಕದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಕಾಪು:ಮರದ ಕೊಂಬೆ ಬಿದ್ದು ಕಾರು- ಬೈಕ್- ರಿಕ್ಷಾಗಳು ಜಖಂ

ಕಾಪು;ನ,30. ಕಾಪು ಹೊಸ ಮಾರಿಗುಡಿಯ ಮುಂಭಾಗದಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಮರದಡಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ರಿಕ್ಷಾ, ಬೈಕ್‌ಗಳ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

 

ಹೊಸ ಮಾರಿಗುಡಿಯ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣಕ್ಕೆ ತಾಗಿ ಕೊಂಡಂತಿರುವ ಮರಗಳ ಅಡಿಯಲ್ಲಿ ಪ್ರತಿ ನಿತ್ಯವೂ ನೂರಾರು ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು

ಉಡುಪಿನಗರದಲ್ಲಿ ಎಸ್. ಕೆ. ಬೀಡಿ ವರ್ಕರ್ಸ್ ಫೆಡರೇಶನ್ ವತಿಯಿ೦ದ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಪ್ರತಿಭಟನೆ

ಉಡುಪಿ:ನ,30.1995 ರ ನಂತರ ಬೀಡಿ ಕೆಲಸಕ್ಕೆ ಸೇರಿ ನಿವೃತ್ತರಾಗುತ್ತಿರುವ ಬೀಡಿ ಕಾರ್ಮಿಕರಿಗೆ ಕೇವಲ 20 ರುಪಾಯಿ ಪಿಂಚಣಿ ನೀಡುತಿದ್ದು ಈ ಪಿಂಚಣಿ ದರವನ್ನು1500ರೂಪಾಯಿಗಳಿಗೆ ಏರಿಸಬೇಕೆಂದು ಒತ್ತಾಯಿಸಿ ಎಸ್ ಕೆ ಬೀಡಿ ವೊರ್ಕೆರ್ಸ್ ಫೆಡರೇಶನ್ ಇದರ ನೇತ್ರತ್ವದಲ್ಲಿ ನೂರಾರು ಬೀಡಿ ಕಾರ್ಮಿಕರು ಉಡುಪಿ ಡಯಾನ ವೃತ್ತ ಬಳಿಯಿರುವ ಕಾರ್ಮಿಕ ಭವಿಷ್ಯ ನಿಧಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.

ಡಿ.5ರ೦ದು ಈಶ್ವರಯ್ಯರಿಗೆ ಸಾರ್ವಜನಿಕ ಅಭಿನಂದಿನ ಕಾರ್ಯಕ್ರಮ

ಉಡುಪಿ: ಹಿರಿಯ ಕಲಾವಿಮರ್ಶಕ, ’ಉದಯವಾಣಿ’ಯ ನಿವೃತ್ತ ಮ್ಯಾಗಜಿನ್‌ ಸಂಪಾದಕ ಅನಂತಪುರ ಈಶ್ವರಯ್ಯ ಅವರನ್ನು ಉಡುಪಿಯ ಅಭಿಮಾನಿಗಳು ಡಿ.5ರಂದು ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಸಾರ್ವಜನಿಕವಾಗಿ ಅಭಿನಂದಿಸುವರು.


ಬೆಳಗ್ಗೆ 9ಕ್ಕೆ ಆರ್ಟಿಸ್ಟ್ ಫೋರಂ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಡಾ.ಎನ್‌.ಎ.ಮಧ್ಯಸ್ಥ, ಹಿರಿಯ ಉದ್ಯಮಿ ಪಿ.ರಬೀಂದ್ರ ನಾಯಕ್‌ ಉದ್ಘಾಟಿಸಲಿದ್ದಾರೆ. ಚಿತ್ರ ಕಲಾವಿದ ರಮೇಶ್‌ ರಾವ್‌ ಪ್ರಸ್ತಾವನೆಗೈಯಲಿದ್ದಾರೆ.

ಡಿ.1ರಿ೦ದ ಏಡ್ಸ್ ನಿಯ೦ತ್ರಣಾ ಕಾರ್ಯಕ್ರಮ:ಶಾಲಾ-ಕಾಲೇಜು ಮಟ್ಟದಲ್ಲಿ ಏಡ್ಸ್ ನಿಯ೦ತ್ರಣ ಜಾಗ್ರತಿ ಸಪ್ತಾಹವನ್ನು- ಜಿಲ್ಲೆಯಲ್ಲಿ 8ವರುಷದಲ್ಲಿ 436ಮ೦ದಿ ಬಲಿ

ಉಡುಪಿ:ನ,29. ಮು೦ದಿನ ತಿ೦ಗಳ ಡಿ.1ರಿ೦ದ ಏಡ್ಸ್ ಅರಿವು-ಮಾಹಿತಿ-ನೀಡುವುದರೊ೦ದಿಗೆ ಈ ಬಾರಿ ಉಡುಪಿಯಲ್ಲಿ ಏಡ್ಸ್ ನಿಯ೦ತ್ರಣಾ ಕಾರ್ಯಕ್ರಮವನ್ನು ಯುವ ಜನತೆ ಮತ್ತು ಎಚ್ ಐ ವಿ ನಿಯ೦ತ್ರಣ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಲಾಗುತ್ತಿದೆ.

 

ಜಿಲ್ಲೆಯಲ್ಲಿ ಕಳೆದ 2002-2010ನೇ ಸಾಲಿನವರೆಗೆ ಒಟ್ಟು16ಸಾವಿರ ಮ೦ದಿಯನ್ನು ಎಚ್ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ ಒಟ್ಟು486ಮ೦ದಿ ಈ ಕಾಯಿಲೆಯಿ೦ದ ಮ್ರತಪಟ್ಟಿದ್ದಾರೆ. ಈ ಬಾರಿ ಎಡ್ಸ್ ನಿಯ೦ತ್ರಣ ಕಾರ್ಯಕ್ರಮವನ್ನು ಶಾಲಾ-ಕಾಲೇಜು ಮಟ್ಟದಲ್ಲಿ ಜಾಗ್ರತಿಯ ಮಾಹಿತಿಯನ್ನು ನೀಡುವುದರೊ೦ದಿಗೆ ಏಡ್ಸ್ ನಿಯ೦ತ್ರಣ ಸಪ್ತಾಹವನ್ನು ನಡಸಲಾಗುತ್ತದೆ


Udupi hosts its first ever national level dragon b
View More

Now Open - Namma Minimart, Santhekatte - Kemmanunu Cross, - Call for Home Delivery 9611175167Now Open - Namma Minimart, Santhekatte - Kemmanunu Cross, - Call for Home Delivery 9611175167
Final Journey of Rosy Fernandes (85 years) | LIVE From KallianpuraFinal Journey of Rosy Fernandes (85 years) | LIVE From Kallianpura
Final Journey of Juliana Rodrigues (81 Years) | LIVE From ThottamFinal Journey of Juliana Rodrigues (81 Years) | LIVE From Thottam
Wee Care Play Home Badanidiyoor | 3rd Annual day CelebrationWee Care Play Home Badanidiyoor | 3rd Annual day Celebration
Lourdsachi Zar - December Issue from Our Lady of Lourdes church, Kanajar, Udupi.Lourdsachi Zar - December Issue from Our Lady of Lourdes church, Kanajar, Udupi.
Milarchi-Lara-from-Milagres-Cathedral-Kallianpur-January-2023-IssueMilarchi-Lara-from-Milagres-Cathedral-Kallianpur-January-2023-Issue
KPL Super League • Cricket | LIVE from KemmannuKPL Super League • Cricket | LIVE from Kemmannu
Milarchi Lara Bulletin - Monthi Fest Issue, September 2022Milarchi Lara Bulletin - Monthi Fest Issue, September 2022
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi