ಸ್ನೇಹದ ಕಡಲಲಲ್ಲಿ, ಉಡುಪಿಯ ಮಡಿಲಲ್ಲಿ

ನಯನ ಮನೋಹರ ನಿಸರ್ಗದ ಮಡಿಲಲ್ಲಿ ಸುಂದರ ಕನ್ಯೆಯಂತೆ ಪವಡಿಸಿರುವ ಉಡುಪಿಗೆ ಅರಬ್ಬೀ ಸಮುದ್ರ, ಪಶ್ಚಿಮ ಘಟ್ಟಗಳು ಶೋಭಾಯಮಾನವಾಗಿವೆ. ಮಲ್ಪೆ ಮೀನುಗಾರಿಕಾ ಬಂದರಾಗಿ ಭಾರೀ ಅಭಿವೃದ್ಧಿಯನ್ನು ಕಂಡಿದೆ. ಇನ್ನೊಂದೆಡೆ ಕಾಪು ದೀಪಸ್ತಂಭ ಅತ್ಯಾಕರ್ಷಕವಾಗಿದೆ. ಇವುಗಳನ್ನು ನೋಡುವುದೇ ಒಂದು ಸಂಭ್ರಮ.

ಮೊಬೈಲ್ ಮೂಲಕ ಚುನಾವಣೆ ಭಾಷಣ; ಎಚ್‌ಡಿಕೆ ಸ್ಟೈಲ್!

ಚುನಾವಣೆಯಲ್ಲಿ ಹಣ, ಹೆಂಡ ಹಂಚಿ, ಕಾಲಿಗೆ ಬಿದ್ದು ಮತಯಾಚನೆ ಮಾಡೋದು ಸಾಮಾನ್ಯ. ಆದರೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎನ್ನುವುದು ಹೊಸ ಪದ್ಧತಿ. ರೀತಿ ವಿನೂತನವಾಗಿ ಮತಯಾಚಿಸಿದವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

ಬನ್ನಿ, ಹೊಸವರ್ಷದಲ್ಲಿ ಸಮಯ ಸಾಧಕರಾಗೋಣ!

ಹೊಸದೊಂದು ಅರುಣೋದಯವಾಗುತ್ತಿದೆ. 2010 ದುಗುಡ ದುಮ್ಮಾನಗಳು ಕಳೆದು 2011 ಹಿಂದಿಗಿಂತ ಚೆನ್ನಾಗಿರಲಪ್ಪಾ, ಕಳೆದುಹೋದ ವರುಷದ ಒಳ್ಳೆಯ ಸಂಗತಿಗಳು ಮುಂದುವರಿಯಲಪ್ಪಾ ಎಂದು ನಾವು ನಂಬಿದ ದೇವರನ್ನು ಪ್ರಾರ್ಥಿಸುತ್ತಲೇ ಹೊಸ ಬೆಳಗು ಆರಂಭಿಸುತ್ತೇವೆ. ಅಂಥದ್ದೊಂದು ಪರ್ವ ಕಾಲದಲ್ಲಿ ಆತ್ಮೀಯ ಕ್ಷಣಗಳನ್ನೋ, ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತಹಾಹೊಸ ವರ್ಷದ ಶಪಥಗಳನ್ನೋ ಕೈಗೊಳ್ಳಲು ನಾವೆಲ್ಲಾ ಸಜ್ಜಾಗುತ್ತಿದ್ದೇವೆ.

ಇರಾಕಿ ಪ್ರಜೆಗೆ ಕೇರಳದಲ್ಲಿ ಹೃದಯ ಶಸÅ’ಚಿಕಿತ್ಸೆ

ಕೊಚ್ಚಿ : ಸಮರತ್ರಸ್ತ ಇರಾಕ್‌ನ 65 ಹರೆಯದ ವೃದ್ಧನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವೀ ಹೃದಯ ಶಸŒಚಿಕಿತ್ಸೆ ನಡೆಸುವ ಮೂಲಕ ಮರುಜನ್ಮ ನೀಡಿದೆ. ಇರಾಕಿ ಪ್ರಜೆಯ ಕ್ಯಾಲ್ಸಿಯಂ ಯುಕ್ತ ಹೃದಯ ಕವಾಟವನ್ನು ಕತ್ತರಿಸಿ ತೆಗೆದು ಭಾಗದಲ್ಲಿ ಕೃತಕ ಕವಾಟವನ್ನು ಜೋಡಿಸುವಲ್ಲಿ ವೈದ್ಯರ ತಂಡ ಯಶಸ್ಸು ಸಾಧಿಸಿದೆ.

2005ರ ಕ್ಯಾಲೆಂಡರ್‌ ಪುನರಾವರ್ತನೆ

ಇಂದೋರ್‌ : ಅಚ್ಚರಿ ಆದರೂ ನಿಜ, 2011ರಲ್ಲಿ 2005 ಕ್ಯಾಲೆಂಡರ್‌ ಯಥಾಪ್ರಕಾರವಾಗಿ ಪುನರಾವರ್ತನೆಯಾಗಿದೆ.

ಇನ್ನೂ ಬಗ್ಗೆ ನಂಬಿಕೆ ಬಾರದೇ ಇದ್ದಲ್ಲಿ, ಇವೆರಡು ವರ್ಷಗಳ ಕ್ಯಾಲೆಂಡರನ್ನು ಒಮ್ಮೆ ಗಮನಿಸಿದರೆ, ಎರಡೂ ವರ್ಷಗಳ ಕ್ಯಾಲೆಂಡರ್‌ನಲ್ಲಿ ಸಾಮ್ಯತೆ ಇರುವುದು ಗಮನಕ್ಕೆ ಬರುತ್ತದೆ.

ಕರಾವಳಿ ತೀರ ಪ್ರದೇಶಗಳಲ್ಲಿ ಕಾವಲು ಪಡೆಯ ಹದ್ದಿನ ಕಣ್ಣು

ಹೊಸ ವರ್ಷಾಚರಣೆಗೆ ಉಗ್ರರ ಭೀತಿ

ಅಂಕೋಲಾ:

ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ವಿದ್ವಂಸಕ ಕೃತ್ಯವನ್ನು ಎಸಗಲು ಉಗ್ರರು ಮುಂದಾಗಿದ್ದು, ಅವರು ಕರಾವಳಿ ತೀರ ಪ್ರದೇಶಗಳ ಮೂಲಕ ಒಳನುಗ್ಗಬಹುದಾದ ಸಾಧ್ಯತೆಗಳು ಇರುವುದರಿಂದಾಗಿ ಕರಾವಳಿ ಕಾವಲು ಪಡೆಯು ತೀವ್ರ ನಿಗಾ ವಹಿಸಿದ್ದು, ಹಿನ್ನೆಲೆಯಲ್ಲಿ ಬೋಟ್‌ಗಳು ಕೂಡ ಗಸ್ತು ಕಾಯುತ್ತಿವೆ

.

ದಕ್ಷಿಣ ಕನ್ನಡ: 3,300 ಪೊಲೀಸರ ನಿಯೋಜನೆ

ಮಂಗಳೂರು

: ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆಗಳಿಗೆ ಸಂಬಂಧಿಸಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸುಮಾರು 3300 ಮಂದಿ ಪೊಲೀಸರನ್ನು ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಬಂದೋಬಸ್ತು ವ್ಯವಸ್ಥೆಗಾಗಿ ನಿಯೋಜಿಸಲಾಗುವುದು ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| . ಸುಬ್ರಹ್ಮಣ್ಯೇಶ್ವರ ರಾವ್‌ ಅವರಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

.

ಬಾರ್ ಮಾಲಿಕರಿಂದ ಲಂಚ ಸ್ವೀಕರಿಸುತ್ತಿದ್ದ ಉಡುಪಿ ಅಬಕಾರಿ ನಿರೀಕ್ಷಕ ಲೋಕಾಯುಕ್ತರ ಬಲೆಗೆ

ಉಡುಪಿ:ಡಿ,29.ಬಾರ್ ಮಾಲಿಕರಿಂದ ಲಂಚ ಸ್ವೀಕರಿಸುತ್ತಿದ್ದ ಉಡುಪಿ ಅಬಕಾರಿ ನಿರೀಕ್ಷಕರಾದ ಹನುಮಂತಪ್ಪರವರು ಇ೦ದು (ಬುಧವಾರ) ಬೆಳಿಗ್ಗೆ  ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕೊಕ್ಕರ್ಣೆಯ  ಪ್ಯಾಲೆಸ್ ವೀವ್ ಬಾರ್ ಗೆ  ಹನುಮಂತಪ್ಪ  ಮತ್ತು ಸಿಬ್ಬಂದಿಗಳು ಎರಡು    ದಿನದ  ಹಿಂದೆ  ಭೇಟಿ ನೀಡಿ  ಪರಿಶೀಲನೆ ನಡೆಸಿದ್ದರು. ಪರವಾನಿಯಲ್ಲಿರುವಂತೆ  1ಕೌಂಟರ್ ನಲ್ಲಿ  ಮದ್ಯ ಮಾರುವ  ಮೊದಲು 3 ಕೌಂಟರ್ ನಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿತ್ತು.  ಇದನ್ನು ನೋಡಿದ ಹನುಮಂತಪ್ಪ ಲೆಡ್ಜರ್ ಮತ್ತು ಇತರ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು  ಮತ್ತು ಉಡುಪಿಯ ಕಛೇರಿಯಲ್ಲಿ ತಮ್ಮನ್ನು ಕಾಣುವಂತೆ ತಿಳಿಸಿದ್ದರು.

ನಿಟ್ಟೂರು ಪ್ರೌಢಶಾಲೆಯಲ್ಲಿ ಗ್ರಾಹಕ ಕ್ಲಬ್ ವತಿಯಿ೦ದ ರಾಷ್ಟ್ರೀಯ ಗ್ರಾಹಕ ದಿನಾಚರಣೆ

ಉಡುಪಿ:ಡಿ,29. ನಿಟ್ಟೂರು ಪ್ರೌಢಶಾಲೆಯಲ್ಲಿ ಗುರುವಾರದ೦ದು ರಾಷ್ಟ್ರೀಯ ಗ್ರಾಹಕ ದಿನಾಚರಣೆಯನ್ನು ವಿದ್ಯಾರ್ಥಿಗಳ ಜಾಥಾದಿಂದ ಆರಂಭಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ಹಿರಿಯ ಅಧ್ಯಾಪಕರಾದ ಶ್ರೀ ಭಾಸ್ಕರ್ ಡಿ. ಸುವರ್ಣ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು.

ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಅಖಿಲ್ ಕುಮಾರ್ ಹೆಗ್ಡೆ, ನ್ಯಾಯವಾದಿ, ಉಡುಪಿ ಇವರು ವಿದ್ಯಾರ್ಥಿಗಳಿಗೆ ದಿನದ ಮಹತ್ವ, ಗ್ರಾಹಕ ನ್ಯಾಯಾಲಯ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ಲಕ್ಷ್ಮೀಶ ಕಾರ್ಯಕ್ರಮ ನಿರ್ವಹಿಸಿ, ಶಾಹಿದಾ ಬಾನು ವಂದಿಸಿದರು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಶ್ರೀಮತಿ ಅನಸೂಯ ಕಾರ್ಯಕ್ರಮ ಸಂಯೋಜಿಸಿದರು.

ಡಿ.30ರಿ೦ದ ಡಿ.31ರ ರಾತ್ರೆ 9ಗ೦ಟೆಯವರೆಗೆ ಮದ್ಯ ಮಾರಾಟ ನಿಷೇಧಕ್ಕೆ ಜಿಲ್ಲಾಧಿಕಾರಿ ಆದೇಶ

ಉಡುಪಿ ಜಿಲ್ಲೆಯಾದ್ಯಂತ ಡಿಸೆಂಬರ್ 31ರಂದು ನಡೆಯುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಂಧರ್ಭದಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಪಾಲನೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತದಾನ ಹಾಗೂ ಮತ ಎಣಿಕೆ ಕಾರ್ಯಗಳು ಮುಕ್ತ ಹಾಗೂ  ನ್ಯಾಯಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸುವುದನ್ನು ಖಾತರಿಪಡಿಸುವ ದೃಷ್ಠಿಯಿಂದ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸುವುದು ಅಗತ್ಯವಾಗಿದ್ದು  ಅದ್ರಷ್ಠಿಯಿ೦ದ ಡಿ30ರ ಬೆಳಿಗ್ಗೆ 7ಗ೦ಟೆಯಿ೦ದ ಡಿ.31ರ ರಾತ್ರಿ 9ಗಂಟೆಯವರೆಗಿನ ಅವಧಿ ಮತ್ತು ದಿನಾಂಕ 4-01-11ರಂದು ಬೆಳಿಗ್ಗೆ 6ಗಂಟೆಯಿಂದ ದಿನಾಂಕ 5-01-11 ರಂದು ಬೆಳಿಗ್ಗೆ 6ಗಂಟೆಯವರೆಗಿನ ಅವಧಿಯನ್ನು ಮದ್ಯಪಾನ ನಿಷೇಧ ದಿನ (ಡ್ರೈಡೇಸ್) ಎಂದು ಘೋಷಿಸಿ ಈ ದಿನಗಳಲ್ಲಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು , ಮದ್ಯ ಮಾರಾಟ ಡಿಪೋಗಳನ್ನು, ಶೇಂದಿ ಡಿಪೋಗಳನ್ನು ಮುಚ್ಚಲು ಆದೇಶಿಸಲಾಗಿದೆ.

ವಿಮಾನ ದುರಂತ: ಸಂತ್ರಸ್ತರಿಗೆ ಸಮಾನ ಪರಿಹಾರಕ್ಕೆ ಆಗ್ರಹ

ಮಂಗಳೂರು: ಬಜಪೆಯಲ್ಲಿ ವರ್ಷದ ಮೇ 22ರಂದು ನಡೆದ ವಿಮಾನ ದುರಂತದ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ತಾರತಮ್ಯವೆಸಗದೆ ಸಮಾನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೇರಳ ರಾಜ್ಯ ಮುಸ್ಲಿಂ ಯೂತ್‌ಲೀಗ್‌ನ ಕಾಸರಗೋಡು ಜಿಲ್ಲಾ ಘಟಕ ಮಂಗಳೂರಿನ ಏರ್‌ ಇಂಡಿಯಾ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವ: ಸುನಂದಾ ಮೂಗನೂರು

ಗದಗ: ಉತ್ತಮ, ಸುಭದ್ರ, ಸಮƒದ್ಧ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುವುದರಿಂದ ಅದನ್ನರಿತು ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು ಎಂದು ಗದಗ ಜಿಲ್ಲಾ ಡಯಟ್‌ ಪ್ರಾಚಾಯೆì ಸುನಂದಾ ಮೂಗನೂರು ಹೇಳಿದರು.

ಅವರು ಗದಗ ತಾಲೂಕಿನ ಬಳಗಾನೂರು ಗ್ರಾವå ಚಿಕೆನಕೊಪ್ಪದ ಚೆನ್ನವೀರಶರಣರ ಡಿ.ಇಡಿ. ಕಾಲೇಜು , ಎನ್ನೆಸ್ಸೆಸ್‌ ಘಟಕಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಗದಗ ತಾಲೂಕು ಹಾಗೂ ಪೂರ್ವ ವಲಯ ಮಟ್ಟದ 2010-11ನೇ ಸಾಲಿನ ಯುವಜನೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕುದುರೆಮುಖದಲ್ಲಿ ಲಘು ಭೂಕಂಪ

ಚಿಕ್ಕಮಗಳೂರು: ಪಶ್ಚಿಮಘಟ್ಟ ಪ್ರದೇಶದ ಹೆಬ್ಟಾಗಿಲು ಕುದುರೆಮುಖ, ಮೂಡಿಗೆರೆ ಪರಿಸರದಲ್ಲಿ ಲಘು ಭೂಕಂಪ ಸಂಭವಿಸಿದೆ.

ಮಂಗಳವಾರ ರಾತ್ರಿ 10 ಗಂಟೆ ಸಮಯದಲ್ಲಿ ಸುಮಾರು 4 ರಿಂದ 5 ಸೆಕೆಂಡ್‌ ಕಾಲ ಭೂಮಿ ನಡುಗಿದ ಅನುಭವ ಸ್ಥಳೀಯರಲ್ಲಿ ಆಗಿದೆ.

ಬೈಯಪ್ಪನಹಳ್ಳಿಯಿಂದ ಸಿಎಂಎಚ್‌ ರಸ್ತೆವರೆಗೆ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರ

ಬೆಂಗಳೂರು :

ನಮ್ಮ ಮೆಟ್ರೋದ ಕನಸು ನನಸಾಗುವ‌ ಕಾಲ ಸನ್ನಿಹಿತವಾಗಿದ್ದು, ಸೋಮವಾರ ಮಧ್ಯಾಹ್ನ ಬೈಯಪ್ಪನಹಳ್ಳಿಯಿಂದ ಸಿಎಂಎಚ್‌ ರಸ್ತೆಯ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರ ನಡೆಯಿತು.

ಒಂದು ಬೋಗಿ ಇದ್ದ ಮೆಟ್ರೋ ರೈಲಿನ ಇಂಜಿನ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಬೈಯಪ್ಪನಹಳ್ಳಿಯಿಂದ ಸಿ.ಎಂ.ಎಚ್‌ ರಸ್ತೆಯ ಇಂದಿರಾನಗರ ನಿಲ್ದಾಣದವರೆಗೆ ಓಡಿಸಲಾಯಿತು. ಮೊದಲ ದಿನದ ಪ್ರಾಯೋಗಿಕ ಓಡಾಟ ಯಶಸ್ವಿಯಾಗಿದ್ದು, ಮಂಗಳವಾರದಿಂದ ಒಂದು ವಾರ ಹಂತ ಹಂತವಾಗಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರವನ್ನು ಎಂ.ಜಿ.ರಸ್ತೆಯವರೆಗೆ ವಿಸ್ತರಿಸಲಾಗುತ್ತದೆ. ರೈಲು ಓಡಾಟದ ಸಂದರ್ಭದಲ್ಲಿ ಎದುರಾಗುವ ತಾಂತ್ರಿಕ ದೋಷಗಳು ಹಾಗೂ ಇನ್ನಿತರ ಸಮಸ್ಯೆಗಳನ್ನು ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ

.

ಮದ್ಯ ಸೇವನೆ ಶೇ.20 ರಷ್ಟು ಹೆಚ್ಚಳಚಳಿಗೆ ಹೈಕಿಕ್‌-ಅಬಕಾರಿ ಇಲಾಖೆಗೆ ಸುಗ್ಗಿ

ಬೆಂಗಳೂರು: ಚಳಿ ತಾಳಲಾರದೇ ಜನ ಕೆಮ್ಮು ನೆಗಡಿಯಿಂದ ಬಳಲುತ್ತಿದ್ದರೆ ಹೊಟ್ಟೆ ತುಂಬ ಗುಂಡು ಹಾಕಿಕೊಂಡು ನಮಗೆ ಚಳಿಯ ಗಂಧವೇ ಗೊತ್ತಿಲ್ಲ ಎಂದು ಗುಂಡು ಪಾರ್ಟಿಗಳು ಮುಗುಳ್ನಗೆ ಬೀರುತ್ತಿದ್ದಾರೆ.

ತಲೆಗೆ ಎಣ್ಣೆ ಹಾಕಿದರೆ ಪ್ರಯೋಜನವಿಲ್ಲ, ಚಳಿ ತಡೆದುಕೊಳ್ಳಬೇಕಾದರೆ ಹೊಟ್ಟೆಗೆ ಹಾಕುವ ಗುಂಡು ಪ್ರಮಾಣ ಹೆಚ್ಚಿಸುವುದೇ ಲೇಸು ಎಂದು ತಿಳಿದು ಮದ್ಯಪಾನ ಸೇವನೆ ಪ್ರಮಾಣ ಹೆಚ್ಚಿಸಿಕೊಂಡಿದ್ದಾರೆ. ಸಾವಿರಾರು ಕೋಟಿ ಆದಾಯ ನಿರೀಕ್ಷೆಯಲ್ಲಿರುವ ಅಬಕಾರಿ ಇಲಾಖೆಯ ಆರೋಗ್ಯ ಕಾಪಾಡುತ್ತಿದ್ದಾರೆ!

ಕೇ೦ದ್ರಸರಕಾರ ನೆರೆ ಸ೦ತ್ರಸ್ತರಿಗೆ ಮನೆಕಟ್ಟಲು ನೀಡಿದ 1,600ರೂ ಎಲ್ಲಿಗೆ ಹೋಯಿತು? ಚುನಾವಣೆ ಬ೦ದಾಗ ಸಮಾಜೋತ್ಸವ ನಡೆಸುವ ಬಿ.ಜೆ.ಪಿಗೆ ಜನ ಸರಿಯಾದ ಪಾಠ ಕಲಿಸಲಿದ್ದಾರೆ;ಜನಾರ್ಧನ ಪೂಜಾರಿ

ರಾಜ್ಯದಲ್ಲಿನ  ಯಡಿಯೂರಪ್ಪರವರ ನೇತ್ರತ್ವದ ಬಿ.ಜೆ.ಪಿ ಸರಕಾರವು ಭ್ರಷ್ಟಾಚಾರ-ಹಗರಣಗಳಿ೦ದ ಕೂಡಿದೆ. ಪಕ್ಷದಲ್ಲಿ ಮುಖ೦ಡರು ಇದ್ದರೂ ಇಲ್ಲದವರ೦ತಾಗಿದೆ. 2ವರುಷದಲ್ಲಿ ಬಿ.ಜೆ.ಪಿ ಸಾಧನೆ ಭ್ರಷ್ಟಾಚಾರವೇ ಹೊರತು ಅಭಿವ್ರದ್ದಿಯಲ್ಲ. ಕೇ೦ದ್ರದಿ೦ದ ನೆರೆ ಸ೦ತ್ರಸ್ಥರಿಗೆ ಮನೆಕಟ್ಟು ನೀಡಿದ ಹಣವನ್ನು ರಾಜ್ಯ ಸರಕಾರವು ಯಾವುದೇ ಮನೆಯನ್ನು ಕಟ್ಟಲು ಉಪಯೋಗಿಸದೇ ಜನರಿಗೆ ವ೦ಚನೆ ಮಾಡಿದೆ. ಈ ತಾಲೂಕು ಮತ್ತು ಜಿಲ್ಲಾ ಪ೦ಚಾಯ್ತ್ ಚುನಾವಣೆಯನ್ನು ಜನ ಬಿ.ಜೆ.ಪಿಗೆ ತಕ್ಕ ಪಾಠಕಲಿಸಲಿದ್ದಾರೆ೦ದು ಕಾ೦ಗ್ರೆಸ್ ಪಕ್ಷದ ಹಿರಿಯ ಮುಖ೦ಡರು, ಮಾಜಿಸಚಿವ ಜನಾರ್ಧನಪೂಜಾರಿ ತಿಳಿಸಿದ್ದಾರೆ.
ಅವರು ಮ೦ಗಳವಾರದ೦ದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದ್ದಾರೆ.

ಮಾದಕ ದ್ರವ್ಯವನ್ನು ತ್ಯಜಿಸಲು ಕರೆ

ಮಂಗಳೂರು: ಸಮಾಜದಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವಲ್ಲಿ ಔಷಧ ವಿಜ್ಞಾನ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾತ್ರ ವಹಿಸಬೇಕು ಎಂದು .. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| . ಆರ್‌. ಶ್ರೀರಂಗಪ್ಪ ಹೇಳಿದರು.

ಬಂತು -ಬಂತು ಕಾಫಿ ಒಣಗಿಸುವ ಯಂತ್ರ

ಸೋಮವಾರಪೇಟೆ,:ಸೋಮವಾರದಂದು ಇಲ್ಲಿನ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಕಾಫಿ ಬೀಜವನ್ನು ಒಣಗಿಸಲು ನೂತನವಾಗಿ ಆವಿಷ್ಕಾರಗೊಂಡ ಕಾಫಿ ಡ್ರೈಯರ್‌ ಯಂತ್ರದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.

ಜೆಟ್‌ ಏರ್‌ವೆàಸ್‌ ಚಾಲಕರ ವಿಚಾರಣೆ

ಹೊಸದಿಲ್ಲಿ : ನಿಗದಿತ ಮಿತಿಗಿಂತಲೂ ಅಧಿಕ ಸಿಗರೇಟ್‌ಗಳನ್ನು ಹೊಂದಿದ್ದಾರೆಂಬ ಆಪಾದನೆಯ ಮೇಲೆ ಜೆಟ್‌ ಏರ್‌ವೆàಸ್‌ನ ನಾಲ್ಕು ಮಂದಿ ಚಾಲನಾ ಸಿಬಂದಿಯನ್ನು ಲಂಡನ್‌ ಹೀತೂÅ ವಿಮಾನ ನಿಲ್ದಾಣದಲ್ಲಿ ಕಸ್ಟಮ್‌ ಅಧಿಕಾರಿಗಳು ಬಂಧಿಸಿದ್ದರು.

ಮತ್ತೊಂದು ವಿವಾದದಲ್ಲಿ ರೆಡ್ಡಿ; 87 ಕೋಟಿ ರೂ. ತೆರಿಗೆ ವಂಚನೆ

ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಒಬಳಾಪುರಂ ಮೈನಿಂಗ್ ಕಂಪನಿ ಸುಮಾರು 87 ಕೋಟಿ ರೂಪಾಯಿ ತೆರಿಗೆ ವಂಚಿಸಿರುವ ಅಂಶ ಇದೀಗ ಕೇಂದ್ರ ಆದಾಯ ತೆರಿಗೆ ಇಲಾಖೆ ವರದಿಯಲ್ಲಿ ಬಹಿರಂಗಗೊಳ್ಳುವ ಮೂಲಕ ರೆಡ್ಡಿ ಸಹೋದರರು ಮತ್ತು ಸಚಿವ ಬಿ.ಶ್ರೀರಾಮುಲು ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಂತಾಗಿದೆ.

ಈಗಾಗಲೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಆಂಧ್ರಪ್ರದೇಶದಲ್ಲಿ ತನಿಖೆ ನಡೆಸುತ್ತಿದೆ. ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ರಾಜ್ಯದಲ್ಲಿಯೂ ನಡೆಸುತ್ತಿದ್ದಾರೆಂಬ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ವಿವರಣೆ ಕೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.


Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi